|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೀಪಾವಳಿ ಜ್ಞಾನ ಹಾಗೂ ಬೆಳಕಿನ ಉತ್ಸವ: ಕೃಷ್ಣಪ್ರಸಾದ್ ಕಾಯರ್ ಕಟ್ಟೆ

ದೀಪಾವಳಿ ಜ್ಞಾನ ಹಾಗೂ ಬೆಳಕಿನ ಉತ್ಸವ: ಕೃಷ್ಣಪ್ರಸಾದ್ ಕಾಯರ್ ಕಟ್ಟೆ

 


ಪುತ್ತೂರು: ದೀಪಾವಳಿ ಹಬ್ಬ ವಿಶೇಷವಾಗಿ ನಮ್ಮ ಸನಾತನ ಧರ್ಮ ಸಂಸ್ಕೃತಿಯಲ್ಲಿ ಮಾಸಗಳು ತಿಥಿಗಳ ಬದಲಾವಣೆಗಳಿಗೆ ಹೊಂದಿಕೊಂಡು ಆಚರಿಸುತ್ತೇವೆ. ದೀಪಾವಳಿ ಹಬ್ಬ ಹಬ್ಬಗಳ ರಾಜನಾಗಿದ್ದು, ಜ್ಞಾನ  ಹಾಗೂ ಬೆಳಕಿನ ಉತ್ಸವವಾಗಿದೆ. ಇಂದು ದೀಪಾವಳಿಯನ್ನು ನಾವು ಮೂರು ದಿನಗಳಿಗೆ ಸೀಮಿತಗೊಳಿಸಿದರೂ ಮೂಲತಃ ಐದು ದಿನಗಳವರೆಗೆ ಆಚರಿಸುವ ಹಬ್ಬ ಇದಾಗಿದೆ ಎಂದು ಶ್ರೀರಾಮ ಪದವಿ ಕಾಲೇಜಿನ ಪ್ರಾಚಾರ್ಯ  ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಭವಿಷ್ ಘಟಕದ ವತಿಯಿಂದ "ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿ  ಆಚರಣೆಯ ಮಹತ್ವ" ಎಂಬ ವಿಷಯದ ಬಗ್ಗೆ  ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.


ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ  ಮುರಳಿಕೃಷ್ಣ ಕೆ ಎನ್, ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಹಾಗೂ ಭವಿಷ್ ಘಟಕದ  ಸಂಯೋಜಕರು ಉಪಸ್ಥಿತರಿದ್ದರು.  ಭವಿಷ್ ಘಟಕದ ವಿದ್ಯಾರ್ಥಿನಿಯರಾದ ಆಶಿತಾ ಪ್ರಾರ್ಥಿಸಿ, ರಮಿತಾ ಸ್ವಾಗತಿಸಿ, ಕಾವ್ಯ ವಂದಿಸಿದರು. ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರು.  


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post