||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕನ್ನಡ ಸ್ಪಷ್ಟ ಬರೆವಣಿಗೆ ಕಮ್ಮಟ

ಕನ್ನಡ ಸ್ಪಷ್ಟ ಬರೆವಣಿಗೆ ಕಮ್ಮಟಬೆಂಗಳೂರು: ಬೆಂಗಳೂರಿನ ಸದ್ಭಾವನಾ ಪ್ರತಿಷ್ಠಾನವು ಕನ್ನಡದ ಲೇಖಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ಕನ್ನಡದಲ್ಲಿ ಸ್ಪಷ್ಟವಾಗಿ, ಸ್ವಚ್ಛವಾಗಿ ಬರೆಯುವ ಕ್ರಮವನ್ನು ಬೋಧಿಸುವ ಒಂದು ದಿನದ ಕಮ್ಮಟವನ್ನು ಸೆ.26ರ ಭಾನುವಾರದಂದು ಬೆಂಗಳೂರಿನ ಮಾಗಡಿ ಮುಖ್ಯರಸ್ತೆಯ ಶ್ರೀಗಂಧದ ಕಾವಲಿನಲ್ಲಿರುವ ಕೆಂಪೇಗೌಡ ನಿರ್ವಹಣಾ ಅಧ್ಯಯನ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದೆ.


ಇದು ಉಪನ್ಯಾಸ, ಪ್ರಾತ್ಯಕ್ಷಿಕೆ, ಚರ್ಚೆ ಮತ್ತು ಅಭ್ಯಾಸಗಳನ್ನು ಒಳಗೊಂಡಿರುತ್ತದೆ. ಭಾಷಾತಜ್ಞರಾದ ಕೆ. ರಾಜಕುಮಾರ್ ಅವರು ಕಮ್ಮಟದ ನಿರ್ದೇಶಕರಾಗಿರುತ್ತಾರೆ.


ಕನ್ನಡದ ಬಳಕೆಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಖಚಿತ ಪರಿಹಾರಗಳನ್ನು ದೊರಕಿಸಿಕೊಡುವ ಉದ್ದೇಶ ಈ ಕಮ್ಮಟದ್ದು. ಆಸಕ್ತರು ರೂ. 50/-ಗಳನ್ನು ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಮೊದಲ 50 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿದೆ. ಕಮ್ಮಟದಲ್ಲಿ ಭಾಗವಹಿಸುವವರಿಗೆ ಲೇಖನ ಸಾಮಗ್ರಿ ನೀಡಲಾಗುವುದು.


ಅಂದು ಸಂಜೆ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ಊಟದ ವ್ಯವಸ್ಥೆ ಉಂಟು. ಹೆಚ್ಚಿನ ಮಾಹಿತಿಗಾಗಿ ಸದ್ಭಾವನಾ ಪ್ರತಿಷ್ಠಾನದ ಎಂ. ಪ್ರಕಾಶಮೂರ್ತಿ ಅವರನ್ನು 9448709651 / 8762802170 ಕ್ಕೆ ಕರೆಮಾಡಿ ಸಂಪರ್ಕಿಸಬಹುದು.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post