ಈ ಹಿನ್ನೆಲೆಯಲ್ಲಿ ಫಿಲ್ಮ್ ಫೇರ್ ಮತ್ತು ಕಮರ್ ಫಿಲ್ಮ್ ಫ್ಯಾಕ್ಟರಿ ಕಡೆಯಿಂದ ಪತ್ರಿಕಾ ಗೋಷ್ಠಿಯನ್ನು ಆಯೋಜಿಸಲಾಗಿತ್ತು. ಬಹುಭಾಷಾ ತಾರೆ ಪೂಜಾ ಹೆಗ್ಡೆ ಆಗಮಿಸಿದ್ದರು.
ಕಮರ್ ಫಿಲ್ಮ್ ಫ್ಯಾಕ್ಟರಿಯ ಸಂಸ್ಥಾಪಕ ಕಮರ್ ಮಾತನಾಡಿ " ಫಿಲ್ಮ್ ಫೇರ್ ಅವಾರ್ಡ್ ಎಂಬುವುದು ಚಿತ್ರರಂಗದಲ್ಲಿ ದುಡಿಯುವ ಪ್ರತಿಯೊಬ್ಬರ ಕೆಲಸಕ್ಕೂ ನೀಡುವ ಗೌರವದ ಕಾರ್ಯಕ್ರಮವಾಗಿದೆ. ನಾನು ಈ ಕಾರ್ಯಕ್ರಮಕ್ಕೆ ಉತ್ಸಾಹದಿಂದ ಕಾಯುತ್ತಿದ್ದೇನೆ. ಹಿಂದೆಂದೂ ಕಾಣದ ಹಾಗೆ ಅದ್ಧೂರಿಯಾಗಿ ನಡೆಸಲಿದ್ದೇವೆ. ಈ ಸಮಾರಂಭವು ಮಾರ್ಚ್ ಮೊದಲ ವಾರ ನಡೆಸಲು ತೀರ್ಮಾನಿಸಿದ್ದೇವೆ" ಎಂದು ಹೇಳಿದರು.