ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಇಕೋ ಕ್ಲಬ್ ಮತ್ತು ಇನ್ನೋವೇಶನ್ ಕ್ಲಬ್‌ಗಳ ವತಿಯಿಂದ ಭಾನುವಾರ ವಿಶ್ವ ಮಣ್ಣಿನ ದಿನ ವನ್ನು ವಿದ್ಯಾರ್ಥಿಗಳ ಸಂವಾದ ಮತ್ತು ಮಣ್ಣಿನ ವಿಧಗಳ ಕುರಿತ ಪ್ರಾತ್ಯಕ್ಷಿಕೆಗಳೊಂದಿಗೆ ಆಚರಿಸಲಾಯಿತು.
ಇಕೋ ಕ್ಲಬ್ ನ ವಿದ್ಯಾರ್ಥಿಗಳೇ ನಡೆಸಿಕೊಟ್ಟ ವಿಚಾರ ಸಂಕಿರಣದಲ್ಲಿ ಧನುಶ್ರೀ, ಮಂಜುನಾಥ್ ಮತ್ತು ಆಯಿಷಾ ಆಫ್ರಾ ಭಾಗವಹಿಸಿ 'ವಿಶ್ವ ಮಣ್ಣಿನ ದಿನಾಚರಣೆ'ಯ ಮೂಲ ಮತ್ತು ಮಹತ್ವವನ್ನು ವಿವರಿಸಿದರು. ಮೆಲ್ರೀನ್ ಮಣ್ಣಿನ ಪ್ರೊಫೈಲಿಂಗ್ ಕುರಿತು ವೀಡಿಯೋವೊಂದನ್ನು ಪ್ರದರ್ಶಿಸಿದರು.
ಇನ್ನೋವೇಶನ್ ಕ್ಲಬ್ ಸಂಯೋಜಕ ಡಾ.ಸಿದ್ದರಾಜು ಎಂ.ಎನ್ ಈ ವರ್ಷದ ವಿಶ್ವ ಮಣ್ಣಿನ ದಿನದ ಥೀಮ್ ಲವಣಾಂಶವನ್ನು ತಡೆಯಿರಿ ಮತ್ತು ಉತ್ಪಾದಕತೆ ಹೆಚ್ಚಿಸಿ ಕುರಿತು ಮಾತನಾಡಿದರು. ''ಭೂಮಿಯ ಮಣ್ಣಿನಲ್ಲಿ ಕೇವಲ 11 ಪ್ರತಿಶತದಷ್ಟು ಮಾತ್ರ ಫಲವತ್ತಾಗಿದ್ದು ವಿವಿಧ ಉದ್ದೇಶಗಳನ್ನು ಪೂರೈಸಲು ಸಮರ್ಥವಾಗಿದೆ, ವಿಶ್ವದ 776 ಕೋಟಿ ಜನರನ್ನು ಸಲಹುತ್ತಿದೆ. ಉಳಿದ ಅತಿಯಾದ ತೇವ, ಶುಷ್ಕ, ಹೆಪ್ಪುಗಟ್ಟಿದ ಅಥವಾ ಕಲುಷಿತ ಮಣ್ಣಿನಿಂದ ಯಾವುದೇ ಪ್ರಯೋಜನವಿಲ್ಲ. ಮಣ್ಣಿಲ್ಲ ಎಂದರೆ ನೀರಿಲ್ಲ, ಆಹಾರವಿಲ್ಲ ಮತ್ತು ಬದುಕಿಲ್ಲ'' ಎಂದು ನೆನಪಿಸಿದರು.
ಕಾರ್ಯಕ್ರಮವನ್ನು ಸಂಗೀತಾ ಮತ್ತು ವೇದಾಶಿನಿ ನಿರೂಪಿಸಿದರು. ಚೇತನ್ ಸ್ವಾಗತಿಸಿ, ಸಲೋನಿ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ