ಉಡುಪಿ: ನವೆಂಬರ್ 20 ರಂದು ಉಡುಪಿ ಜಿಲ್ಲೆಯ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಕ್ಕರ್ಣೆ ಮತ್ತು ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ" ಕಾರ್ಯಕ್ರಮ ನಡೆಸುವುದಾಗಿ ತೀರ್ಮಾನಿಸಲಾಗಿದೆ.
ಸದ್ರಿ ದಿನದಂದು ನಡೆಯುವ ಕಾರ್ಯಕ್ರಮದಲ್ಲಿ ಕಂದಾಯ ಸಚಿವರು ಪಾಲ್ಗೊಳ್ಳಲಿದ್ದು, ಅಂದು ಬೆಳಗ್ಗೆ ಕೊಕ್ಕರ್ಣೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ ಮತ್ತು ಅದೇ ದಿನ ಅಪರಾಹ್ನ ಅರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ ಹಾಗೂ ವಾಸ್ತವ್ಯ ಮಾಡಲಿದ್ದಾರೆ.
ನವೆಂಬರ್ 21 ರಂದು ಬೆಳಿಗ್ಗೆ ಕಂಜೂರು ಗ್ರಾಮದಲ್ಲಿನ ಕೊರಗರ ಕಾಲೋನಿಗೆ ಭೇಟಿ ನೀಡಲಿದ್ದಾರೆ, ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಕೊಕ್ಕರ್ಣೆ ಮತ್ತು ಅರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾತ್ರ ಇರಲಿದೆ, 38 ನೇ ಕಳ್ತೂರು/ಕೆಂಜೂರು ಗ್ರಾಮದಲ್ಲಿ ಅಹವಾಲು ಸ್ವೀಕಾರ ಇರುವುದಿಲ್ಲ.
ಕೊಕ್ಕರ್ಣೆ ಮತ್ತು ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಲಿಖಿತ ಅಹವಾಲುಗಳನ್ನು ನವೆಂಬರ್ 15 ರೊಳಗೆ ತಾಲೂಕು ಕಛೇರಿ ಬ್ರಹ್ಮಾವರ, ಗ್ರಾಮಕರಣಿಕರ ಕಛೇರಿ ಪಜಮಂಗೂರು, 34 ಕುದಿ ಮತ್ತು ಆರೂರು ಇಲ್ಲಿ ನೀಡಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ