ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕುಡ್ಲ ಮತ್ತು ಸಂಸ್ಕಾರ ಭಾರತಿ ಕುಡ್ಲ ಇದರ ಸಹಭಾಗಿತ್ವದಲ್ಲಿ ನವೆಂಬರ್ 5, ಶುಕ್ರವಾರದಂದು ಗೋಪೂಜೆಯಿಂದ ಆರಂಭವಾಗಿ ದಿನಾಂಕ 14 ಭಾನುವರದ ತನಕ ನಿತ್ಯವೂ ಸಂಜೆ 5 ಗಂಟೆಯ ನಂತರ 'ತುಡರ ಪರ್ಬೊಗು ಭಜನೆದೈಸಿರೊ- ತುಳು ಭಜನಾ ಪರ್ಬ' ಕಾರ್ಯಕ್ರಮವು 'ಪತ್ತೆತ್ತ ಗೊಂಚಿಲ್' ತುಳುಭವನದಲ್ಲಿ ನಡೆಯಲಿದೆ.
ಸಂಜೆ 5 ಗಂಟೆಯಿಂದ 7:30 ತನಕ ಭಜನಾ ಕಾರ್ಯಕ್ರಮ ಜರುಗಲಿದೆ. ದಿನಾಂಕ 5.11.2021 ಶುಕ್ರವಾರ ಸರಯೂ ಭಜನಾ ವೃಂದ ಕೋಡಿಕಲ್, 6 ಶನಿವಾರದಂದು ವಿಶ್ವ ಹಿಂದೂ ಪರಿಷತ್ ಭಗತ್ ಶಾಖೆ ಕೊಟ್ಟಾರ,7 ಭಾನುವಾರ ದೇವಕಿಕೃಷ್ಣ ಭಜನಾ ತಂಡ ಕುಮ್ ಡೇಲು, 8ರಂದು ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಮಂದಿರದ ಭಜನಾ ತಂಡ ಕೋಡಿಕಲ್, 9 ಮಂಗಳವಾರ ಶ್ರೀ ಗುರು ಅಂಬಾ ರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನ ಭಜನಾ ಮಂಡಳಿ ಕೋಡಿಕಲ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 10ರ ಬುಧವಾರದಂದು ನಾದ ಸಂಕೀರ್ತನಾ ಮಂಗಳೂರು, 11 ಗುರುವಾರ ಶ್ರೀ ಅಯ್ಯಪ್ಪ ಭಜನಾ ಮಂದಿರ (ರಿ) ಮುಲ್ಲಕಾಡು, 12 ಶುಕ್ರವಾರ ಚಿತ್ರಾಪುರ ಭಜನಾ ಮಂಡಳಿ, 13 ಶನಿವಾರ ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ಭಜನಾ ಮಂಡಳಿ ಮಂದಾರಬೈಲು, 14 ಆದಿತ್ಯವಾರ ಸಂಜೆ 3 ರಿಂದ 5 ಗಂಟೆಯ ತನಕ ಶ್ರೀ ರಕ್ತೇಶ್ವರಿ ನಾಗಬ್ರಹ್ಮ ಭಜನಾ ಮಂಡಳಿ ಪೆರ್ಲಗುರಿ ತಂಡದಿಂದ ಭಜನಾಭಿಷೇಕ ನೆರವೇರಲಿದೆ.
ಅದೇ ದಿನ ಸಂಜೆ 5 ಗಂಟೆಯಿಂದ 7.30 ರವರೆಗೆ ಶ್ರೀ ಹರಿಪ್ರಸಾದ್ ಕಾರಂತ, ಶ್ರೀ ಸಂಜೀವ ಕಜೆಪದವು, ಶ್ರೀ ಸ್ಕಂದ ಕೊನ್ನಾರ್, ಶ್ರೀ ಮಧುಸೂದನ ಅಲೆವೂರಾಯ ವರ್ಕಾಡಿ, ಶ್ರೀ ಮಾಧವ ನಾವಡ ವರ್ಕಾಡಿ ಇವರಿಂದ 'ಯಕ್ಷ ಭಜನೆ' ಕಾರ್ಯಕ್ರಮವು ಸಾಕಾರಗೊಳ್ಳಲಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ