|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಲೈವಾ ರಜನೀಕಾಂತಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ತಲೈವಾ ರಜನೀಕಾಂತಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ



ಭಾರತದ ಸಿನೆಮಾ ರಂಗದ ಮಹಾನ್ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯು ದೊರೆತಿದೆ. ಅದಕ್ಕೆ ಅವರು ಅತ್ಯಂತ ಅರ್ಹ ಆಗಿದ್ದಾರೆ. 


ಭಾರತೀಯ ಸಿನಿಮಾರಂಗಕ್ಕೆ ಗಣನೀಯ ಕೊಡುಗೆ ನೀಡಿದ ಓರ್ವ ವ್ಯಕ್ತಿಗೆ ಪ್ರತೀ ವರ್ಷವೂ ಈ ಪ್ರಶಸ್ತಿಯು ಲಭಿಸುತ್ತ ಬಂದಿದ್ದು ಈ ಬಾರಿ ರಜನೀಕಾಂತ್ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 


ಆರಂಭದಲ್ಲಿ ಬೆಂಗಳೂರಿನಲ್ಲಿ ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ಆಗಿ ತನ್ನ ಹೋರಾಟದ ಬದುಕನ್ನು ಆರಂಭ ಮಾಡಿದ ಶಿವಾಜಿ ರಾವ್ ಗಾಯಕವಾಡ (ರಜನಿಕಾಂತ್ ಮೊದಲ ಹೆಸರು) ಮೊದಲ ಬಾರಿಗೆ ಅಭಿನಯಿಸಿದ್ದು  ತಮಿಳು 'ಅಪೂರ್ವ ರಾಗಂಗಳ' ಸಿನೆಮಾದಲ್ಲಿ. ಅದು ಲೆಜೆಂಡರಿ ನಿರ್ದೇಶಕರಾದ ಕೆ.ಬಾಲಚಂದರ್ ಅವರು ನಿರ್ದೇಶನ ಮಾಡಿದ ಸಿನೆಮಾ. ಆರಂಭದ ಹತ್ತಾರು ಸಿನೆಮಾಗಳಲ್ಲಿ ರಜನಿ ಅಭಿನಯ ಮಾಡಿದ್ದು ವಿಲನ್ ಪಾತ್ರಗಳಲ್ಲಿ! 


ಮುಂದೆ ಭಾರತದ ಖ್ಯಾತನಾಮ ನಿರ್ದೇಶಕರಾದ  ಕೆ.ಬಾಲಚಂದರ್, ಭಾರತೀರಾಜ, ಬಾಲು ಮಹೇಂದ್ರ, ಪಿ. ವಾಸು, ಶಂಕರ್ ಮೊದಲಾದವರು ಅವರ ಒಳಗಿದ್ದ ದೈತ್ಯ ಅಭಿನಯ ಪ್ರತಿಭೆಯನ್ನು ಹೊರತೆಗೆದರು.  


ಈಗ ರಜನೀಕಾಂತ್ ಬೆಳೆದು ನಿಂತಿರುವ ರೀತಿಯನ್ನು ನೋಡಿದಾಗ ನಿಜವಾಗಿಯೂ ವಿಸ್ಮಯ ಮೂಡುತ್ತದೆ. ವರ್ಷಕ್ಕೆ ಒಂದು, ಎರಡು ವರ್ಷಕ್ಕೆ ಒಂದು ಹೀಗೆ ಆಯ್ದ ಸಿನೆಮಾದಲ್ಲಿ ಅಭಿನಯ ಮಾಡುತ್ತಿರುವ ಆತನ ಶ್ರೇಷ್ಟ ಸಿನೆಮಾಗಳು ಕಡಿಮೆ ಅಂದರೂ 400-500 ಕೋಟಿ ರೂ.ಗಳಷ್ಟು ದುಡಿಯುತ್ತವೆ. ಆತನಿಗೆ ಜಗತ್ತಿನ ಎಲ್ಲ ಕಡೆಗಳಲ್ಲಿ ಅಭಿಮಾನಿ ಸಂಘಗಳಿವೆ. ಜಪಾನಿನ ಆತನ ಸಾವಿರ ಸಂಖ್ಯೆಯ ಅಭಿಮಾನಿಗಳು ರಜನಿ ಸಿನೆಮಾ ಬಿಡುಗಡೆ ಆದಾಗ ಭಾರತಕ್ಕೆ ಬಂದು ಸಿನೆಮಾ ನೋಡಿ ಹೋಗುತ್ತಾರೆ.


ಉತ್ತಮ ಪಾತ್ರ ದೊರೆತರೆ ಕೇವಲ ಒಂದು ರೂಪಾಯಿ ಸಂಭಾವನೆ ಪಡೆದು ಕೂಡ ರಜನೀಕಾಂತ್ ಅಭಿನಯ ಮಾಡಿದ್ದಿದೆ. ಚಾರಿಟಿಯಲ್ಲಿ ಕೂಡ ಆತ ಇತರರಿಗಿಂತ ಮುಂದೆ ಇದ್ದಾನೆ. ಶ್ರೇಷ್ಠವಾದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಈಗಾಗಲೇ ಆತನಿಗೆ ದೊರೆತಿವೆ.  


ಈ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಆತ ತನ್ನ ಗುರುವಾದ ಕೆ. ಬಾಲಚಂದ್ರನ್ ಅವರಿಗೆ ಸಮರ್ಪಣೆ ಮಾಡಿದ್ದಾರೆ ಮತ್ತು ತನ್ನ ಸಂಕಷ್ಟ ಕಾಲದಲ್ಲಿ ಸಹಾಯ ಮಾಡಿದ ಹಲವು ಗೆಳೆಯರನ್ನು ಪ್ರೀತಿಯಿಂದ ನೆನಪು ಮಾಡಿಕೊಂಡಿದ್ದಾರೆ. 

ತಲೈವಾ ರಜನೀಕಾಂತ್ ಅವರಿಗೆ ಶುಭವಾಗಲಿ.

-ರಾಜೇಂದ್ರ ಭಟ್ ಕೆ, 

ಜೇಸಿಐ ರಾಷ್ಟ್ರಮಟ್ಟದ ತರಬೇತುದಾರರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post