||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜೇನು ಕೃಷಿಯಿಂದಲೇ ಗ್ರಾಮ ಸ್ವರಾಜ್ಯವೆಂದ ಮಹಾತ್ಮ

ಜೇನು ಕೃಷಿಯಿಂದಲೇ ಗ್ರಾಮ ಸ್ವರಾಜ್ಯವೆಂದ ಮಹಾತ್ಮ

 ನಿನ್ನೆ ಮಹಾತ್ಮ ಗಾಂಧಿಯವರ ಜನ್ಮ ದಿನವನ್ನು ದೇಶದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ದೇಶಕ್ಕೆ ಸ್ವಾತಂತ್ರ ಬಂದ ದಿನದಿಂದಲೇ ಗ್ರಾಮ ಸ್ವರಾಜ್ಯದ ಕನಸು ಮಹಾತ್ಮನ ಹೃದಯದಲ್ಲಿ. ಈ ಕನಸು ಈಡೇರ ಬೇಕಾದರೆ ಜೇನು ಕೃಷಿಯೊಂದು ಸಾಧನವೆಂಬ ಆದಮ್ಯ ಆತ್ಮ ವಿಶ್ವಾಸ. ಇದಕ್ಕಾಗಿ ಜೇನು ಕೃಷಿ ಕುರಿತ ಚಟುವಟಿಕೆಗಳನ್ನು ತಮ್ಮ ಗ್ರಾಮೀಣ ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಹಮ್ಮಿಕೊಂಡರು. ಇದರಲ್ಲಿ ಜೇನು ಸಾಕಾಣಿಕೆಯ ಮಹತ್ವವನ್ನು ಒತ್ತಿ ಹೇಳಿದರು.


ಇವರ ಚಟುವಟಿಕೆಗಳಿಂದ ಸ್ಪೂರ್ತಿಗೊಂಡ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಸಾಂಪ್ರದಾಯಕ ಗ್ರಾಮೋದ್ಯೋಗಗಳನ್ನು ಪುನರುಜ್ಜೀವನಗೊಳಿಸಲು ಆಧುನಿಕ ಜೇನು ಕೃಷಿಯನ್ನು ಪರಿಚಯಿಸುವ ಮತ್ತು ಜನಪ್ರಿಯಗೊಳಿಸುವ ಮೂಲಕ ಅತ್ಯಂತ ಆಂತರಿಕ ಪ್ರದೇಶಗಳಲ್ಲಿ ವಾಸಿಸುವ ಜನರ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವ ದೃಷ್ಠಿಯಿಂದ ಜೇನು ಸಾಕಣೆ ಉದ್ಯಮದ ಅಭಿವೃದ್ದಿಯ ಕಾರ್ಯವನ್ನು ತೆಗೆದುಕೊಂಡಿತು. ಇದರ ಪಲವೇ ಮುಂದೆ 1962ರಲ್ಲಿ ಪುಣೆಯಲ್ಲಿ ಜೇನು ಸಂಶೋಧನೆ ಮತ್ತು ತರಭೇತಿ ಸಂಸ್ಥೆಯ ಉಗಮಕ್ಕೆ ಕಾರಣವಾಯಿತು. ಮಹಾತ್ಮನಿಗೆ ಕೈಜೋಡಿಸಿದ ಇತರ ಸ್ವಾತಂತ್ರ ಸೇನಾನಿಗಳಾದ ಶ್ರೀಮತಿ ರಮಾದೇವಿ ಮತ್ತು ಒರಿಸ್ಸಾದ ಮನಮೋಹನ್ ಚೌಧರಿ, ಜಮ್ಮು ಮತ್ತು ಕಾಶ್ಮೀರದ ಶ್ರೀ ರಾಜದಾನ್ ಭಾರತದಲ್ಲಿ ಆಧುನಿಕ ಜೇನು ಸಾಕಾಣಿಕೆಯ ಅಭಿವೃದ್ದಿಗಾಗಿ ಪಣತೊಟ್ಟು ದುಡಿದರು.


ಗ್ರಾಮಗಳ ಆರೋಗ್ಯಕರ ಆರ್ಥಿಕ ವ್ಯವಸ್ಥೆಗೆ ಜೇನು ಕೃಷಿಯ ಮಹತ್ವವನ್ನು ಅರಿತ ಮಹಾತ್ಮ ಗಾಂಧಿ ತಮ್ಮ ಆಶ್ರಮದಲ್ಲಿಯೇ ಜೇನು ಸಾಕಾಣಿಕೆ ಆರಂಬಿಸಿದ್ದರು. ಮಹಾತ್ಮ ಕಂಡ ಕನಸನ್ನು ನನಸಾಗಿಸಬೇಕಾದರೆ ಪ್ರತಿಯೊಬ್ಬ ಕೃಷಿಕನೂ ಜೇನು ಕೃಷಿಕನಾಗಬೇಕು ತನ್ಮೂಲಕ ಬೆಳೆಗಳ ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಿಸಿ ದೇಶವನ್ನು ಸುಸ್ಥಿರ ಕೃಷಿ ದೇಶವಾಗಿಸಬೇಕು. ಇಂದು ನಮ್ಮ ರಾಜ್ಯದಲ್ಲಿ ಶೇ 75ರ ಸಹಾಯಧನದಲ್ಲಿ ಜೇನು ಪೆಟ್ಟಿಗೆ ಹಾಗೂ ಕುಟುಂಬಗಳು ದೊರೆಯುತ್ತವೆ.


ನಮ್ಮ ರಾಜ್ಯವು ಭೌಗೋಳಿಕ ಸಸ್ಯಸಂಪತ್ತಿನಿಂದ ಹಾಗೂ ಅನುಕೂಲಕರ ವಾತಾವರಣವಿರುವುದರಿಂದ ಮತ್ತು ವರ್ಷವಿಡೀ ಉದ್ಯೋಗ ಲಭ್ಯವಾಗುವುದರಿಂದ ಹೆಚ್ಚಿನ ಯುವಕರು ಆಸಕ್ತಿವಹಿಸಿ ಉತ್ತಮ ತರಬೇತಿ ಪಡೆದು ಜೇನು ಸಾಕಾಣಿಕೆ ಆರಂಬಿಸಿದರೆ ಖಂಡಿತಾ ಮಹಾತ್ಮ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುವುದು.


-ಡಾ. ಪಿ. ಆರ್. ಬದರಿಪ್ರಸಾದ್

ಸಹಾಯಕ ಪ್ರಾಧ್ಯಾಪಕರು (ಕೀಟ ಶಾಸ್ತ್ರ)

ಕೃಷಿ ಮಹಾವಿದ್ಯಾಲಯ, ಗಂಗಾವತಿ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post