"ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ನಾನದನ್ನು ಪಡೆದೇ ತೀರುತ್ತೇನೆ ಎಂದು ಹಠ ತೊಟ್ಟ ಬಾಲ ಗಂಗಾಧರ ತಿಲಕ್, ಜನರ ಹೋರಾಟ ಹಾದಿಗೆ ಭದ್ರಬುನಾದಿ ಹಾಕಿ ಕೊಟ್ಟವರು" ಎಂದು ಎನ್.ಎಸ್.ಎಸ್ ನ ಸ್ವಯಂ ಸೇವಕ ಯಕ್ಷಿತ್ ಎ. ಬಿ. ಹೇಳಿದರು.
ಶ್ರೀ. ಧ. ಮಂ ಕಾಲೇಜಿನ ಎನ್.ಎಸ್.ಎಸ್ ಘಟಕವು 'ಆಜಾದಿ ಕಾ ಅಮೃತ್ ಮಹೋತ್ಸವ್' ಅಂಗವಾಗಿ ಆಯೋಜಿಸಿದ್ದ '75 ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸಾಧಕರು' ಉಪನ್ಯಾಸ ಮಾಲಿಕೆಯ 17ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ತಿಲಕರು ಅಂದು ಬಿತ್ತಿದ್ದ ಸ್ವರಾಜ್ಯದ ಬೀಜ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆದು ನಿಂತಿದ್ದು, ಅದರ ನೆರಳಲ್ಲಿ ನಾವಿದ್ದೇವೆ. ಅವರು ಹಾಕಿಕೊಟ್ಟ ಹಾದಿ ಹಲವು ಸ್ವಾತಂತ್ರ್ಯ ಹೋರಾಟಗಾರರಿಗೆ ದಾರಿದೀಪವಾಗಿದೆ' ಎಂದರು.
'ನಾವಿಂದು ವಿದ್ಯಾವಂತ ಅಜ್ಞಾನಿಗಳಾಗುತ್ತಿದ್ದೇವೆ..! ಬರೀ ಜ್ಞಾನದಿಂದಷ್ಟೇ ಫಲ ದೊರೆಯುವುದಿಲ್ಲ, ಕಾರ್ಯ ಸಾಧನೆ ಮುಖ್ಯ' ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅರ್ಥ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಮಹೇಶ್ ಕುಮಾರ್ ಶೆಟ್ಟಿ ಮಾತನಾಡಿ 'ಸ್ವಾತಂತ್ರ್ಯ ಹಲವರ ಹೋರಾಟದ ಫಲ, ಅದನ್ನು ನೆನಪಿಸುವ ಎನ್.ಎಸ್.ಎಸ್.ನ ಕಾರ್ಯ ಮೆಚ್ಚುಗೆಗೆ ಅರ್ಹ' ಎಂದು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್.ನ ಯೋಜನಾಧಿಕಾರಿ ಡಾ.ಲಕ್ಷ್ಮಿನಾರಾಯಣ ಕೆ.ಎಸ್ ಹಾಗೂ ದೀಪಾ ಆರ್.ಪಿ. ಉಪಸ್ಥಿತರಿದ್ದರು. ಸ್ವಯಂಸೇವಕಿ ಶ್ರಾವ್ಯ ಸ್ವಾಗತಿಸಿದರು. ವಂದನಾ ವಂದಿಸಿ, ತುಳಸಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ