ಬರುತಿಹದು ಉಗಿಬಂಡಿ
ಉರುಳಿಸುತ ಗಾಲಿಗಳ
ಸರಸರನೆ ಹಳಿಮೇಲೆ ತಡೆ ಇಲ್ಲದೆ
ಅರಿಯಲಾರೆವು ಇದರ
ಗುರಿ ಏನೊ ಎಂತೆಂದು
ಸರಿದು ನಿಲ್ಲಲೆ ಬೇಕು ಮುನ್ನುಗ್ಗದೆ
ಹಿರಿಯ ಶಕ್ತಿಯ ಮುಂದೆ
ಕಿರಿಯದಾದುದು ಎಲ್ಲ
ಮೆರೆಯಲಾರದು ಎಂಬ ತಿಳಿವಿಲ್ಲಿದೆ
ಅರೆಗಳಿಗೆಯಾದರೂ
ಮರೆತರೀ ಸತ್ಯವನು
ನರನೆ ನಿನ್ನಯ ಆಟ ಕೊನೆಯಾಗದೆ
ತರುಣಿ ಅವಸರಿಸದಿರು
ಮರೆಯಾಗಲಿದೆ ಬಂಡಿ
ತೊರೆಯುತ್ತ ಹಳಿಯನ್ನು ಬಲುಬೇಗನೆ
ಗುರಿಯ ತಲುಪಲು ಜಾಣೆ
ಅರಿತು ಮುನ್ನಡಿಯನಿಡು
ಸರಿಯಾದ ಸಮಯಕ್ಕೆ ಇರಲಿ ತಾಳ್ಮೆ
***********
ಚಿತ್ರ: ನವಮಿ ಗೋಗಟೆ.
ಕವನ: ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ