ಹೊಸದಿಲ್ಲಿ: ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ನವದೆಹಲಿಯ ಕರ್ನಾಟಕ ಸಂಘದ ವತಿಯಿಂದ ಅಭಿನಂದನ ಸಮಾರಂಭವು ಭಾನುವಾರ ಸಂಘದ ಸಭಾಂಗಣದಲ್ಲಿ ನೆರವೇರಿತು.
ಆದಿಚುಂಚನಗಿರಿ ಮಠಾಧೀಶ ಶ್ರೀ ನಿಮರ್ಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಸಂಘದ ಅಧ್ಯಕ್ದ ಬಿ.ಎಲ್ ಸುರೇಶ್, ಕಾರ್ಯದರ್ಶಿ ಸಿ.ಎಂ ನಾಗರಾಜ್ ಮೊದಲಾದವರಿದ್ದರು.
ಪದ್ಮ ಪ್ರಶಸ್ತಿ ಪುರಸ್ಕೃತರುಗಳಾದ ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು (ಮರಣೋತ್ತರ) ಪರವಾಗಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಡಾ. ಬಿ.ಎಂ ಹೆಗ್ಡೆ, ಚಂದ್ರಶೇಖರ ಕಂಬಾರ, ವಿಜಯ ಸಂಕೇಶ್ವರ, ಬಿ.ಎನ್ ಗಂಗಾಧರ, ಗಣೇಶ್ ಎಂ.ಪಿ, ವೆಂಕಟೇಶ್ ಕೆ ವೈ, ಕೆ.ವಿ ಸಂಪತ್ ಕುಮಾರ್. ಶ್ರೀಮತಿ ಜಯಲಕ್ಷ್ಮೀ ದಂಪತಿ, ಶ್ರೀಮತಿ ತುಳಸಿ ಗೌಡ, ಮಂಜಮ್ಮ ಜೋಗತಿ ಮೊದಲಾದವರನ್ನು ಅಭಿನಂದಿಸಲಾಯಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ