||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನವೆಂಬರ್ 10ರಿಂದ ಮಂಗಳೂರು-ಮಂತ್ರಾಲಯ ನಾನ್ ಎಸಿ ಸ್ಲೀಪರ್ ಸೇವೆ ಆರಂಭ

ನವೆಂಬರ್ 10ರಿಂದ ಮಂಗಳೂರು-ಮಂತ್ರಾಲಯ ನಾನ್ ಎಸಿ ಸ್ಲೀಪರ್ ಸೇವೆ ಆರಂಭ


ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಇದೇ ನ.10 ರಿಂದ ಮಂಗಳೂರಿನಿಂದ ಮಂತ್ರಾಲಯಕ್ಕೆ ನಾನ್ ಎಸಿ ಸ್ಲೀಪರ್ ಬಸ್ ಸಂಚಾರದ ಸೇವೆ ಆರಂಭಿಸಲಿದೆ. ಮಂಗಳೂರಿನಿಂದ ಉಡುಪಿ-ಕುಂದಾಪುರ-ಅಂಪಾರು- ಸಿದ್ದಾಪುರ-ತೀರ್ಥಹಳ್ಳಿ-ಶಿವಮೊಗ್ಗ-ಹೊನ್ನಾಳಿ- ಹರಿಹರ-ಹರಪನಹಳ್ಳಿ-ಹಗರಿಬೊಮ್ಮನಹಳ್ಳಿ-ಹೊಸಪೇಟೆ-ಕುಡುತಿನಿ-ಬಳ್ಳಾರಿ-ಆಲೂರು- ಅದೋನಿ ಮಾರ್ಗವಾಗಿ ಮಂತ್ರಾಲಯಕ್ಕೆ ಹಾಗೂ ಮಂತ್ರಾಲಯದಿಂದ ಇದೇ ಮಾರ್ಗವಾಗಿ ಮಂಗಳೂರಿಗೆ ನಾನ್ ಎಸಿ ಸ್ಲೀಪರ್ ಸಾರಿಗೆ ಸೇವೆ ಕಾರ್ಯಾಚರಣೆ ಮಾಡಲಿದೆ.


ಈ ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 6 ಗಂಟೆಗೆ ಹೊರಟು ಉಡುಪಿ 7.15-7.20, ಮಣಿಪಾಲ 7.30, ಕುಂದಾಪುರ 8.15, ಅಂಪಾರು, ಸಿದ್ದಾಪುರ 9, ತೀರ್ಥಹಳ್ಳಿ 10.45- 11 ಗಂಟೆಗೆ, ಶಿವಮೊಗ್ಗ 00.15-00.30, ಹೊನ್ನಾಳಿ 01.30, ಹರಿಹರ 02.15, ಹರಪನಹಳ್ಳಿ 03.00, ಹಗರಿಬೊಮ್ಮನಹಳ್ಳಿ 03.45, ಹೊಸಪೇಟೆ 04.30-04.45, ಕುಡುತಿನಿ, ಬಳ್ಳಾರಿ 05.45-06.00, ಆಲೂರು, ಆದೋನಿ ಮಾರ್ಗವಾಗಿ ಮಂತ್ರಾಲಯಕ್ಕೆ ಬೆಳಿಗ್ಗೆ 08.30ಕ್ಕೆ ತಲುಪುವುದು.


ಮರು ಪ್ರಯಾಣದಲ್ಲಿ ಮಂತ್ರಾಲಯದಿಂದ  ಸಂಜೆ 18.30 ಗಂಟೆಗೆ ಹೊರಟು ಅದೋನಿ, ಆಲೂರು, ಬಳ್ಳಾರಿ 21.00-21.15, ಕುಡುತಿನಿ, ಹೊಸಪೇಟೆ 22.15, ಹಗರಿಬೊಮ್ಮನಹಳ್ಳಿ 23.00, ಹರಪನಹಳ್ಳಿ 23.45, ಹರಿಹರ 00.15, ಹೊನ್ನಾಳಿ 01.15, ಶಿವಮೊಗ್ಗ 02.30-03.00, ತೀರ್ಥಹಳ್ಳಿ 04.15, ಸಿದ್ದಾಪುರ 05.50-06.00, ಅಂಪಾರು, ಕುಂದಾಪುರ 06.45, ಮಣಿಪಾಲ 07.30, ಉಡುಪಿ 07.40-07.45  ಮಾರ್ಗವಾಗಿ ಮಂಗಳೂರಿಗೆ ಬೆಳಿಗ್ಗೆ 09.00ಕ್ಕೆ ತಲುಪಲಿದೆ.


ಮಂಗಳೂರಿನಿಂದ ಮಂತ್ರಾಲಯಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ 970 ರೂ.ಗಳು, ಉಡುಪಿ-ಮಂತ್ರಾಲಯಕ್ಕೆ ಒಟ್ಟು ಪ್ರಯಾಣ ದರ 910 ರೂ.ಗಳು ಹಾಗೂ ಕುಂದಾಪುರದಿಂದ-ಮಂತ್ರಾಲಯ ಒಟ್ಟು ಪ್ರಯಾಣದರ 860 ರೂ.ಗಳಾಗಲಿವೆ.  ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು ಸಾರ್ವಜನಿಕರು www.ksrtc.in ಗೆ ಅಥವಾ ಹತ್ತಿರದ ಮುಂಗಡ ಕಾದಿರಿಸುವ ಕೌಂಟರಿ‍ಗೆ ಸಂಪರ್ಕಿಸಬಹುದಾಗಿದೆ.


ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಬಸ್ಸು ನಿಲ್ದಾಣ ದೂ.ಸಂಖ್ಯೆ: 7760990720, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್: 9663211553 ಉಡುಪಿ ಬಸ್ಸು ನಿಲ್ದಾಣ: 9663266400, ಕುಂದಾಪುರ ಬಸ್ಸು ನಿಲ್ದಾಣ: 9663266009  ಮಂತ್ರಾಲಯ ಬಸ್ಸು ನಿಲ್ದಾಣ: 08512279444 ಈ ಸಂಖ್ಯೆಯನ್ನು ಸಂಪರ್ಕಿಸುವಂತೆ ಕರಾರಸಾಸಂ, ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ 

0 Comments

Post a Comment

Post a Comment (0)

Previous Post Next Post