ಕುಂಬಳೆ: ಹೆಸರಾಂತ ಕವಿ, ಸಾಹಿತಿ, ಶಿಕ್ಷಣ ತಜ್ಞ ವಿ.ಬಿ ಕುಳಮರ್ವ ಅವರು ರಚಿಸಿದ ಹವಿ-ಸವಿ ಕೋಶ (ಹವ್ಯಕ-ಕನ್ನಡ ನಿಘಂಟು) ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ನ.14ರಂದು ಭಾನುವಾರ ಆಯೋಜಿಸಲಾಗಿದೆ.
ಕುಂಬಳೆ ಸಮೀಪದ ನಾರಾಯಣಮಂಗಲದಲ್ಲಿರುವ ನಿಘಂಟು ಸಂಪಾದಕರ ನಿವಾಸದಲ್ಲಿ ಅಂದು ಪೂರ್ವಾಹ್ನ 10 ಗಂಟೆಗೆ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ವಿ.ಬಿ ಅರ್ತಿಕಜೆ ಅವರು ಕೃತಿಯ ಲೋಕಾರ್ಪಣೆ ಮಾಡಲಿದ್ದಾರೆ.
ಖ್ಯಾತ ವಿದ್ವಾಂಸರು, ಲೇಖಕರೂ ಆದ ಡಾ. ರಮಾನಂದ ಬನಾರಿ, ಡಾ. ತಾಳ್ತಜೆ ವಸಂತಕುಮಾರ, ಡಾ. ಶ್ರೀಕೃಷ್ಣ ಭಟ್, ಡಾ. ಹರಿಕೃಷ್ಣ ಭರಣ್ಯ, ಡಾ. ಪಾದೇಕಲ್ಲು ವಿಷ್ಣು ಭಟ್ಟ ಮೊದಲಾದ ಗಣ್ಯರು ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಲೇಖಕರು ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಸಿದ್ಧವಾದ ಈ ಗ್ರಂಥ ಸುಮಾರು 10,000ಕ್ಕೂ ಅಧಿಕ ಶಬ್ದಗಳನ್ನು ಒಳಗೊಂಡು 500ಕ್ಕೂ ಅಧಿಕ ಪುಟಗಳನ್ನು ಹೊಂದಿದ್ದು, ಇದೀಗ ಬಿಡುಗಡೆಗೆ ಸಿದ್ಧವಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ