54ನೆ ವರ್ಷದ ಪಟ್ಟಾಭಿಷೇಕ ವರ್ಧಂತಿ: ಹೆಗ್ಗಡೆಯವರಿಗೆ ಅಭಿನಂದನೆಗಳ ಮಹಾಪೂರ

Upayuktha
0


ಶಾಸಕ ಹರೀಶ್ ಪೂಂಜರಿಂದ ಹೆಗ್ಗಡೆಯವರಿಗೆ ಅಭಿನಂದನೆ.


ಉಜಿರೆ: ಧರ್ಮಸ್ಥಳದಲ್ಲಿ ಭಾನುವಾರ ಎಲ್ಲೆಲ್ಲೂ ಸಂಭ್ರಮ-ಸಡಗರ, ಹಬ್ಬದ ವಾತಾವರಣ. ಧರ್ಮಸ್ಥಳದ 21ನೆ ಧರ್ಮಾಧಿಕಾರಿಯಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 54ನೆ ವರ್ಷದ ಪಟ್ಟಾಭಿಷೇಕ ವರ್ಧಂತಿ ಆಚರಣೆಯ ಸಂದರ್ಭ ಭಾನುವಾರ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಹೆಗ್ಗಡೆಯವರು ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.


ದೇವಸ್ಥಾನ, ಬಸದಿ, ಬೀಡು (ಹೆಗ್ಗಡೆಯವರ ನಿವಾಸ) ಹಾಗೂ ಅಮೃತವರ್ಷಿಣಿ ಸಭಾ ಭವನವನ್ನು ವಿಶೇಷ ವಿನ್ಯಾಸದಿಂದ ಅಲಂಕರಿಸಲಾಗಿದೆ.


ಆದಿಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಖ್ಯಾತ ಹೃದ್ರೋಗ ತಜ್ಞ ಡಾ. ಬಿ.ಎಂ. ಹೆಗ್ಡೆ ದೂರವಾಣಿ ಮೂಲಕ ಹೆಗ್ಗಡೆಯವರಿಗೆ ಶುಭಾಶಂಸನೆ ಮಾಡಿದರು.


ಒಡಿಯೂರು ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದ ಮಯಿ, ಶಾಸಕ ಸಂಜೀವ ಮಠಂದೂರು, ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾಜಿ ಶಾಸಕರುಗಳಾದ ಶಕುಂತಲಾ ಶೆಟ್ಟಿ ಮತ್ತು ಕೆ. ಪ್ರಭಾಕರ ಬಂಗೇರ, ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಸರ್ವ ಸದಸ್ಯರು, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಮತ್ತು ಸದಸ್ಯರು, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ., ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಮಂಗಳೂರಿನ ಕೆ. ರಾಜವರ್ಮ ಬಳ್ಳಾಲ್, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಮ್ಯಾನೇಜರ್ ಎಂ. ಜಿನರಾಜ ಶೆಟ್ಟಿ ಮೊದಲಾದವರು ಹೆಗ್ಗಡೆಯವರನ್ನು ಭೇಟಿಯಾಗಿ ಶ್ರದ್ಧಾ-ಭಕ್ತಿಯಿಂದ ಗೌರವಾರ್ಪಣೆ ಮಾಡಿದರು.


ಶ್ರೀ ಹೆಗ್ಗಡೆಯವರು ಪ್ರತಿಯೊಬ್ಬರಲ್ಲಿ ಯೋಗ-ಕ್ಷೇಮ ವಿಚಾರಿಸಿ ಆಶೀರ್ವದಿಸಿ ಸಂತಸ ವ್ಯಕ್ತಪಡಿಸಿದರು.


ಪಟ್ಟಾಭಿಷೇಕ ವರ್ಧಂತಿ ಆಚರಣೆ ಅಂಗವಾಗಿ ದೇವಳ ನೌಕರರಿಗೆ ವಿವಿಧ ಸ್ಪರ್ಧೆಗಳು, ಹಿರಿಯ ನೌಕರರ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ಹೆಗ್ಗಡೆಯವರಿಂದ ಹೊಸ ಯೋಜನೆಗಳ ಪ್ರಕಟ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


1968ರ ಅಕ್ಟೋಬರ್ 24ರಂದು ತನ್ನ ಇಪ್ಪತ್ತನೆ ವರ್ಷ ಪ್ರಾಯದಲ್ಲಿ ಅಂದಿನ ವೀರೇಂದ್ರ ಕುಮಾರ್ ನೆಲ್ಯಾಡಿ ಬೀಡಿನಲ್ಲಿ ಧರ್ಮಸ್ಥಳದ ಸಂಪ್ರದಾಯದಂತೆ 21ನೆ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. ನಂತರ ಪ್ರತಿ ವರ್ಷ ಅಕ್ಟೋಬರ್ 24ರಂದು ದೇವಳ ನೌಕರ ವೃಂದ ಮತ್ತು ಊರಿನವರ ಸೇರಿ ಸರಳವಾಗಿ ಪಟ್ಟಾಭಿಷೇಕ ವರ್ಧಂತಿಯನ್ನು ಸರಳವಾಗಿ ಆಚರಿಸುತ್ತಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top