ಎಕೆಬಿಎಂಎಸ್ ಚುನಾವಣೆ: ಬದಲಾವಣೆಗಾಗಿಯೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಎಂದ ಅಭ್ಯರ್ಥಿ

Upayuktha
0

ಎಸ್. ರಘುನಾಥ್ ನಾಮಪತ್ರ ಸಲ್ಲಿಕೆ 


ಎಕೆಬಿಎಂಎಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ರಘುನಾಥ್ ಅವರು ಸೋಮವಾರ ಬೆಂಗಳೂರಿನಲ್ಲಿ ಚುನಾವಣಾಧಿಕಾರಿ ಎಸ್.ಕೆ.ಶ್ರೀನಿವಾಸ ಮೂರ್ತಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಕೆಎಸ್‍ಎಸ್‍ಐಡಿಸಿ ಉಪಾಧ್ಯಕ್ಷ ಎಸ್‌. ದತ್ತಾತ್ರಿ, ಬಡಗನಾಡು ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಎಸ್.ನಾಗೇಶ್, ಪ್ರಕಾಶ್ ಅಯ್ಯಂಗಾರ್, ಸುದರ್ಶನಂ, ಮಂಜುನಾಥ್ ಉಪಸ್ಥಿತರಿದ್ದರು.


ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಎಸ್.ರಘುನಾಥ್ ಅವರು ಸೋಮವಾರ ನೂರಾರು ಅಭಿಮಾನಿಗಳೊಂದಿಗೆ ತಮ್ಮ ನಾಮಪತ್ರ ಸಲ್ಲಿಸಿದರು.


"ಎಕೆಬಿಎಂಎಸ್‍ನಲ್ಲಿ ಸಮಗ್ರ ಬದಲಾವಣೆ ತರಬೇಕು ಮತ್ತು ಆ ಮೂಲಕ ಬ್ರಾಹ್ಮಣ ಸಮುದಾಯಕ್ಕೆ ಗರಿಷ್ಠ ಪ್ರಮಾಣದಲ್ಲಿ ನೆರವಾಗಬೇಕು ಎಂಬ ಕಾರಣಕ್ಕೇ ಸ್ಪರ್ಧಿಸಿದ್ದೇನೆ. ಬ್ರಾಹ್ಮಣ ಸಮುದಾಯಕ್ಕೆ ನೆರವಾಗುವ ಹಲವಾರು ಯೋಜನೆಗಳನ್ನು ಈಗಾಗಲೇ ಪ್ರಕಟಿಸಿದ್ದು, ಅವುಗಳ ಅನುಷ್ಠಾನವೇ ನನ್ನ ಆದ್ಯತೆಯಾಗಿರುತ್ತದೆ' ಎಂದು ರಘುನಾಥ್‌  ತಿಳಿಸಿದರು.

 

"ವೃದ್ಧರಿಗೆ ಪಿಂಚಣಿ, ಉಚಿತ ಆರೋಗ್ಯ ವಿಮೆ, ವೇದಪಾಠ ಶಾಲೆ ಆರಂಭ, ವಿವಿಧ ಶಾಲೆಗಳ ಸ್ಥಾಪನೆ ಸಹಿತ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅದಕ್ಕಾಗಿ 100 ಕೋಟಿ ರೂಪಾಯಿಗಳ ಕಾಪುಧನ ಇರಿಸುವ ಗುರಿ ಇದೆ. ಇದುವರೆಗೆ ಸಮುದಾಯಕ್ಕೆ ಯಾವುದೇ ರೀತಿಯಲ್ಲಿ ನೆರವಿಗೆ ಬರದೆ ಇದ್ದ ಮಹಾಸಭಾವನ್ನು ಶಕ್ತಿಶಾಲಿಯಾಗಿ ಕಟ್ಟಿ ಬೆಳೆಸುವ ಯೋಜನೆ ರೂಪಿಸಲಾಗಿದೆ' ಎಂದು ಅವರು ಹೇಳಿದರು.


ಪಾದಯಾತ್ರೆ: ಕೆ.ಆರ್.ರಸ್ತೆಯ ಉಮಾಮಹೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಾದಯಾತ್ರೆ ಮೂಲಕ ಬಸವನಗುಡಿಯ ಗಾಯತ್ರಿ ಭವನದಲ್ಲಿರುವ ಎಕೆಬಿಎಂಎಸ್ ಕಚೇರಿಗೆ ತೆರಳಲಾಯಿತು. ರಘುನಾಥ್ ಅವರಿಗೆ ಬೆಂಬಲ ಸೂಚಿಸಿ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು. ಬಳಿಕ ಚುನಾವಣಾಧಿಕಾರಿ ಎಸ್.ಕೆ.ಶ್ರೀನಿವಾಸ ಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಲಾಯಿತು.


ಕೆಎಸ್‍ಎಸ್‍ಐಡಿಸಿ ಉಪಾಧ್ಯಕ್ಷ ಎಸ್. ದತ್ತಾತ್ರಿ, ಬಡಗನಾಡು ಬ್ರಾಹ್ಮಣ ಮಹಸಭಾದ ಜಿ.ಎಸ್.ನಾಗೇಶ್, ವಿವಿಧ ಸಂಘಟನೆಗಳ ಮುಖಂಡರಾದ ವತ್ಸಲಾ ನಾಗೇಶ್, ರಾಮಕೃಷ್ಣ ಶ್ರೋತ್ರಿ, ಬಿ.ವಿ.ಕುಮಾರ್, ಸುದರ್ಶನಂ. ಮಂಜುನಾಥ್, ಪ್ರಕಾಶ್ ಅಯ್ಯಂಗಾರ್ ವೃಕ್ಷಂ ಸುರೇಶ್, ವೈ.ಎನ್.ಶರ್ಮಾ, ಜಗದೀಶ್ ಹುನಗುಂದ ಇತರರು ಇದ್ದರು.


ಚುನಾವಣೆಗೆ ನಿಂತ ಸಾಮಾನ್ಯ ವ್ಯಕ್ತಿ

"ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು, ನಿಂತ ನೀರಾಗಿರುವ ಮಹಾಸಭಾದಲ್ಲಿ ಒಂದು ಬದಲಾವಣೆ ತರಲೇಬೇಕಾಗಿದೆ. ಮುಖ್ಯವಾಗಿ ಮಹಾಸಭಾದ ಬೈಲಾದಲ್ಲೇ ಹಲವಾರು ಲೋಪದೋಷಗಳಿದ್ದು, ಇದರಿಂದಾಗಿ ಜನಸಾಮಾನ್ಯರು ಮಹಾಸಭಾದಿಂದ ದೂರವೇ ಉಳಿಯುವಂತಾಗಿದೆ. ಇದೆಲ್ಲವನ್ನೂ ಸರಿಪಡಿಸಿ ಹೊಸ ರೂಪ ಕೊಟ್ಟು ಸಮುದಾಯಕ್ಕೆ ಮಹಾಸಭಾ ಮೂಲಕ ನೆರವಿಗೆ ಬರುವ ಉದ್ದೇಶದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ' ಎಂದು ಎಸ್.ರಘುನಾಥ್ ತಿಳಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


author dissertation

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top