||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ವಿದ್ಯಾಲಯದಲ್ಲಿ ಶಾಸ್ತ್ರೀಜಿ ಹಾಗೂ ಗಾಂಧೀಜಿ ಜನ್ಮದಿನಾಚರಣೆ

ಅಂಬಿಕಾ ವಿದ್ಯಾಲಯದಲ್ಲಿ ಶಾಸ್ತ್ರೀಜಿ ಹಾಗೂ ಗಾಂಧೀಜಿ ಜನ್ಮದಿನಾಚರಣೆ

 ದೇಶದ ಮಹಾನ್ ನಾಯಕರಲ್ಲಿ ಶಾಸ್ತ್ರೀಜಿ ಕೂಡ ಒಬ್ಬರು: ಸವಿತಾ ಶೆಟ್ಟಿಪುತ್ತೂರು: ಹುಟ್ಟಿನಿಂದಲೇ ಸರಳ ಸಜ್ಜನಿಕೆಯ ಗುಣವನ್ನು ತನ್ನಲ್ಲಿ ಮೈಗೂಡಿಸಿಕೊಂಡವರು ನಮ್ಮ ದೇಶದ ಹೆಮ್ಮೆಯ ಎರಡನೇ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು. ದೇಶದ ಮಹಾನ್ ನಾಯಕರಲ್ಲಿ ಅವರು ಕೂಡ ಒಬ್ಬರು. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ದೇಶದುದ್ದಕ್ಕೂ ಸಾರಿದವರು. ತಮ್ಮ ಪ್ರಾಮಾಣಿಕ ಗುಣದಿಂದ ಎಲ್ಲರ ಮನಗೆದ್ದು ಮನೆ ಮಾತಾದ ವಿಶಿಷ್ಟ ವ್ಯಕ್ತಿ ಅವರು ಎಂದು ನಿವೃತ್ತ ಸಿಆರ್‍ಪಿಎಫ್ ಅಧಿಕಾರಿ ಸವಿತಾ ಶೆಟ್ಟಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದಲ್ಲಿ ಶನಿವಾರ ನಡೆದ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಮಹಾತ್ಮಾ ಗಾಂಧೀಜಿ ಅವರ ಜನ್ಮ ಜಯಂತಿ ಹಾಗೂ ವಿದ್ಯಾಲಯದ ಮಂತ್ರಿಮಂಡಲಕ್ಕೆ ಚುನಾವಣೆಯ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


ಗಾಂಧೀಜಿಯನ್ನು ಈ ದೇಶದ ಜನ ಬಾಪೂಜಿ, ಮಹಾತ್ಮ ಎಂದು ಕೊಂಡಾಡುತ್ತಾರೆ. ಸತ್ಯ, ಅಹಿಂಸೆ ಮತ್ತು ಪ್ರಾಮಾಣಿಕತೆಯ ಮೂಲಕ ಹೋರಾಟವನ್ನು ಮಾಡಿ ದೇಶದುದ್ದಕ್ಕೂ ಸಂಚರಿಸಿ ಎಲ್ಲರ ಮನ ಗೆದ್ದ ವ್ಯಕ್ತಿ ಅವರು. ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸಿ ಮಾನವತೆಯ ಸಂದೇಶವನ್ನು ಸಾರಿದರು. ಹಲವು ಬಾರಿ ಸೆರೆಮನೆ ವಾಸ ಅನುಭವಿಸಿದರು. ಮಾಡು ಇಲ್ಲವೇ ಮಡಿ, ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಮಾಡಿದ ಗಾಂಧೀಜಿ ಒಬ್ಬ ವ್ಯಕ್ತಿ ಯಾಗಿರದೆ ಶಕ್ತಿಯಾಗಿದ್ದರು ಎಂದು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಬೇಕು, ಶಾಸ್ತ್ರೀಜಿ ಅವರಂಥ ನಾಯಕರು ಈ ದೇಶವನ್ನು ಆಳುವುದಕ್ಕೆ ಮುಂದೆ ಬರಬೇಕು, ದೇಶದ ಪ್ರಧಾನಮಂತ್ರಿಯಾಗಿ  ತಾವು ಮಾಡಿದ ಕೆಲಸದಲ್ಲಿ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಜನರ ಬಾಯಲ್ಲಿ ಮನೆಮಾತಾದವರು. ಇಂತಹ ಮಹಾ ನಾಯಕರುಗಳು  ನಮ್ಮ ದೇಶದಲ್ಲಿ ಮತ್ತೆ ಮತ್ತೆ ಹುಟ್ಟಿ ಬರಬೇಕು ಎಂದರು.


ಪ್ರತಿಯೊಬ್ಬರಲ್ಲಿಯೂ ನಾಯಕತ್ವಗುಣ ಬೆಳೆಯಬೇಕು, ಮಾತಿನಲ್ಲಿ ಮಾತ್ರವಲ್ಲದೆ ನಡೆಯಲ್ಲಿಯೂ ಅದನ್ನು ತೋರಿಸಬೇಕು. ನಾಯಕನಾದವನು ಈ ದೇಶವನ್ನು ಕೊಳ್ಳೆ ಹೊಡೆಯುವವನಾಗದೆ ದೇಶದ ಸವಾರ್ಂಗೀಣ ಪ್ರಗತಿಗೆ ಸದಾ ದುಡಿಯುವವನಾಗಬೇಕು. ಹಾಗಾಗಿ ಇಂತಹ ಈ ದೇಶ ಕಂಡ ಮಹಾನಾಯಕ ಶಾಸ್ತ್ರೀಜಿ ಎಂದು ಹೇಳಿದರಲ್ಲದೆ ಭಾರತ ಪಾಕಿಸ್ಥಾನಗಳ ನಡುವಣ ಯುದ್ಧ ಸಂದರ್ಭದಲ್ಲಿ ಅಮೇರಿಕಾ ಪಾಕಿಸ್ಥಾನಕ್ಕೆ 40 ಯುದ್ಧ ಬುಲೆಟ್ ಟ್ಯಾಂಕರ್ ನೀಡಿ ಸಹಕರಿಸಿದರೂ ಶಾಸ್ತ್ರೀಜಿಯವರ ಪ್ರೇರಣೆಯಿಂದ ಭಾರತೀಯ ಸೈನಿಕರು ಪಾಕಿಸ್ಥಾನವನ್ನು ಮಣಿಸಿದ್ದರೆಂಬುದು ಗಮನಾರ್ಹ ಎಂದು ಹೇಳಿದರು.


ವಿದ್ಯಾಲಯದ ಶೈಕ್ಷಣಿಕ ವರ್ಷದ ನಾಯಕ ಉಪನಾಯಕರಾಗಿ ಆಯ್ಕೆಯಾದ ಇಶಾನ್ ಎಸ್ ಭಟ್ ಹಾಗೂ ಪ್ರವರ್ಧನ್ ಕೆ. ಪಿ. ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ವಿದ್ಯಾರ್ಥಿ ಮಂತ್ರಿಮಂಡಲದಲ್ಲಿ ಆಯ್ಕೆಯಾದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಭಟ್ ಪ್ರಮಾಣವಚನ ಬೋಧಿಸಿದರು.  


ಸಮಾರಂಭದಲ್ಲಿ ಅಂಬಿಕಾ ಸಿಬಿಎಸ್‍ಸಿ ವಿದ್ಯಾಲಯದ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರುತೀ ಸಂದರ್ಭದಲ್ಲಿ ಹಿಂದಿನ ವರ್ಷದ ನಾಯಕ ಉಪನಾಯಕರು ಹೊಸ ವರ್ಷದ ನಾಯಕ, ಉಪ ನಾಯಕರುಗಳಿಗೆ ಅಧಿಕಾರ ಹಸ್ತಾಂತರ ನಡೆಸಿದರು. ವಿದ್ಯಾರ್ಥಿಗಳಿಂದ ಭಜನೆ ನಡೆಯಿತು. 

ವಿದ್ಯಾರ್ಥಿನಿಯರಾದ ರಿಧಿ, ಇಶಾ ಕೀರ್ತಿ ಪ್ರಾರ್ಥಿಸಿ, ಯಶಸ್ವಿನಿ ಅತಿಥಿಗಳ ಪರಿಚಯ ಮಾಡಿದರು. ಅದ್ವೈತ ಕೃಷ್ಣ, ಆದ್ಯಾ ಎಸ್ ರೈ ಕಾರ್ಯಕ್ರಮ ನಿರೂಪಿಸಿ, ಮನಸ್ವಿತ್ ವಂದಿಸಿದರು.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post