ಕೊಪ್ಪಳ: ಶಾಲೆಯಲ್ಲಿ ಸರ್ಕಾರವು ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ಪ್ರಾರಂಭಿಸಿದೆ. ಇದಕ್ಕೆ ಅನೇಕ ಪರ - ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಆದರೆ ಮಗನಿಗೆ ಶಾಲೆಯಲ್ಲಿ ಮೊಟ್ಟೆ ನೀಡುತ್ತಾರೆಂದು ಟಿ.ಸಿ ಯನ್ನು ವಾಪಸ್ ಪಡೆದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ವೀರಣ್ಣ ಮಗನ ಟಿ.ಸಿ ಪಡೆದು ಖಾಸಗಿ ಶಾಲೆಗೆ ಸೇರಿಸಿದ್ದಾರೆ. "ನಾವು ಬಸವ ಧರ್ಮದ ಆರಾಧಕರು. ನನ್ನ ಮಗ ಒಂದೆರಡು ದಿನ ಮೊಟ್ಟೆ ತಿನ್ನದೆ ಬಿಡಬಹುದು. ಬಳಿಕ ಮೊಟ್ಟೆ ತಿನ್ನೋದನ್ನು ಕಲಿತು ಮನೆಯಲ್ಲಿ ಮಾಡಿಕೊಡಿ ಎಂದರೆ ಏನು ಮಾಡಬೇಕು" ಎಂದು ಪ್ರಶ್ನಿಸಿದ್ದಾರೆ.
ಈ ರೀತಿಯಾಗಿ ಸರ್ಕಾರ ಮೊಟ್ಟೆ ಕೊಡುವ ಯೋಜನೆಗೆ ಸ್ಬಾಮೀಜಿಗಳು, ಕೆಲವು ಮಕ್ಕಳ ಪೋಷಕರು ತೀವ್ರವಾಗಿ ವಿರೋಧಿಸುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದೆ.