ವಿವೇಕಾನಂದ ಕಾಲೇಜಿನಲ್ಲಿ ಎಂಬಿಎ ಕೋರ್ಸ್ ಬಗ್ಗೆ ಮಾಹಿತಿ ಕಾರ್ಯಾಗಾರ

Upayuktha
0


ಪುತ್ತೂರು: ಪ್ರಸ್ತುತ ಉದ್ಯೋಗ ಕ್ಷೇತ್ರದಲ್ಲಿ ಎ.ಬಿಂ.ಎ. ಪಡೆದ ವಿದ್ಯಾರ್ಥಿಗಳಿಗೆ ಬಹಳ ಬೇಡಿಕೆ ಇದೆ. ಎ.ಬಿಂ.ಎ. ಪದವಿ ಕಾರ್ಪೊರೇಟ್ ಜಗತ್ತಿಗೆ ಗುಣಮಟ್ಟದ ಮ್ಯಾನೇಜರ್ ಅನ್ನು ಪೂರೈಕೆ ಮಾಡುತ್ತದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ ಹೇಳಿದರು.


ಅವರು ಕಾಲೇಜಿನ ಐಕ್ಯೂಎಸಿ ಘಟಕ ಮತ್ತು ವಾಣಿಜ್ಯ ವಿಭಾಗ ಹಾಗೂ ವಿವೇಕಾನಂದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ 'ಎಂ.ಬಿ.ಎ. ಓರಿಯೆಂಟೇಶನ್ ಪ್ರೋಗ್ರಾಮ್' ಅನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ನಿರ್ದೇಶಕ ಡಾ. ಸೇಖರ್ ಅಯ್ಯರ್ ಮಾತನಾಡಿ ಎ.ಬಿಂ.ಎ. ಕೋರ್ಸ್ ವಿದ್ಯಾರ್ಥಿಯ ಜ್ಞಾನ, ಕೌಶಲ್ಯ ಹಾಗೂ ಮನೋಸ್ಥೈರ್ಯವನ್ನು ಬೆಳೆಸಿ ಸರ್ವತೋಮುಖ ಅಭಿವೃದ್ಧಿಗೆ ಬಹಳ ಸಹಕಾರಿಯಾಗಿದೆ ಎಂದು ತಿಳಿಸಿದರು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಿವೇಕಾನಂದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್‌ನ ಸಹಾಯಕ ಪ್ರಾಧ್ಯಾಪಕ ಪ್ರೊಫೆಸರ್ ಆಶ್ಲೇ 'ಡಿಸೋಜ ಬಿ.ಕಾಂ. ವಿದ್ಯಾರ್ಥಿಗಳಿಗೆ ಎ.ಬಿಂ.ಎ. ಕೋರ್ಸ್ ನ ಸೇರ್ಪಡೆ ಎದುರಿಸಬೇಕಾದ ಎಂಟ್ರೆನ್ಸ್ ಎಕ್ಸಾಮ್, ಅದರಲ್ಲಿ ಬರುವ ವಿಷಯಗಳು, ಉದ್ಯೋಗ ಕ್ಷೇತ್ರದಲ್ಲಿ ಎ.ಬಿಂ.ಎ. ಕೋರ್ಸ್ ನ ಮಹತ್ವದ ಬಗ್ಗೆ ವಿವರಿಸಿದರು.


ಎ.ಬಿಂ.ಎ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರ್ವಹಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top