ಮೈಸೂರು: ಹೊಸ ವರ್ಷದ ಆಚರಣೆಗೆ ಮೈಸೂರು ಅರಮನೆ ಸಜ್ಜಾಗುತ್ತಿದೆ. ಈ ಬಾರಿ ವಿಶೇಷ ರೀತಿಯಲ್ಲಿ ನ್ಯೂ ಇಯರ್ ಆಚರಿಸಲು ಎಲ್ಲಾ ಮಾರ್ಪಾಡು ಮಾಡುತ್ತಿದೆ. ವಿಶೇಷವೆಂದರೆ ಹೊಸ ವರ್ಷದ ಸಂಭ್ರಮಕ್ಕೆ ಮೈಸೂರಿನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ.
ಅರಮನೆಯಲ್ಲಿ ಡಿಸೆಂಬರ್ 25 ರಿಂದ ಜನವರಿ 2 ರವರೆಗೆ ಒಟ್ಟು 9 ದಿನ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8.30 ರವರೆಗೆ ಕೋವಿಡ್ ನಿಯಮಾವಳಿಯನ್ನು ಅನುಸರಿಸಿ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಇಲ್ಲಿ ಸುಮಾರು 1 ಲಕ್ಷ ವಿವಿಧ ಬಗೆಯ ಹೂವುಗಳನ್ನು ಅನಾವರಣಗೊಳಿಸಲಾಗುತ್ತದೆ. ಅಲ್ಲದೆ 32 ಜಾತಿಯ ಹೂವಿನ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಮತ್ತು ರಾಮಮಂದಿರ, ಚಾಮುಂಡೇಶ್ವರಿ, ನಂದಿ ಮತ್ತು ಮಹಿಷಾಸುರ ಮಾದರಿ ನಿರ್ಮಾಣ ಕೂಡ ಮಾಡಲಾಗುತ್ತದೆ.