|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಚಯ: ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಸೋದರಿಯರು; ಕುಮಾರಿ ಹೇಮಸ್ವಾತಿ ಮತ್ತು ದೇವಿಕಾ ಕುರಿಯಾಜೆ

ಪರಿಚಯ: ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಸೋದರಿಯರು; ಕುಮಾರಿ ಹೇಮಸ್ವಾತಿ ಮತ್ತು ದೇವಿಕಾ ಕುರಿಯಾಜೆ



ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯುವ ಮಹಿಳಾ ಕಲಾವಿದರು ಕಾಣಲು ಸಿಗುತ್ತಾರೆ. ಇಂತಹ ಅನೇಕ ಮಹಿಳಾ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಯುವ  ಮಹಿಳಾ ಕಲಾವಿದೆಯರು ಕುಮಾರಿ ಹೇಮಸ್ವಾತಿ ಹಾಗೂ ದೇವಿಕಾ ಕುರಿಯಾಜೆ.


ಕುಮಾರಿ ಹೇಮಸ್ವಾತಿ ಅವರು ದಿನಾಂಕ 15.05.2003 ರಂದು ಹಾಗೂ 11.12.2004 ರಂದು ದೇವಿಕಾ ಕುರಿಯಾಜೆ ಅವರು ಶ್ರೀಮತಿ ವಸಂತಲಕ್ಷ್ಮೀ ಹಾಗೂ ಶ್ರೀಯುತ ಉದಯಶಂಕರ ಇವರ ಮಕ್ಕಳಾಗಿ ಜನನ.




ಕುಮಾರಿ ಹೇಮಸ್ವಾತಿ:-

ತಂದೆ ಶ್ರೀಯುತ ಉದಯಶಂಕರ ಅವರ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದ ಇವರು ಯಕ್ಷಗಾನ ರಂಗದಲ್ಲಿ 3 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ. ಪದ್ಯಾಣ ಗಣಪತಿ ಭಟ್ ಇವರ ಯಕ್ಷಗಾನ ಗುರುಗಳು. ಯಕ್ಷರಂಗ ಬೆಳ್ಳಾರೆ ಮಕ್ಕಳ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ.


ಜಾಂಬವತಿ ಕಲ್ಯಾಣ, ಕೃಷ್ಣ ಲೀಲೆ ಕಂಸ ವಧೆ, ಸುದರ್ಶನ ವಿಜಯ ಇವರ ನೆಚ್ಚಿನ ಪ್ರಸಂಗಗಳು.ರೇವತಿ, ವಿಜಯನಗರಿ, ವಾಸಂತಿ, ಹಿಂದೋಳ, ಇತ್ಯಾದಿ ಇವರ ನೆಚ್ಚಿನ ರಾಗಗಳು. ಶಂಕರನಾರಾಯಣ ಪದ್ಯಾಣ, ಶ್ರೀಧರ ವಿಟ್ಲ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು.ಯಕ್ಷಗಾನದಲ್ಲಿ ವೇಷ ಮಾಡುವ ಆಸಕ್ತಿ ಇದೆ ಎಂದು ಹೇಮಸ್ವಾತಿ ಅವರು ಹೇಳುತ್ತಾರೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-

ಕೊರೊನ ಸಂಕಷ್ಟದಿಂದ ಹೊರಬಂದು ಎಲ್ಲಾ ಕಲಾವಿದರಿಗೂ ಕ್ಷೇಮವಾಗಲಿ.


ಯಕ್ಷಗಾನದ ರಂಗದ ಮುಂದಿನ ಯೋಜನೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯುವ ಪೀಳಿಗೆಗೆ ಸ್ವಲ್ಪ ಆಸಕ್ತಿ ಕಡಿಮೆ ಅನಿಸುತ್ತಿದೆ. ಓದಿನ ಜೊತೆಗೆ ಹವ್ಯಾಸವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರೆಯುವ ಯೋಜನೆ ಎಂದು ಹೇಳುತ್ತಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಯಕ್ಷಗಾನ ವೇಷದಲ್ಲಿ ಜಿಲ್ಲೆಗೆ ಪ್ರಥಮ (ಪ್ರತಿಭಾ ಕಾರಂಜಿ), ವಿಜ್ಞಾನ ಮಾದರಿ 7 ನೆಯಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಿಕೆ, ಪಾತ್ರಭಿನಯದಲ್ಲಿ ರಾಜ್ಯಕ್ಕೆ ದ್ವಿತೀಯ, ಹವ್ಯಕ ಪಲ್ಲವ ಪುರಸ್ಕಾರ, ಇತ್ಯಾದಿ ಇವರಿಗೆ ಸಿಕ್ಕಿರುವ ಪ್ರಶಸ್ತಿಗಳು. Wall Painting ಇತ್ಯಾದಿ ಇವರ ಹವ್ಯಾಸಗಳು.


ಜನವರಿ ೨೬ ರಂದು ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ದೆಹಲಿಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದ ರಾಷ್ಟ್ರೀಯ ತಂಡಕ್ಕೆ ಹೇಮಸ್ವಾತಿ ಅವರು ಆಯ್ಕೆಯಾಗಿದ್ದಾರೆ.


ದೇವಿಕಾ ಕುರಿಯಾಜೆ:-

ದ್ವಿತೀಯ ಪಿ.ಯು.ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಹೆತ್ತವರ ಪ್ರೋತ್ಸಾಹದಿಂದ ಯಕ್ಷಗಾನ ರಂಗಕ್ಕೆ ಬಂದರು.ಕುಮಾರ ಸುಬ್ರಹ್ಮಣ್ಯ ವಳಕುಂಜ ಇವರ ಯಕ್ಷಗಾನ ಗುರುಗಳು.


ಜಾಂಬವತಿ ಕಲ್ಯಾಣ, ಶಶಿಪ್ರಭ ಪರಿಣಯ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ಪದ್ಯಾಣ ಗಣಪತಿ ಭಟ್ ಇವರ ನೆಚ್ಚಿನ ಭಾಗವತರು. ಚೈತನ್ಯ ಪದ್ಯಾಣ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು. ಯಕ್ಷಗಾನ ರಂಗದಲ್ಲಿ ವೇಷ ಮಾಡುವ ಆಸಕ್ತಿ ಇದೆ ಎಂದು ದೇವಿಕಾ ಅವರು ಹೇಳುತ್ತಾರೆ.


ಯಕ್ಷಗಾನ ನಾಟ್ಯ ಕಲಿಯುವಿಕೆ ಪ್ರಾರಂಬಿಸಿದ್ದು ಇವರು 8 ನೇ ತರಗತಿಯಲ್ಲಿರುವಾಗ.ಅಂದರೆ ಒಟ್ಟು ಯಕ್ಷಗಾನ ರಂಗದಲ್ಲಿ 3 ರಿಂದ 4 ವರ್ಷಗಳ ಅನುಭವ ಇವರದು.ವಾಸುದೇವ ರೈ ಬೆಳ್ಳಾರೆ ಇವರ ಗುರುಗಳು. ಶಶಿಪ್ರಭೆ, ಸೀತೆ, ರಾಮ, ಲಕ್ಷ್ಮೀ, ಭೂದೇವಿ, ಮಾಯಾ ಪೂತನಿ, ಕಂಸ ಇವರು ಮಾಡಿರುವ ವೇಷಗಳು.


ಯಕ್ಷಗಾನ ರಂಗದ ಮುಂದಿನ ಯೋಜನೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯುವ ಪೀಳಿಗೆಗೆ ಸ್ವಲ್ಪ ಆಸಕ್ತಿ ಕಡಿಮೆ ಅನಿಸುತ್ತಿದೆ. ಓದಿನ ಜೊತೆಗೆ ಹವ್ಯಾಸವಾಗಿ ಮುಂದುವರಿಯುವುದು ಯೋಜನೆ ಎಂದು ಹೇಳುತ್ತಾರೆ.


ಸಂಗೀತ, ಭರತನಾಟ್ಯ, wall painting, ಯಕ್ಷಗಾನ ನಾಟ್ಯ ಇವರ ಹವ್ಯಾಸಗಳು.ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಯಕ್ಷಗಾನ ತಂಡದಲ್ಲಿ ಜಾಂಬವತಿ ಕಲ್ಯಾಣ ಪ್ರಸಂಗದ ಜಾಂಬವ ಪಾತ್ರಕ್ಕೆ ತೃತೀಯ ಬಹುಮಾನ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಪುತ್ತೂರಿನಲ್ಲಿ ನಡೆದ ಜಿಲ್ಲಾ ಮಟ್ಟದ  ಯಕ್ಷಗಾನದಲ್ಲಿ ಜಾಂಬವತಿ ಕಲ್ಯಾಣ ಪ್ರಸಂಗದ ಜಾಂಬವತಿ ಪಾತ್ರಕ್ಕೆ ಪ್ರಥಮ ಬಹುಮಾನ ಸಿಕ್ಕಿರುತ್ತದೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم