|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಾರಸಿ ತೋಟದಲ್ಲಿ ಮಿನಿ ಗ್ರಂಥಾಲಯ ಉದ್ಘಾಟನೆ

ತಾರಸಿ ತೋಟದಲ್ಲಿ ಮಿನಿ ಗ್ರಂಥಾಲಯ ಉದ್ಘಾಟನೆ

'ಸಾವಯವ ಕೃಷಿಯೊಂದಿಗೆ ಸಾರಸ್ವತ ಕೃಷಿ': ಪುನರೂರು


ಮಂಗಳೂರು: ಆರ್ಯಭಟ ಪ್ರಶಸ್ತಿ ಪುರಸ್ಕೃತ ತಾರಸಿ ತೋಟ ಕೃಷಿಕ ಪಡ್ಡಂಬೈಲ್ ಕೃಷ್ಣಪ್ಪ ಗೌಡರ ಮರೋಳಿ ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆ ಮೀನಾಕ್ಷಿ ಕೃಪಾ ಮನೆಯ ಮೇಲ್ಛಾವಣಿಯಲ್ಲಿ ಬೆಳೆಸಲಾದ ಕೈತೋಟದ ಸಮೀಪ ಮಿನಿ ಗ್ರಂಥಾಲಯವೊಂದನ್ನು ತೆರಯಲಾಗಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು.


'ಪುಸ್ತಕ ಸಂಗ್ರಹ ಮತ್ತು ಸಾಹಿತ್ಯದ ಚಟುವಟಿಕೆಗಳೂ ಒಂದು ವಿಧದ ಕೃಷಿಯೇ. ಸಾವಯವ ಕೃಷಿಯೊಂದಿಗೆ ಪುಟ್ಟ ಪುಸ್ತಕ ಪ್ರಪಂಚವನ್ನು ತೆರೆದಿರುವ ಕೃಷ್ಣಪ್ಪ ಗೌಡರು ಓರ್ವ ಸಾರಸ್ವತ ಕೃಷಿಕ' ಎಂದವರು ನುಡಿದರು. ಕಾರ್ಯಕ್ರಮಕ್ಕೆ ದೂರದ ಕೊಪ್ಪಳದಿಂದ ಆಗಮಿಸಿದ ಸಾಹಿತಿಗಳು ಪುಸ್ತಕದ ಕೊಡುಗೆ ನೀಡಿದರು.




ಪುಸ್ತಕ ಪ್ರೀತಿ ಬೆಳೆಯಲಿ: ಕುಕ್ಕುವಳ್ಳಿ


ಸಮಾರಂಭದಲ್ಲಿ ಕೊಪ್ಪಳ ಜಿಲ್ಲೆಯ ಲೇಖಕಿ ಶರಣಮ್ಮ ಅಮರೇಶ ಪಾಟೀಲ ಅವರ 'ಕಾವ್ಯನಮನ' ಮತ್ತು 'ಶಿವಯೋಗ ಸಿರಿ' ಕವನಸಂಕಲನಗಳನ್ನು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಬಿಡುಗಡೆಗೊಳಿಸಿದರು. ಅವರು ಮಾತನಾಡಿ 'ಓದು ಮತ್ತು ಬರಹದ ಹವ್ಯಾಸಗಳು ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ಬೆಳೆಸಬೇಕಾಗಿದೆ. ಸಾಧ್ಯವಾದಷ್ಟು ಪುಸ್ತಕಗಳನ್ನು ಸಂಗ್ರಹಿಸಿ ಮನೆ ಮನೆಗಳಲ್ಲಿ ಗ್ರಂಥಾಲಯಗಳನ್ನು ತೆರೆದರೆ ತನ್ನಿಂದ ತಾನೆ ಮಕ್ಕಳಲ್ಲಿ ಓದಿನ ಕಡೆಗೆ ಆಸಕ್ತಿ ಮೂಡುತ್ತದೆ. ಇದರಿಂದ ಯುವ ಸಮುದಾಯದಲ್ಲಿ ವೈಚಾರಿಕತೆ ಮತ್ತು ಚಿಂತನ ಶಕ್ತಿ ಜಾಗೃತಗೊಳ್ಳುವುದಲ್ಲದೆ ಸ್ವತಂತ್ರವಾಗಿ ಬರೆಯುವ ಸಾಮರ್ಥ್ಯವೂ ಉಂಟಾಗುವುದು' ಎಂದರು.  


ಇದೇ ಸಂದರ್ಭದಲ್ಲಿ ಕೊಪ್ಪಳದ ಕೋಮಲಾ ಕುದರಿಮೋತಿ ಅವರ 'ಮುತ್ತಿನ ಮಾಲೆ', ಶ್ರೀನಿವಾಸ ಚಿತ್ರಗಾರರ 'ಮಿನಿ- ಹನಿ', ಡಾ.ಎನ್.ಕಪನೀಪತಯ್ಯ ಅವರ 'ಸುಲಭ ಮನೆಮದ್ದು' ಕೃತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಡಾ.ರಾಜೇಶ್ ಕದ್ರಿ,ಡಾ. ಫಕೀರಪ್ಪ ವಜ್ರಬಂಡಿ, ಜಗನ್ನಾಥ ಚಿತ್ರದುರ್ಗ, ಜಯಶೀಲ ಮರೋಳಿ ಮುಖ್ಯ ಅತಿಥಿಗಳಾಗಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. 


ತಾರಸಿ ಕೃಷಿಕ ಪಡ್ಡಂಬೈಲು ಕೃಷ್ಣಪ್ಪಗೌಡ ಸ್ವಾಗತಿಸಿದರು;  ಮೀನಾಕ್ಷಿ ಕೆ. ಗೌಡ ವಂದಿಸಿದರು. ಕು.ಅನಘ ಕಾರ್ಯಕ್ರಮ ಸಂಯೋಜಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم