ಮೈಸೂರಿನ ವಸುಂಧರೋತ್ಸವದಲ್ಲಿ ವಿದುಷಿ ಅಯನಾ ಪೆರ್ಲ ಅವರಿಂದ ಭರತನಾಟ್ಯ ಪ್ರದರ್ಶನ

Upayuktha
0


ಮಂಗಳೂರು: ಇಂದಿನಿಂದ (ನ.23) ಒಂದು ವಾರ ಕಾಲ ಮೈಸೂರಿನಲ್ಲಿ ಜರಗಲಿರುವ ರಾಷ್ಟ್ರೀಯ ನೃತ್ಯ ಮತ್ತು ಸಂಗೀತೋತ್ಸವ 'ವಸುಂಧರೋತ್ಸವ'ದಲ್ಲಿ ದಿನಾಂಕ 24ರ ಸಂಜೆ 7 ಗಂಟೆಯಿಂದ ಶಾಸ್ತ್ರೀಯ ಭರತನಾಟ್ಯ ಪ್ರದರ್ಶನ ನೀಡಲು ಕರಾವಳಿಯ ಪ್ರತಿಭಾವಂತ ಯುವ ನೃತ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಅವರು ಆಹ್ವಾನಿತರಾಗಿದ್ದಾರೆ.


ಅಂದು ಸಾಯಂಕಾಲ 7 ಗಂಟೆಯಿಂದ ಮೈಸೂರಿನ ಜೆ ಎಲ್ ಬಿ ರಸ್ತೆಯಲ್ಲಿರುವ 'ನಾರದ ಸಂಗೀತ ಸಭಾ'ದಲ್ಲಿ ವಿದುಷಿ ಅಯನಾ ಪೆರ್ಲ ಏಕವ್ಯಕ್ತಿ ಪ್ರದರ್ಶನ ನೀಡಲಿರುವರು. 


ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಹಲವು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿರುವ ವಿದುಷಿ ಅಯನಾ ಪೆರ್ಲ ಯುವ ತಲೆಮಾರಿನ ಉತ್ತಮ ಕಲಾವಿದೆಯೆಂದು ಹೆಸರಾಗಿದ್ದಾರೆ. ಸ್ವತಂತ್ರವಾಗಿ ಕೋರಿಯೋಗ್ರಫಿ ಸಂಯೋಜಿಸುವ ಇವರು ಯೋಗ, ಸಂಗೀತ ಮತ್ತು ಸಾಹಿತ್ಯದಲ್ಲಿಯೂ ಪರಿಣತಿ ಹೊಂದಿದ್ದಾರೆ.


ಮೈಸೂರಿನಲ್ಲಿ ಪ್ರದರ್ಶನದ ಪಕ್ಕವಾದ್ಯದಲ್ಲಿ ನಟ್ಟುವಾಂಗದಲ್ಲಿ ಗುರು ವಿದುಷಿ ಶಾರದಾಮಣಿ ಶೇಖರ್, ಹಾಡುಗಾರಿಕೆಯಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಮೃದಂಗದಲ್ಲಿ ವಿದ್ವಾನ್ ಬಾಲಚಂದ್ರ ಭಾಗವತ್ ಮತ್ತು ಕೊಳಲಿನಲ್ಲಿ ಅಭಿಷೇಕ್ ಎಂ. ಬಿ. ಸಹಕರಿಸಲಿರುವರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top