|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಚಯ: ಸುಮಧುರ ಕಂಠದ ಭಾಗವತರು ಶ್ರೀಯುತ ಗಣೇಶ್ ಕುಮಾರ್ ನೆಲ್ಲಿಕಟ್ಟೆ

ಪರಿಚಯ: ಸುಮಧುರ ಕಂಠದ ಭಾಗವತರು ಶ್ರೀಯುತ ಗಣೇಶ್ ಕುಮಾರ್ ನೆಲ್ಲಿಕಟ್ಟೆ


ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಸಿದ್ಧ ಕಲೆ ಯಕ್ಷಗಾನ. ಇಂತಹ ಪ್ರಸಿದ್ಧ ಕಲೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ನಾವು ಇವತ್ತು ಪರಿಚಯ ಮಾಡುವ ಕಲಾವಿದರು ಬಡಗುತಿಟ್ಟಿನ  ಭಾಗವತರು ಶ್ರೀಯುತ ಗಣೇಶ್ ಕುಮಾರ್ ನೆಲ್ಲಿಕಟ್ಟೆ.


ಪಾತ್ರಿ ನಾರಾಯಣ ಮೊಗವೀರ ಹಾಗೂ ಗುಲಾಬಿ ದಂಪತಿಗಳ ಮಗನಾಗಿ ದಿನಾಂಕ 12.07.1985 ರಂದು ಇವರ ಜನನ. 8 ನೇ ತರಗತಿವರೆಗೆ ವಿದ್ಯಾಭ್ಯಾಸ. ದಿ.ಕಾಳಿಂಗ ನಾವಡರ ಪದ್ಯ ಕೇಳುತ್ತಾ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಆಯಿತು ಎಂದು ಹೇಳುತ್ತಾರೆ ನೆಲ್ಲಿಕಟ್ಟೆ. ಕೆ.ಪಿ ಹೆಗಡೆ, ಗುಂಡ್ಮಿ ದಿ ರಘುರಾಮ ಗಾಣಿಗ, ಎನ್.ಜಿ.ಹೆಗಡೆ ಇವರ ಯಕ್ಷಗಾನದ ಗುರುಗಳು.


ದಮಯಂತಿ, ಕೃಷ್ಣಾರ್ಜುನ, ಕರ್ಣಾಜುನ, ಧರ್ಮ ಸಂಕ್ರಾಂತಿ, ರಂಗನಾಯಕಿ ಇವರ ನೆಚ್ಚಿನ ಪ್ರಸಂಗಗಳು. ಹಿಂದೋಳ, ವಾಸಂತಿ ಇವರ ನೆಚ್ಚಿನ ರಾಗಗಳು. ನಗರ ಸುಬ್ರಹ್ಮಣ್ಯ ಆಚಾರ್ಯ, ಗೋಪಾಲ ಗಾಣಿಗ, ಉಮೇಶ್ ಸುವರ್ಣ, ರಾಘವೇಂದ್ರ ಮಯ್ಯ, ರವಿ ಸುರಾಲು, ಪರಮೇಶ್ವರ ನಾಯ್ಕ್, ಸದಾಶಿವ ಅಮೀನ್ ಇವರ ನೆಚ್ಚಿನ ಭಾಗವತರು. ಎನ್.ಜಿ.ಹೆಗಡೆ, ಬಾಲಕೃಷ್ಣ ಗಾಣಿಗ, ರಾಘವೇಂದ್ರ ಹೆಗಡೆ, ಶ್ರೀಕಾಂತ್ ಶೆಟ್ಟಿ, ಮಹೇಶ್ ಮಂದಾರ್ತಿ, ಶ್ರೀಧರ್ ಭಂಡಾರಿ, ರಮೇಶ್ ಕಡತೋಕ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು.


ಯಕ್ಷಗಾನ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-

ಜಗತ್ತಿಗೆ ಕರೋನ ಬಂದಿರುವುದರಿಂದ ಯಕ್ಷಗಾನ ಪ್ರದರ್ಶನ ಇಲ್ಲದಿರುವ ಕಾರಣ ಯಕ್ಷಗಾನ ಕಲಾವಿದರ ಇಂದಿನ ಸ್ಥಿತಿ ತುಂಬಾ ಕಷ್ಟವಾಗಿದೆ ಎಂದು ನೆಲ್ಲಿಕಟ್ಟೆ ಅವರು ಹೇಳುತ್ತಾರೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಇಂದಿನ ಪ್ರೇಕ್ಷಕರು ಕೆಲಸದ ಒತ್ತಡದಿಂದ ಕಾಲಮಿತಿ ಯಕ್ಷಗಾನವನ್ನೇ ನೋಡಲು ಬಯಸುತ್ತಾರೆ ಎಂದು ನೆಲ್ಲಿಕಟ್ಟೆ ಅವರು ಹೇಳುತ್ತಾರೆ.


ಯಕ್ಷಗಾನ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗಗಳನ್ನು ಅಭ್ಯಾಸ ಮಾಡಿ ಭಾಗವತಿಕೆಯಲ್ಲಿ ಮುಂದುವರೆಯಬೇಕೆಂಬ ಆಸೆ ಎಂದು ಹೇಳುತ್ತಾರೆ.


ಪುಸ್ತಕ ಓದುವುದು, ಕೃಷಿ ಇವರ ಹವ್ಯಾಸಗಳು. ಹಾಲಾಡಿ (2 ವರ್ಷ), ಸೌಕೂರು (2 ವರ್ಷ), ಸಾಲಿಗ್ರಾಮ (1 ವರ್ಷ) ತಿರುಗಾಟ ಮಾಡಿ ಕಳೆದ 9 ವರ್ಷಗಳಿಂದ ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.


10.06.2011 ರಂದು ಸತ್ಯವತಿ ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳಾದ ತನ್ಮಯ್, ತಸ್ಮಾಯ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ತಂದೆ, ತಾಯಂದಿರು ಹಾಗೂ ಯಕ್ಷ ಬದುಕಿನ ಬೆಳವಣಿಗೆಗೆ ಸಹಕಾರವಿತ್ತ ಪ್ರತಿಯೊಬ್ಬರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂಬುದು ಅವರ ಅಂತರಾಳದ ನುಡಿ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 تعليقات

إرسال تعليق

Post a Comment (0)

أحدث أقدم