ಉಜಿರೆ: ''ಹೊರಜಗತ್ತು ಹೂಹಿಸಲಾಗದ ಸ್ಪರ್ಧಾತ್ಮಕದಿಂದ ಕೂಡಿದೆ ನಿರಂತರ ಪ್ರಯತ್ನಗಳ ಮೂಲಕ ಸವಾಲುಗಳನ್ನು ಎದುರಿಸಿ. ಅಂಕದ ಜೊತೆಗೆ ಕೌಶಲ್ಯತೆ ಗಳನ್ನು ಬೆಳೆಸಿಕೊಳ್ಳಿ" ಎಂದು 'ಸ್ಟಾರ್ ಆಫ್ ಮೈಸೂರು' ಇವ್ನಿಂಗ್ ಇಂಗ್ಲಿಷ್ ಪತ್ರಿಕೆಯ ಉಪಸಂಪಾದಕರಾಗಿರುವ ಸಂಹಿತಾ ಮೈಸೂರೆ ಅಭಿಪ್ರಾಯಪಟ್ಟರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ನಡೆದ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. "ಕಾಲೇಜು ಹಂತಗಳಲ್ಲಿ ಮಾಡುವ ಪ್ರತಿಯೊಂದು ಪ್ರಯೋಗ ಮತ್ತು ಪ್ರಯತ್ನಗಳು ಭವಿಷ್ಯದ ಯಶಸ್ಸಿಗೆ ಅಡಿಪಾಯವಾಗುತ್ತದೆ. ಇರುವ ಸಂಪನ್ಮೂಲಗಳನ್ನು ಕ್ರಿಯಾತ್ಮಕವಾಗಿ ಬಳಸಿಕೊಳ್ಳಿ. ಅಂಕಗಳೊಂದಿಗೆ ಕೌಶಲ್ಯತೆಗಳನ್ನು ಬೆಳೆಸಿಕೊಳ್ಳಿ, ಸೃಜನಶೀಲ ಕೌಶಲ್ಯ ಗಳು ಮಾತ್ರ ಹೊರ ಪರಿಸರದಲ್ಲಿ ನೆಲೆಯಾಗಲು ಸಾಧ್ಯ" ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿಭಾಗದ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕರಾದ ಶ್ರುತಿ ಜೈನ್ ನಿರೂಪಿಸಿ ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ