ಯಾವುದೇ ಹಂಗಿಲ್ಲದೇ ಹುಟ್ಟುವುದು ನಿಜವಾದ ಕವಿತೆ: ಸಾಹಿತಿ ರಘು ಇಡ್ಕಿದು

Upayuktha
0


ಮಂಗಳೂರು: 'ಜಗತ್ತು ನಿಂತಿರುವುದೇ ಪ್ರೀತಿ ಪ್ರೇಮದ ಮೇಲೆ. ಮನುಷ್ಯರೊಳಗಿನ ಪ್ರೇಮ ಭಾವ ಹೊರಬಾರದೇ ಹೋದರೆ ಸಮಾಜದಲ್ಲಿ ದ್ವೇಷ ಅಸೂಯೆ ಮತ್ಸರ ಮನೆ ಮಾಡುತ್ತದೆ. ಹಾಗಾಗಿ ಪ್ರೇಮ ಕವಿತೆಗಳಿಗೂ ಮಹತ್ವವಿದೆ. ಇತ್ತೀಚಿನ ದಿನಗಳಲ್ಲಿ ಪ್ರೇಮ ಕವಿತೆಗಳನ್ನು ಬರೆಯುವ ಕವಿಗಳು ಕಡಿಮೆಯಾಗಿದ್ದಾರೆ. ಟೀಕೆಗಳು ಬರಬಹುದು ಎಂಬ ಕಾರಣಕ್ಕೆ ಕವಿಗಳು ಹಿಂಜರೆಯುತ್ತಿರಬಹುದು ಅಥವಾ ಸಮಾಜದ ದುಗುಡಗಳಿಂದಲೇ ಪ್ರೇಮ ಕವಿತೆಗಳು ಹುಟ್ಟದಿರಬಹುದು. ಕವಿಯಾದವನಿಗೆ ದೇಶ, ಭಾಷೆ, ಜಾತಿ, ಪಂಥ, ಕಾಲ ವಯಸ್ಸುಗಳೆಂಬ ಹಂಗುಗಳಿರುವುದಿಲ್ಲ. ಹಾಗಾಗಿ ಪ್ರೇಮ ಕವಿತೆಯನ್ನು ಯುವಕರೇ ಬರೆವಬೇಕೆಂದೇನಿಲ್ಲ ಆ ವಯಸ್ಸು ಮೀರಿದ ಮೇಲೂ ಬರೆಯಬಹುದು. ಯಾವುದೇ ಹಂಗುಗಳಿಗೆ ಬೀಳದೇ ಹುಟ್ಟಿಕೊಳ್ಳುವ ಕವಿತೆ ಮಾತ್ರವೇ ನಿಜವಾದ ಕವಿತೆಯಾಗುತ್ತದೆ' ಎಂದು ಹೆಸರಂತ ಸಾಹಿತಿ ರಘು ಇಡ್ಕಿದು ಅವರು ಹೇಳಿದರು.


ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಗುರುವಾರ (ಸೆ. 30) ಆಯೋಜಿಸಿದ್ದ 'ಪ್ರೇಮ ಚಂದನ' ಆನ್ಲೈನ್ ವೀಡಿಯೋ ಪ್ರೇಮ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.


ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಅಧ್ಯಕ್ಷತೆ ವಹಿಸಿ ಪರಿಷತ್ತಿನ ಆಶಯವನ್ನು ವಿವರಿಸಿದರು.

 . 

ರಮೇಶ್ ಎಂ.ಬಾಯಾರು, ಬಂಟ್ವಾಳ ಮೋನಪ್ಪ ಗೌಡ, ಎನ್. ಸುಬ್ರಾಯ ಭಟ್, ಚಿತ್ರಾಶ್ರೀ ಕೆ.ಎಸ್, ರೇಖಾ ನಾರಾಯಣ್, ಮಹಾಂತೇಶ್ ಕೋಳಿವಾಡ್, ಡಾ. ನಾರಾಯಣ ಭಟ್ ಕಾಯರ್ಕಟ್ಟೆ, ವಿಜಯ ಕಾನ ಪೆರ್ಲ, ಮಾನಸ ವಿಜಯ್ ಕೈಂತಜೆ, ಸತ್ಯವತಿ ಭಟ್ ಕೊಳಚಪ್ಪು, ಶಾರದಾ ಎ ಅಂಚನ್, ಹಮೀದ ಬೇಗಂ ದೇಸಾಯಿ ಬೆಳಗಾವಿ, ಡಾ.ಪೂರ್ಣಿಮಾ ಪಾಂಡಿಚೇರಿ, ರೋಹಿತ್ ಕುಮಾರ್ ಗೋರಿಗುಡ್ಡ, ಡಾ.ಸುರೇಶ್ ನೆಗಳಗುಳಿ, ವಿಜಯಲಕ್ಷ್ಮೀ ಚಿಪ್ಪಾರು, ಎಂ.ರಾಮಚಂದ್ರ ರಾವ್ ರಾಯಚೂರು, ವಿದ್ಯಾಶ್ರೀ ಎಸ್.ಅಡೂರು, ಶರಣ್ಯ ಪಡುಪಣಂಬೂರು, ಭಾಗ್ಯಶ್ರೀ ಕಂಬಳಕಟ್ಟ, ರೇಖಾ ಸುದೇಶ್ ರಾವ್, ಲಕ್ಷ್ಮೀ ವಿ. ಭಟ್, ರೇಮಂಡ್ ಡಿಕೂನಾ ತಾಕೊಡೆ, ಲತೀಶ್ ಎಂ ಸಂಕೊಳಿಗೆ, ಪ್ರೇಮಲತಾ ಸಿ ಎಸ್ ಚಿಪ್ಪಾರು, ವ.ಉಮೇಶ್ ಕಾರಂತ್, ವಾಣಿ ಲೋಕಯ್ಯ, ಮಾನಸ ಪ್ರವೀಣ್ ಭಟ್, ಸುಧಾ ಎನ್ ತೇಲ್ಕರ್ ಅನಂತಪುರ, ಆಕೃತಿ ಐ ಎಸ್ ಭಟ್, ರಶ್ಮಿ ಸನಿಲ್, ವಿಜೇಶ್ ದೇವಾಡಿಗ, ಹಿತೇಶ್ ಕುಮಾರ್ ಎ. ನೀರ್ಚಾಲು, ವಾಸಂತಿ ಅಂಬಲಪಾಡಿ, ಸುಪ್ರಿಯ ಮಂಗಳೂರು, ಮುದ್ದು ಮೂಡುಬೆಳ್ಳೆ, ಗಣೇಶ್ ಪ್ರಸಾದ್ ಜಿ.ನೆಲ್ಲಿಕಾರು, ಅರುಂಧತಿ ವಿ.ರಾವ್, ಭಾರತಿ ರಘು, ಸಲೀಂ ಮಾಣಿ, ಅರ್ಚನಾ ಎಂ.ಬಂಗೇರಾ ಕುಂಪಲ ಹೀಗೆ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರದ 41 ಕವಿ ಕವಯಿತ್ರಿಯರು ಗೋಷ್ಠಿಯಲ್ಲಿ ಭಾಗವಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top