||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಸ್ತಮಾ ಸಮಸ್ಯೆ ನಿಯಂತ್ರಣಕ್ಕೆ ಯೋಗ, ಮುದ್ರೆಗಳು

ಅಸ್ತಮಾ ಸಮಸ್ಯೆ ನಿಯಂತ್ರಣಕ್ಕೆ ಯೋಗ, ಮುದ್ರೆಗಳು


ವಿಶ್ವ ಆರೋಗ್ಯ ಸಂಸ್ಥೆಯು (WHO) ‘ಆರೋಗ್ಯ’ ವನ್ನು ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸದೃಢವಾಗಿರುವ ಸ್ಥಿತಿಯೇ ಹೊರತು ಕೇವಲ ದೇಹದಾರ್ಢ್ಯ ಅಥವಾ ರೋಗವಿಲ್ಲದ ಸ್ಥಿತಿಯಲ್ಲವೆಂದು ವಿವರಿಸಿದೆ. ಆರೋಗ್ಯವು ಸೂಕ್ತವಾದ ಆಹಾರಕ್ರಮ, ಚಲನೆ, ಚಟುವಟಿಕೆಗಳು ಮತ್ತು ವಿಶ್ರಾಂತಿಯನ್ನು ಆಧರಿಸಿದೆ. ಈ ಮೂರರ ನಡುವೆ ಯಾವುದೇ ಅಸಮತೋಲನವಾದರೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ ವಿಶ್ರಾಂತಿ ನಡವಳಿಕೆಯ ಶಿಸ್ತಿನೊಂದಿಗೆ ಸಂಬಂಧವಿರುವುದರಿಂದ ಪ್ರಾಯಶಃ ಆಸನಗಳು, ಮತ್ತು ಬಂಧಗಳನ್ನು ಯೋಗದ ಅಭ್ಯಾಸಗಳಲ್ಲಿ ಅಳವಡಿಸಲಾಗಿದೆ.


ಅಸ್ತಮಾ ಒಂದು ದೀರ್ಘಕಾಲೀನ ಕಾಯಿಲೆ. ಅಸ್ತಮಾದಲ್ಲಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದು.  ಶ್ವಾಸನಾಳಗಳು ಗಾಳಿಯನ್ನು ಶ್ವಾಸಕೋಶದ ಒಳಗೆ ಹಾಗೂ ಹೊರಗೆ ಸಾಗಿಸುತ್ತದೆ. ಈ ಕಾಯಿಲೆ ಬಂದಾಗ ವಾಯು ಸಂಚಾರವಾಗುವ ಶ್ವಾಸನಾಳಗಳ ಒಳಗೋಡೆಗಳು ಊದಿಕೊಳ್ಳುತ್ತವೆ. ಇದರಿಂದ ಸಮರ್ಪಕವಾಗಿ ಉಸಿರಾಡಲು ಕಷ್ಟವಾಗುತ್ತದೆ. ಶ್ವಾಸಕೋಶಕ್ಕೆ ಗಾಳಿ ಕಡಿಮೆ ಹೋಗುತ್ತದೆ. ಇದರಿಂದ ಉಸಿರಾಟದಲ್ಲಿ ತೊಂದರೆ ಉಂಟಾಗಿ ಕೆಮ್ಮು, ಕಫ, ಎದೆ ಬಿಗಿತ, ಇತ್ಯಾದಿ ಲಕ್ಷಣಗಳು ಕಂಡು ಬರುತ್ತವೆ. (ವಿಶೇಷವಾಗಿ ರಾತ್ರಿ ಮತ್ತು ಮುಂಜಾನೆ ಸಮಯದಲ್ಲಿ).ಅಸ್ತಮಾ ಬರಲು ಕಾರಣಗಳು:

 ಕುಟುಂಬದ ಇತಿಹಾಸ

 ವಾತಾವರಣದಲ್ಲಿರುವ ಕೆಲವು ವಸ್ತುಗಳು (ವಾಯು ಮಾಲಿನ್ಯ)

 ಅಲರ್ಜಿ, ವೈರಲ್, ಸೋಂಕು

 ದೂಳಿನ ಕಣಗಳು

 ಪ್ರಾಣಿಗಳ ಚರ್ಮ, ಕೂದಲು

 ಸಿಗರೇಟಿನ ಹೊಗೆ

 ಹವಾಗುಣದ ಬದಲಾವಣೆ

 ಬಣ್ಣ, ಅಡುಗೆಯ ಘಾಟು ವಾಸನೆ

 ಸುವಾಸಿತ ವಸ್ತುಗಳು

 ಕೆಲವು ಆಹಾರ ಪದಾರ್ಥಗಳು

 ರೋಗನಿರೋಧಕ ಶಕ್ತಿ ಇಲ್ಲದೆ ಇರುವುದು.


ಈ ಅಸ್ತಮಾ ಸಮಸ್ಯೆಯ ನಿಯಂತ್ರಣಕ್ಕೆ ನಮ್ಮ ಭಾರತೀಯ ಸಂಸ್ಕೃತಿ ಕಲೆಯಾದ ಯೋಗವನ್ನು ಅಳವಡಿಸಿಕೊಂಡಾಗ ಅಸ್ತಮಾ ತೊಂದರೆಯನ್ನು ಸಾಕಷ್ಟು ನಿಯಂತ್ರಣ ದಲ್ಲಿಟ್ಟುಕೊಳ್ಳಬಹುದು. ಯೋಗ ಅಭ್ಯಾಸದಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ (Improving the breathing rate).  ಶ್ವಾಸಕೋಶದ ಮಾರ್ಗದಲ್ಲಿ ಸಮರ್ಪಕವಾಗಿ, ಸರಾಗವಾಗಿ ವಾಯು ಸಂಚಾರವಾಗುತ್ತದೆ. ಆದುದರಿಂದ  ಯೋಗಾಸನಗಳು, ಪ್ರಾಣಾಯಾಮಗಳು ಮತ್ತು ಧ್ಯಾನವನ್ನು ನಿತ್ಯ ನಿರಂತರವಾಗಿ ಅಭ್ಯಾಸಮಾಡಬೇಕು. ಯೋಗಾಸನಗಳಿಂದ ದೇಹದ ಒಳಗಿನ ಅಂಗಕ್ಕೆ ವ್ಯಾಯಾಮ ದೊರಕಿ, ರಕ್ತ ಪರಿಚಲನೆಯು ಸುಗಮವಾಗುವುದು. ಆಸನಗಳು ದೈಹಿಕ, ಭಾವನಾತ್ಮಕ ಹಾಗೂ ಮಾನಸಿಕ ಪ್ರತಿಬಂಧಕಗಳನ್ನು ತೆರವು ಗೊಳಿಸಲು ಸಹಾಯಕ. ದೇಹದ ಶಕ್ತಿ ಕೇಂದ್ರಗಳನ್ನು ಜಾಗ್ರತಗೊಳಿಸಲು ಹಾಗೂ ಶಾಂತತೆಯನ್ನು ಉಂಟು ಮಾಡಲು ಸಹಾಯಕ.


ಅಸ್ತಮಾ (ಗೊರಲು) ಸಮಸ್ಯೆಯ ನಿಯಂತ್ರಣಕ್ಕೆ ಇರುವ ಯೋಗಗಳ ಆಯ್ದ ಪಟ್ಟಿ: ಸರಳ ವ್ಯಾಯಾಮಗಳು, ಯೋಗಾಸನಗಳಲ್ಲಿ ಮುಖ್ಯವಾಗಿ ಅರ್ಧಚಕ್ರಾಸನ, ಪರ್ವತಾಸನ, ವಜ್ರಾಸನ, ಶಶಾಂಕಾಸನ, ಅರ್ಧ ಉಷ್ಟ್ರಾಸನ ಯಾ ಉಷ್ಟ್ರಾಸನ, ಸರ್ವಾಂಗಾಸನ, ಮಕರಾಸನ, ಭುಜಂಗಾಸನ, ಧನುರಾಸನ, ಊರ್ಧ್ವಮುಖ ಶ್ವಾನಾಸನ, ಅದೋಮುಖ ಶ್ವಾನಾಸನ, ವೀರಾಸನ, ಶವಾಸನ, ಪ್ರಾಣಾಯಾಮ ಧ್ಯಾನ ಹಾಗೂ ಮುದ್ರೆಗಳು.


ಯೋಗವನ್ನು ಅಭ್ಯಾಸ ಮಾಡುವ ಮುಂಚೆ ಯೋಗದ ಬಗ್ಗೆ ಮಾಹಿತಿ, ನಿಯಮಗಳನ್ನು ಪಡೆದು ಗುರುಮುಖೇನವೇ ಕಲಿತು, ನಿತ್ಯ ನಿರಂತರವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.


– ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ

2-72/5, ´ಪಾರಿಜಾತ´

ಬಿಷಪ್ ಕಂಪೌಂಡ್, ಕೊಂಚಾಡಿ ಅಂಚೆ,

ಯೆಯ್ಯಾಡಿ ಪದವು, ಮಂಗಳೂರು-575008.

ಮಂಗಳೂರು

ಮೊಬೈಲ್: 9448394987


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post