||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೀಪಾವಳಿ: ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯಾ

ದೀಪಾವಳಿ: ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯಾ


ಅಸತೋಮಾ ಸದ್ಗಮಯಾ, ತಮಸೋ ಮಾ ಜ್ಯೋತಿರ್ಗಮಯ, ಬೆಳಕಿನ ಹಬ್ಬವೇ ದೀಪಾವಳಿ, ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ ಈ ದೀಪಾವಳಿ. ದೀಪಾವಳಿಯ ಅಮವಾಸ್ಯೆಯ ಮುನ್ನಾದಿನ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಉದ್ದೇಶ ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ ವಿಚಾರಗಳಿಗೆ ಅಂಟಿಕೊಂಡಿರುವ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥದಿಂದ ಕೂಡಿದೆ. ಜೀವನದ ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗಿಸುತ್ತೇವೆ.


ದೀಪಾವಳಿ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ದೀಪ, ಹಣತೆ, ಮತ್ತು ಬೆಳಕು. ನಾವು ಪ್ರತಿನಿತ್ಯ ಸಾಯಂಕಾಲ ದೀಪ ಬೆಳಗುತ್ತೇವೆ. ದೀಪಾವಳಿ ಹಬ್ಬ ಹಣತೆ, ದೀಪ, ಹಾಗೂ ಬೆಳಕಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ. ಹಿಂದೂ ಸಂಸ್ಕ್ರತಿಯಲ್ಲಿ ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ದೀಪ ಬೆಳಗಿಸಿ ಕಾರ್ಯಾರಂಭ ಮಾಡುವುದು ನಮ್ಮ ಹಿಂದೂ ಸಂಸ್ಕ್ರತಿಯ ಒಂದು ಪದ್ಧತಿ. ನಂದಾದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುತ್ತೇವೆ. ದೀಪಗಳನ್ನೇ ಇಟ್ಟು ದೀಪಗಳನ್ನೇ ಈ ದೀಪಾವಳಿ ಸಂದರ್ಭದಲ್ಲಿ ಬೆಳಗುತ್ತೇವೆ. ದೀಪಾವಳಿ ಎನ್ನುವುದು ವಿಶೇಷವಾಗಿ ಋತು ಉತ್ಸವ. ನಮ್ಮ ಸನಾತನ ಧರ್ಮದಲ್ಲಿರುವ ಎಲ್ಲಾ ಹಬ್ಬಗಳನ್ನು ಋತುಗಳನ್ನು, ಪ್ರಕೃತಿಯಲ್ಲಿನ ಬದಲಾವಣೆ, ಮಾಸಗಳು, ತಿಥಿಗಳ ಬದಲಾವಣೆಗಳಿಗೆ ಹೊಂದಿಕೊಂಡು ಅದಕ್ಕೆ ತಕ್ಕಂತೆ ಆಚರಿಸುತ್ತೇವೆ. 


ದೀಪಗಳ ಸಾಲು:

ದೀಪಾವಳಿ (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮ ಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮ ಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಾಂದ್ರಮಾನ ಅವಲಂಬಿಸಿವೆ.


ನನ್ನ ಕಲ್ಪನೆಯ ದೀಪಾವಳಿ:

ದೀಪಾವಳಿ ನನ್ನ ಕಲ್ಪನೆಯ ಪ್ರಕಾರ ದೀಪಗಳ ಉತ್ಸವವಾದ ಈ ದೀಪಾವಳಿ ಯಾವಾಗಲೂ ನಮ್ಮ ಜೀವನದಲ್ಲಿ ನೆನಪಿಗೆ ಬರುವಂತೆ ಆಚರಣೆ ಮಾಡಬೇಕು. ದೀಪಾವಳಿ ಎಂಬ ಈ ವಿಶೇಷ ಹಬ್ಬದಂದು ಎಲ್ಲರೂ ಒಂದಾಗಿ ಈ ಹಬ್ಬದ ಆಚರಣೆ ಮಾಡಬೇಕು. ಮತ್ತು ಯಾವುದೇ ಶಬ್ದ ಮಾಲಿನ್ಯ ಉಂಟು ಮಾಡದೆ ಕೇವಲ ದೀಪ ಪ್ರಜ್ವಲಿಸುವ ಮುಖಾಂತರ ಈ ಹಬ್ಬದ ಆಚರಣೆ ಮಾಡಬೇಕು ಎಂದು ನನ್ನ ಕಲ್ಪನೆ. ಹಾಗೂ ಮನೆ ಮಂದಿ ಜೊತೆ ಸೇರಿ ದೀಪಾವಳಿ ಹಬ್ಬ ಆಚರಣೆ ಮಾಡುತ್ತೇವೆ ಎಂದು ನಾವು ಪಣತೊಡೋಣ.


ದೀಪಾವಳಿ ಒಂದು ಬಹುಮಾನ್ಯವಾದ ಉತ್ಸವ. ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವ ಹಬ್ಬ. ಕಾರ್ತೀಕ ದೀಪೋತ್ಸವ, ದೀಪೋತ್ಸವ, ಯಕ್ಷರಾತ್ರಿ ಮುಂತಾದ ನಾಮಾಂತರಗಳನ್ನು ಪ್ರಾಚೀನ ಉಲ್ಲೇಖಗಳಲ್ಲಿ ಕಾಣಬಹುದು. ಕಾರ್ತೀಕ ಮಾಸದುದ್ದಕ್ಕೂ ದೀಪೋತ್ಸವವನ್ನು ಆಚರಿಸಲಾಗುತ್ತದೆಯಾದರೂ ಆಶ್ವಿನ ಮಾಸದ ಕೊನೆಯ ಮೂರು ದಿವಸಗಳನ್ನೂ ಕಾರ್ತೀಕ ಮಾಸದ ಮೊದಲ ಎರಡು ದಿನಗಳನ್ನೂ ವಿಶೇಷವಾಗಿ ದೀಪಾವಳಿ ಉತ್ಸವವೆಂದೇ ಸರಣಿಯಲ್ಲಿ ಆಚರಿಸುವುದು ಭಾರತಾದ್ಯಂತ ಕಾಣಬರುತ್ತದೆ.

-ಕಾರ್ತಿಕ್ ಕುಮಾರ್ ಕೆ.

ದುರ್ಗಾನಿಲಯ, ಕಡೆಕಲ್ಲು, ಏತಡ್ಕ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post