|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಜಿರೆಯಲ್ಲಿ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ- ಪೂರ್ವ ತಯಾರಿ ಸಭೆ

ಉಜಿರೆಯಲ್ಲಿ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ- ಪೂರ್ವ ತಯಾರಿ ಸಭೆ

ಉಜಿರೆಯಲ್ಲಿ ಜನವರಿ 8, 9 ರಂದು ಎರಡು ದಿನಗಳ ಕಾಲ ನಡೆಯಲಿರುವ ಅಖಿಲಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಮಟ್ಟದ ಮೂರನೇ ರಾಜ್ಯ ಸಮ್ಮೇಳನದ ಕುರಿತಾಗಿ ಪೂರ್ವ ತಯಾರಿ ಸಭೆ ಇತ್ತೀಚೆಗೆ ಉಜಿರೆ ಶಾರದ ಮಂಟಪದಲ್ಲಿ ನಡೆಯಿತು.

Upayuktha


ಅಖಿಲಭಾರತ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಈ ಸಂದರ್ಭ ಮಾತನಾಡಿ ಉಜಿರೆಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ರಾಜ್ಯದಾದ್ಯಂತ ಅತೀ ಹೆಚ್ಚು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲು ಆಸಕ್ತರು ಕಾತುರದಿಂದ ಕಾಯುತ್ತಿದ್ದಾರೆ. ರಾಜ್ಯದ ವಿವಿಧೆಡೆ ನಡೆದ ವಿಭಾಗ ಮಟ್ಟದ ಸಮಾವೇಶದಲ್ಲಿ ಈ ಬಗ್ಗೆ ದೃಢವಾಗಿದೆ.


ಈ ಹಿಂದೆ ನಡೆದ ವಿಶ್ವ ಹಿಂದೂ ಪರಿಷತ್ತಿನ ಯಶಸ್ವಿ ಸಮಾವೇಶದಲ್ಲಿ ಸಹಿತ ಉಜಿರೆಯಲ್ಲಿ ನಡೆದ ಹಲವು ಮಹತ್ವದ ದೊಡ್ಡ ಕಾರ್ಯಕ್ರಮಗಳ ನೆನಪು ರಾಜ್ಯಾದ್ಯಂತ ಕೆಲವರಲ್ಲಿ ಹಸಿರಾಗಿದೆ ಈ ಹಿನ್ನಲೆಯಲ್ಲಿ ಉಜಿರೆಯ ಸಾಹಿತ್ಯ ಸಮ್ಮೇಳನದಲ್ಲಿ ಜನರಲ್ಲಿ ಅದೇ ರೀತಿಯ ನಿರೀಕ್ಷೆ ಇದೆ ಎಂದರು.


ಶಿರಸಿಯ ಯಡಳ್ಳಿ ಹಾಗೂ ಮೈಸೂರಿನಲ್ಲಿ ನಡೆದ ಮೊದಲ ಎರಡು ಸಮ್ಮೇಳನದಲ್ಲಿ ಸಾಹಿತ್ಯ ಲೋಕಕ್ಕೆ ಸಂದೇಶ ತಲುಪಿಸುವ ಕಾರ್ಯ ನಡೆದಿದ್ದು ಉಜಿರೆಯ ಸಮ್ಮೇಳನದ ಮೂಲಕ ಮತ್ತಷ್ಟು ಗಟ್ಟಿ ಸಂದೇಶದೊಂದಿಗೆ ಸಾಹಿತ್ಯ ಪರಿಷತ್ತಿಗೆ ಶಕ್ತಿ ತುಂಬುವ ಕಾರ್ಯ ಆಗಬೇಕಿದೆ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.


ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಗುರುರಾಜ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಉಜಿರೆಯ ನೆಲಕ್ಕೆ ಶಕ್ತಿ ಇದೆ ಇಲ್ಲಿನವರಿಗೆ ಸಂಘಟನೆಯ ವಿಶೇಷ ಅನುಭವವಿದೆ. ಈ ಹಿನ್ನಲೆಯಲ್ಲಿ ಸಂಘದ ಸಹಕಾರದೊಂದಿಗೆ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಸಂಘಟಿಸುವ ಭರವಸೆ ಇದೆ ಎಂದರು


ವಿವಿಧ ಸಮಿತಿಯ ಸಂಚಾಲಕರು ಹಾಗೂ ಸದಸ್ಯರು ಕಾರ್ಯಕ್ರಮದ ರೂಪುರೇಷೆ ಹಾಗೂ ತಯಾರಿಯ ಬಗ್ಗೆ ವಿವರವಾಗಿ ಮಾತನಾಡಿದರು, ಸಮ್ಮೇಳನದ ಉಪ ಸಂಯೋಜಕ ಎಮ್.ಎನ್ ರವಿ ಸ್ವಾಗತಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم