ದೂರದರ್ಶನ ಚಂದನ ವಾಹಿನಿಯ 'ನಮಸ್ಕಾರ ಕರ್ನಾಟಕ'ದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ನೇರ ಸಂದರ್ಶನ

Upayuktha
0



ಮಂಗಳೂರು: ಯಕ್ಷಗಾನ, ಶಿಕ್ಷಣ, ಸಾಹಿತ್ಯ ಮತ್ತು ಮಾದ್ಯಮ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಭಾಸ್ಕರ ರೈ ಕುಕ್ಕುವಳ್ಳಿ ಅವರೊಂದಿಗಿನ ಸಂದರ್ಶನ- ಮಾತುಕತೆ ಮಂಗಳವಾರ (ಡಿ.7) ಬೆಳಿಗ್ಗೆ 8 ರಿಂದ 9ರ ವರೆಗೆ ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ನೇರ ಪ್ರಸಾರವಾಗುವುದು. ದೂರದರ್ಶನದ 'ನಮಸ್ಕಾರ ಕರ್ನಾಟಕ' ಎಂಬ ಜನಪ್ರಿಯ ಕಾರ್ಯಕ್ರಮದಲ್ಲಿ ನಿರೂಪಕಿ ಸವಿತಾ ಪ್ರಕಾಶ್ ಈ ಮಾತಕತೆಯನ್ನು ನಡೆಸಿಕೊಡುವರು.


ಭಾರತೀಯ ಅಂಚೆ ಇಲಾಖೆಯಲ್ಲಿ ವೃತ್ತಿ ಆರಂಭಿಸಿದ ಭಾಸ್ಕರ ರೈ ಕುಕ್ಕುವಳ್ಳಿ ಅವರು ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರು ಮತ್ತು ಸಾಹಿತಿ. ಶಿಕ್ಷಣ ಇಲಾಖೆಯನ್ನು ಸೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಷಯದ ಉಪನ್ಯಾಸಕರಾಗಿ ತನ್ನ ವೃತ್ತಿಯನ್ನು ಮುಂದುವರಿಸಿದ ಅವರು ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ, ಯಕ್ಷಗಾನ ವಿದ್ವಾಂಸರಾಗಿ, ಪ್ರವಚನಕಾರರಾಗಿ ಮತ್ತು ಆಕಾಶವಾಣಿ- ದೂರದರ್ಶನ ಕಲಾವಿದರಾಗಿ ಬಹು ಆಯಾಮಗಳಲ್ಲಿ ದುಡಿದವರು. ಕನ್ನಡ ಮತ್ತು ತುಳು ಭಾಷೆಯಲ್ಲಿ ಕೆಲವು ಕೃತಿಗಳನ್ನೂ ಪ್ರಕಟಿಸಿದ್ದಾರೆ. ಕರ್ನಾಟಕ ಜಾನಪದ, ಯಕ್ಷಗಾನ ಹಾಗೂ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top