ಕವನ: ಪ್ರೀತಿಯೆಂಬ ವ್ಯವಹಾರ

Arpitha
0
ಇತ್ತೀಚೆಗೆ ಪ್ರೀತಿ ದಂಧೆಯಂತೆ
ವ್ಯವಹಾರದ ಒಂದು ಮಾಧ್ಯಮವಂತೆ
ಅಲ್ಲಿ ಭಾವನೆಯೆಂಬ ಅವಶೇಷಯೇಕೆ
ದಯೆ ಅನುಕಂಪವೆಂಬ ಲೆಕ್ಕ ಪತ್ರಗಳೇಕೆ

ಹಣವಿದ್ದರೆ ನನ್ನವಳು
ನನ್ನವನಿಗೆ ಹಣದ ಅಮಲು
ಕೊರಗಿದರು ಕರಗಿದರು ಸ್ವಾರ್ಥಿಯವನು ನನ್ನೆದುರು
ಇನ್ನು ನಾ ಎಂದಿಗೂ ಸೇರಲಾರೆ ಅವನ ಪಾಲು

ಮೊದಮೊದಲ ಪ್ರೀತಿ 
ಜೇನ ಸವಿ ಸಾಗರ
ಹಣವೇ ಮಾನದಂಡವಾದ ಆ ಪ್ರೀತಿ
ಇತ್ತೀಚೆಗೆ ದುಃಖ ಕಣ್ಣೀರಿದ್ದೇ ಆಗರ

ಸಂಬಂಧವೇ ಇಂದು  ತಂತ್ರಜ್ಞಾನ
ಇದೇನ್ ಬದನೆಕಾಯಿ ಪ್ರೀತಿ ಪ್ರೇಮ
ವಿಶಾಲ ಜಗತ್ತ ಕಣ್ತೆರೆದು ನೋಡು
ನಿನಗಾಗಿ ನೀ ಬದುಕಿ ನೋಡು

ಆಗ........ಬದುಕೆಷ್ಟು ಸುಂದರ
ಸಾಧಿಸು ಆಗುವಂತೆ ತೃಪ್ತಿಕರ
ಬೇಡಬಿಡು ಆತುರದ ನಿರ್ಧಾರ
ಬದುಕು ಒಂದೇ ಜೀವಿಸು ವಿಭಿನ್ನ ಥರ

- ಅರ್ಪಿತಾ ಕುಂದರ್



Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top