ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಛೇರಿಗೆ ಸ್ವಂತ ಕಛೇರಿ ಬೇಕು: ಮೂಡಾ ಅಧ್ಯಕ್ಷರಿಗೆ ಬೇಡಿಕೆ

Upayuktha
0


ಮಂಗಳೂರು: 50 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸ್ವಂತ ಕಛೇರಿ/ ಕಟ್ಟಡ ಈ ವರೆಗೂ ದೊರೆತಿಲ್ಲ. ದೈನಂದಿನ ಚಟುವಟಿಕೆಗಳಿಗೆ ಮತ್ತು ಪರಿಷತ್ತಿನ ಸದಸ್ಯರ ಭೇಟಿಗಾಗಿ ಒಂದು ಸ್ವಂತ ಕಛೇರಿ ಅತೀ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಒಂದು ಕಛೇರಿ ಒದಗಿಸುವಂತೆ ಮೂಡಾ ಅಧ್ಯಕ್ಷರಾದ ರವಿಶಂಕರ್ ಮಿಜಾರು ಅವರಿಗೆ ಮನವಿ ಸಲ್ಲಿಸಲಾಗಿದೆ. ಜನವರಿ 2022 ರಿಂದಲೇ ಹೊಸ ಕಛೇರಿಯನ್ನು ಆರಂಭಿಸಲು ಯತ್ನಿಸಲಾಗುವುದು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರಾದ ಡಾ. ಶ್ರೀನಾಥ್ ಎಂ.ಪಿ. ನುಡಿದರು.


ದಿನಾಂಕ: 22-12-2021ನೇ ಬುಧವಾರದಂದು ಮೂಡಾ ಅಧ್ಯಕ್ಷರನ್ನು ಅವರ ಕಛೇರಿಯಲ್ಲಿ ಭೇಟಿಯಾಗಿ ಕಛೇರಿಗಾಗಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಾ. ಎಂ.ಪಿ. ಶ್ರೀನಾಥ್ ಅವರ ಜೊತೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಡಾ. ಮಂಜುನಾಥ್ ರೇವಣ್‌ಕರ್, ಡಾ. ಮುರಲೀ ಮೋಹನ ಚೂಂತಾರು ಉಪಸ್ಥಿತರಿದ್ದರು. ಮೂಡಾ ಅಧ್ಯಕ್ಷರು ಆದಷ್ಟು ಬೇಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಛೇರಿ ಒದಗಿಸಿ ಕೊಡುವ ಬಗ್ಗೆ ಭರವಸೆ ನೀಡಿ ಧನಾತ್ಮಕವಾಗಿ ಸ್ಪಂದಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top