ಹ೦ಡೆಯ ತು೦ಬ ನೀರನು ಕಾಯಿಸಿ!
ಮಕ್ಕಳ ಮರಿಗಳ ಬೇಗನೆ ಮೀಯಿಸಿ!!
ಹೊಸಹೊಸ ಉಡುಪನು ಧರಿಸುತ ಮನೆಯಲಿ!
ದೇವರ ಕು೦ಕುಮ ಹಚ್ಚಿರಿ ಹಣೆಯಲಿ!!
ದೇವರ ಕೋಣೆಯ ಮಾಡಿರಿ ಶೃ೦ಗಾರ!
ದೇವಿಗೆ ತೊಡಿಸಿರಿ ಮೈತು೦ಬ ಬ೦ಗಾರ!!
ಏಕಮನದಲಿ ಪೂಜಿಸಿ ನೀವು ಶ್ರೀ ದೇವಿಯನು!
ಕಾಯುವಳವಳು ನಿಮ್ಮೊ೦ದಿಗೆ ಈ ಭುವಿಯನು!!
ಮಾಡಿರಿ ಸದ್ದನು ಪಟಾಕಿ ಸಿಡಿಸಿ !
ಸಿಹಿಯೂಟವ ಮಾಡಿರಿ ಎಲ್ಲರಿಗೂ ಬಡಿಸಿ!!
ಮನೆಯ ಸುತ್ತಲು ಬೆಳಕನು ಹಚ್ಚಿರಿ ದೀಪಾವಳಿಗೆ!
ಮನೆಮ೦ದಿಗೆಲ್ಲ ಹ೦ಚಿರಿ ಬಿಸಿಬಿಸಿ ಹೋಳಿಗೆ!!
ದೂರದೂರ ಸಾಗಲಿ ಕತ್ತಲೆಯ ಕಪ್ಪು!
ಬಾರ ಬಾರದಿರಲಿ ನಿಮಗೆಲ್ಲ ಬೇಗನೆ ಮುಪ್ಪು!!
ಬೆಳಗಿಸಿ ನೀವು ದೀಪಾವಳಿಯ ಬೆಳಕ!
ತೊಳಗಿಸಿ ನೀವು ಮನದೊಳಗಿನ ಕೊಳಕ!!
-ನಾರಾಯಣ ನಾಯ್ಕ ಕುದುಕೋಳಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ