ಉಡುಪಿ: ಜೇಸಿಐ ಭಾರತ ವಲಯ 15ರ ವ್ಯವಹಾರ ಸಮ್ಮೇಳನ "ಉನ್ನತಿ" ನ.7 ಆದಿತ್ಯವಾರ ಕುಂದಾಪುರ ಸಹನಾ ಕನ್ವೆನ್ಷನ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪೂರ್ವ ವಲಯ ಉಪಾಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಅವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ರಾಷ್ಟ್ರೀಯ ನಿರ್ದೇಶಕ ಕಾರ್ತಿಕೇಯ ಮಧ್ಯಸ್ಥ, ಸಮದ್ ಖಾನ್, ದೇವರಾಯ ದೇವಾಡಿಗ, ಡಾ. ವಿಜಯ್ ನೆಗಳೂರು, ಉದಯ ನಾಯ್ಕ್, ರಕ್ಷಿತ್ ವಂಡ್ಸೆ ಮುಂತಾದವರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ