ಬೆಂಗಳೂರು: ನಗರದಲ್ಲಿನ ಹವಾನಿಯಂತ್ರಿತ ಸೇವೆಗಳ ಮಧ್ಯಮ ಮತ್ತು ದೂರದ ಪ್ರಯಾಣ ದರಗಳು ಮತ್ತು ಬಸ್ ಪಾಸ್ ದರಗಳನ್ನು ಬಿಎಂಟಿಸಿ ಕಡಿಮೆ ಮಾಡಿ ಆದೇಶವನ್ನು ಹೊರಡಿಸಿದೆ.
ಬಸ್ ಪಾಸ್ ನ ಬೆಲೆಯನ್ನು 120 ರೂಪಾಯಿಯಿಂದ 100 ರೂಪಾಯಿಗೆ ಇಳಿಸಲಾಗಿದ್ದು ಮಾಸಿಕ ಪಾಸ್ ಬೆಲೆಯು 2000 ರೂಪಾಯಿಯಿಂದ 1500 ರೂ. ಗೆ ಕಡಿತಗೊಂಡಿದೆ. ಆದರೆ ಈ ರಿಯಾಯಿತಿಯು ವಿಮಾನ ನಿಲ್ದಾಣ ಬಸ್ ಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.
ಶುಕ್ರವಾರದಿಂದ 12 ಮಾರ್ಗಗಳಲ್ಲಿ 90 ಹೆಚ್ಚುವರಿ ಎಸಿ ಬಸ್ ಸೇವೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದು ಇದರೊಂದಿಗೆ ನಗರದಲ್ಲಿ ಒಟ್ಟು 173 ಎಸಿ ಬಸ್ ಗಳು ಸಂಚಾರ ಮಾಡಲಿದೆ.