ಮಂಗಳೂರು: ಸ್ಪೇನ್‍ನಲ್ಲಿ ನ. 28ರಿಂದ ಡಿ. 5ರ ವರೆಗೆ ನಡೆಯಲಿರುವ ವರ್ಲ್ಡ್ ಬ್ಯಾಡ್ಮಿಂಟನ್ ಫೆಡರೇಶನ್‍ನ (ಬಿಡಬ್ಲುಎಫ್) ವಿಶ್ವ ಹಿರಿಯರ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍ಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಎಸ್ಪಿ ಜಯಂತ್. ವಿ. ಶೆಟ್ಟಿ ಹಾಗೂ ಏಕಲವ್ಯ ಅವಾರ್ಡಿ ಎಂ. ಎಸ್. ಪುಟ್ಟರಾಜ್ ಜೋಡಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ಗೋವಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ಸೆ. 19ರಿಂದ 26ರ ವರೆಗೆ ಗೋವಾದ ಮನೋಹರ್ ಪರಿಕ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಅಖಿಲ ಭಾರತ ಮಾಸ್ಟರ್ಸ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍ನಲ್ಲಿ ವಿಶ್ವ ಹಿರಿಯರ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍ಗೆ ಆಯ್ಕೆ ನಡೆಸಲಾಯಿತು. 65 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಜಯಂತ್ ವಿ. ಶೆಟ್ಟಿ ಮತ್ತು ಎಂ.ಎಸ್. ಪುಟ್ಟರಾಜ್ ಜೋಡಿ ಡಬಲ್ಸ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ವಿಶ್ವ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ.
ಜಯಂತ್ ವಿ. ಶೆಟ್ಟಿ ಅವರು ಪೆÇಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ, ಎಸ್ಪಿಯಾಗಿ ನಿವೃತ್ತರಾಗಿದ್ದು, ಬೋಸ್ನಿಯಾದಲ್ಲಿ ಪೊಲೀಸ್ ಶಾಂತಿ ಪಡೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಅವರು ಅತ್ಯುತ್ತಮ ಕ್ರಿಕೆಟ್ ಪಟುವಾಗಿದ್ದು, ಕರ್ನಾಟಕ ರಾಜ್ಯ ಪುರುಷರ ಕ್ರಿಕೆಟ್ ತಂಡ ಹಾಗೂ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸಿದ್ದರು. ಅಖಿಲ ಭಾರತ ಪೆÇಲೀಸ್ ಅಧಿಕಾರಿಗಳ ಶಟ್ಲ್ ಟೂರ್ನಮೆಂಟ್‍ನಲ್ಲೂ ಸೆಮಿ ಫೈನಲ್ ತಲುಪಿದ್ದರು. ಎಂ. ಎಸ್. ಪುಟ್ಟರಾಜ್ ಅವರು ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಅಧಿಕಾರಿಯಾಗಿದ್ದು, ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ತಂಡವನ್ನು 25 ವರ್ಷಗಳಿಂದ ಪ್ರತಿನಿಧಿಸಿದ್ದರು. ನ್ಯಾಷನಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದರು.