|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಚಯ: ತೆಂಕುತಿಟ್ಟು ಯಕ್ಷಗಾನ ರಂಗದ ಹವ್ಯಾಸಿ ಚೆಂಡೆ, ಮದ್ದಳೆ ವಾದಕರು ವೇಷಧಾರಿ ಮಧ್ವರಾಜ್ ಅಡಿಗ

ಪರಿಚಯ: ತೆಂಕುತಿಟ್ಟು ಯಕ್ಷಗಾನ ರಂಗದ ಹವ್ಯಾಸಿ ಚೆಂಡೆ, ಮದ್ದಳೆ ವಾದಕರು ವೇಷಧಾರಿ ಮಧ್ವರಾಜ್ ಅಡಿಗ



ಕರಾವಳಿಯ ಗಂಡು ಕಲೆ ಎಂದೇ ಪ್ರಖ್ಯಾತಿ ಪಡೆದ ಯಕ್ಷಗಾನ ಕಲೆ ಸಾಧಿಸುವ ಛಲ ಇದ್ದರೆ ಯಾರಿಗೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ಶ್ರೀ ಮಧ್ವರಾಜ್ ಅಡಿಗ.


ಪುತ್ತೂರು ತಾಲೂಕಿನ ಪಾಣಾಜೆಯವರು ಪ್ರಸ್ತುತ ಪೆರ್ಲ ನಿವಾಸಿಯಾದಂತಹ ಶ್ರೀ ವೇದಮೂರ್ತಿ ಗೋಪಾಲಕೃಷ್ಣ ಅಡಿಗ ಹಾಗೂ ಶ್ರೀಮತಿ ಆಶಾ ಅಡಿಗ ದಂಪತಿಗಳ ಸುಪುತ್ರನಾಗಿ 29-09-1997 ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಯಕ್ಷಗಾನದ ಬಗ್ಗೆ ಅಪೂರ್ವ ಆಸಕ್ತಿಯನ್ನು ಹೊಂದಿದ್ದು, ತನ್ನ ತಂದೆ ಹವ್ಯಾಸಿ ಯಕ್ಷಗಾನ ಕಲಾವಿದರಗಿದ್ದು ಬಾಲ್ಯ ದಿನಗಳಲ್ಲಿ ತನ್ನ ಊರಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟವನ್ನು ಕಂಡು ಪ್ರೇರಿತರಾಗಿದ್ದರು. ತನ್ನ 12ನೇ ವರ್ಷ ಪ್ರಾಯದಲ್ಲಿ ಯಕ್ಷ ಶಿಕ್ಷಣದ ಬಾಲ ಪಾಠವನ್ನು ಗುರುಗಳಾದ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರಿಂದ ಕಲಿತು, ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾ ಸಂಘ ಆರ್ಲಪದವು ಎಂಬ ಸಂಸ್ಥೆಯಲ್ಲಿ "ರಾಜಾ ದಿಲೀಪ" ಎಂಬ ಪ್ರಸಂಗದಲ್ಲಿ ಈಶ್ವರನಾಗಿ ರಂಗಪ್ರವೇಶ ಮಾಡಿದರು. ನಂತರ ವಿಷ್ಣು, ಕೃಷ್ಣ, ಸುಧನ್ವ, ದೇವಿ, ಧೂಮ್ರಾಕ್ಷ, ರಾಮನಾಗಿ ಹೇಗೆ ಅನೇಕ ವೇಷಗಳನ್ನು ಊರು ಹಾಗೂ ಪರವೂರುಗಳಲ್ಲಿ ಪ್ರದರ್ಶನಗಳನ್ನು ನೀಡಿ ಉತ್ತಮ ಕಲಾವಿದರಾಗಿದ್ದರು.


ಮನೆಯಲ್ಲಿ ಯಕ್ಷಗಾನ ವಾತಾವರಣ ಇದ್ದುದರಿಂದ, ಯಕ್ಷಗಾನದ ಹಿಮ್ಮೇಳ ಕಲಿಯಬೇಕೆಂದು ಅದರಲ್ಲೂ ಚಂಡೆಮದ್ದಳೆ ವಾದಕನಾಗಬೇಕೆಂಬ ಕುತೂಹಲ, ಆಸಕ್ತಿ, ಆಕರ್ಷಣೆ, ಸೆಳೆತವು ಹದಿನಾಲ್ಕನೇ ವಯಸ್ಸಿನಲ್ಲಿ ಹೆಚ್ಚಾಯಿತು. ತನ್ನ ಮನೆಯವರ ಪ್ರೋತ್ಸಾಹದಿಂದ ಹಿಮ್ಮೇಳದ  ಪಾಠವನ್ನು ಗುರುಗಳಾದ ರಾಜೇಂದ್ರಪ್ರಸಾದ್ ಪುಂಡಿಕಾಯಿ ಇವರಿಂದ ಅಭ್ಯಾಸಿಸಿ, ಅನೇಕ ಪ್ರಸಂಗಗಳಲ್ಲಿ ಮದ್ದಳೆವಾದಕನಾಗಿ ಯಶಸ್ವಿ ಪ್ರದರ್ಶನಗಳನ್ನು ನೀಡಿದ್ದಾರೆ.


ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರಿನಲ್ಲಿ ಕಲಿತು. ದ್ವೈತ ವೇದಾಂತದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಹಾಗೂ ಪ್ರಸ್ತುತವಾಗಿ ಯೋಗ ದೀಪಿಕಾ ವಿದ್ಯಾಪೀಠ ಪಲಿಮಾರು ಮಠ ಉಡುಪಿ ಇಲ್ಲಿ ಪೌರೋಹಿತ್ಯ, ಆಗಮ, ಜ್ಯೋತಿಷ್ಯದ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ. ತನ್ನ ಶಿಕ್ಷಣದ ಜೊತೆಜೊತೆಗೆ ಯಕ್ಷಗಾನದ ಮೇಲಿರುವ ಪ್ರೀತಿ, ಆಸಕ್ತಿ, ಅಧ್ಯಯನ ಶೀಲತೆ ಇವೆಲ್ಲವೂ ಯುವಕಲಾವಿದರಿಗೊಂದು ಸ್ಪೂರ್ತಿಯೆಂದರೆ ತಪ್ಪಾಗಲಾರದು.


ಮಧ್ವರಾಜ್ ಅಡಿಗ ತನ್ನ ಸ್ವಪ್ರಯತ್ನದಿಂದ ಹಿಮ್ಮೇಳದ ಹಲವಾರು ಸೂಕ್ಷ್ಮಗಳನ್ನು ಯಕ್ಷಗಾನ ನೋಡುವುದರ ಮೂಲಕ ಹಾಗೂ ಯಕ್ಷರಂಗದ ಹಲವರೂ ಹಿರಿಯ ಹಿಮ್ಮೇಳವಾದಕರನ್ನು ತನ್ನ ಗುರುವಾಗಿ ಸ್ವೀಕರಿಸಿ ತನಗೆ ಹಿಮ್ಮೇಳದಲ್ಲಿ ಪ್ರೇರಣೆ, ಸ್ಪೂರ್ತಿಯಾದವರಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯಕೃಷ್ಣ ಪದ್ಯಾಣ, ಲವಕುಮಾರ್ ಐಲ, ಹಿರಣ್ಮಯ ಹಿರಿಯಡ್ಕ ಇವರ ಚೆಂಡೆ ಮದ್ದಳೆಯನ್ನು ನೋಡಿ ಹಲವಾರು ಸೂಕ್ಷ್ಮಗಳನ್ನು ಕಲಿತಿದ್ದೇನೆ ಹಾಗೂ ಕಲಿಯುತ್ತಿದ್ದೇನೆ ಎಂದು ಹೇಳುತ್ತಾರೆ ಮಧ್ವರಾಜ್.


ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ಹಾಗೂ ಇವರ ಪ್ರೋತ್ಸಾಹದಿಂದ ಯಕ್ಷಗಾನ ರಂಗದಲ್ಲಿ ಇನ್ನಷ್ಟು ಕಲಿಯುವಂತಹ ಅನುಭವ ಹಾಗೂ ಅವರ ಹಾಡಿಗೆ ಮದ್ದಳೆಯನ್ನು ನುಡಿಸಿ, ಸ್ವಾಮಿಗಳಿಂದ ಮೆಚ್ಚುಗೆಯನ್ನು ಗಳಿಸಿದ ಕಲಾಚತುರ. ಇವರಿಗೆ ಹಿಮ್ಮೇಳದಲ್ಲಿ ಪರಿಪೂರ್ಣವಾದ ಅವಕಾಶ ಕಲ್ಪಿಸಿದ್ದು ಯಕ್ಷರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಲು ಕಾರಣರಾದವರು ಶ್ರೀ ಕರುಣಾಕರ್ ಶೆಟ್ಟಿಗಾರ್ ಕಾಶಿಪಟ್ಣ ಅವರ ದಕ್ಷ ನಿರ್ದೇಶನದಲ್ಲಿ ನಡೆಯುತ್ತಿದ್ದ ಸುಂಕದಕಟ್ಟೆ ಮೇಳದಲ್ಲಿ. ಇವರ ಪ್ರೋತ್ಸಾಹದಿಂದ ಅನೇಕ ಅವಕಾಶಗಳು ದೊರೆತವು ಮತ್ತು ಅನೇಕ ಸಂಗತಿಗಳನ್ನು ಅವರ ಮೂಲಕ ತಿಳಿದುಕೊಂಡರು.


ಹಲವಾರು ಅವಕಾಶಗಳನ್ನು ಕಲ್ಪಿಸುವುದರ ಜೊತೆಗೆ ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸುವವರಲ್ಲಿ ಡಾ.ಸತೀಶ್ ಪುಂನ್ಚಿತ್ತಾಯ, ರಮೇಶ್ ಭಟ್ ಕದ್ರಿ, ಕೃಷ್ಣ ಕುಮಾರ್ ಆಚಾರ್ಯ ಮೈಸೂರು ಹೀಗೆ ಹಲವಾರು ಹಿರಿಯರು ದಾರಿದೀಪವಾಗಿದ್ದಾರೆ. ಎಡನೀರು, ಕಟೀಲು, ಸುಂಕದಕಟ್ಟೆ, ಕೊಲ್ಲಂಗಾನ, ಮಂಗಳದೇವಿ, ಬೆಂಕಿನಾಥೇಶ್ವರ ಮೇಳ, ಬಾಚಕೆರೆ ಇತ್ಯಾದಿ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವವೂ ಇದೆ. ಅಷ್ಟೇ ಅಲ್ಲದೆ ಮುಂಬೈ, ಬೆಂಗಳೂರು, ಮೈಸೂರು ಹಾಸನ, ಶಿವಮೊಗ್ಗ, ಉಡುಪಿ, ಮಂಗಳೂರು, ಕೇರಳ, ಊರಿನ ಸಂಘ-ಸಂಸ್ಥೆಗಳಲ್ಲಿ, ಕದ್ರಿ ಕದಳಿ ಕಲಾಕೇಂದ್ರ, ಕೇಶವ ಶಿಶು ಮಂದಿರ ಕಿನ್ಯಾ, ಕಳಸ ಹೇಗೆ ಹತ್ತೂರುಗಳಲ್ಲಿ ಸುತ್ತಾಡಿ ಕಲಾಸೇವೆಯನ್ನು ಮಾಡಿದ್ದಾರೆ.


ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾದ್ದರಿಂದ ಯಾವುದೇ ಪ್ರಚಾರವನ್ನು ಬಯಸಿದವರಲ್ಲ, ಅಷ್ಟು ಮಾತ್ರವಲ್ಲದೆ ಅನೇಕ ಯಕ್ಷಗಾನ ಕಾರ್ಯಕ್ರಮಗಳನ್ನು ತಾವೇ ಸಂಘಟಿಸಿ ಅದೆಷ್ಟೋ ಯುವ ಕಲಾವಿದ ಹಾಗೂ ಕಲಾವಿದೆಯರಿಗೆ ಅವಕಾಶವನ್ನು ಕಲ್ಪಿಸಿ, ತೆರೆಯ ಮರೆಯಲ್ಲಿರುವಂತಹ ಅನೇಕ ಕಲಾವಿದರಿಗೆ ಪ್ರೋತ್ಸಾಹವನ್ನು ಮಾಡಿದಂತಹ ಸಹೃದಯಿ ಇವರು. ಶ್ರೀ ದಿನೇಶ್ ಅಮ್ಮಣ್ಣಾಯ, ಪ್ರಸಾದ್ ಬಲಿಪರು, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು, ದಿ. ಕುಬಣೂರು ಶ್ರೀಧರ ರಾವ್, ಕರುಣಾಕರ ಶೆಟ್ಟಿಗಾರ್, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮುಂತಾದ ಮೇರು ಹಿರಿಯ ಕಲಾವಿದರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ.


ಯಕ್ಷಗಾನದ ಇಂದಿನಿ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನದ ಇಂದಿನ ಸ್ಥಿತಿಗತಿಗಳು ಏನೆಂದರೆ ಯಕ್ಷಗಾನ ಕಲೆಗೆ ಎಂದಿಗೂ ಅಳಿವಿಲ್ಲ, ಆದರೂ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಲೋ ಏನೋ ಯಕ್ಷಗಾನಕ್ಕೆ ಪ್ರೇಕ್ಷಕರೇ ಇಲ್ಲದ ಸಂದರ್ಭದಲ್ಲಿ ಇಂದಿನ ಅದೆಷ್ಟೋ ಯುವ ಕಲಾವಿದರು ಪರಂಪರೆಯ ಜೊತೆ ಜೊತೆಗೆ ಹೊಸ ಕಲ್ಪನೆಯನ್ನು ಯಕ್ಷಗಾನದಲ್ಲಿ ಅಳವಡಿಸಿ ಯಕ್ಷಗಾನವನ್ನು ಉಳಿಸುವಲ್ಲಿ, ಬೆಳೆಸುವಲ್ಲಿ ಶ್ರಮವಹಿಸಿ ಇಂತಹ ಮಹಾ ಕಲೆಯನ್ನು ವಿಶ್ವವ್ಯಾಪಿ ಮಾಡಿದಂತಹ ಗೌರವ ಇಂದಿನ ಕಲಾವಿದರಿಗೆ ಹಾಗೂ ಕಲಾಪ್ರೇಮಿಗಳಿಗೆ ಸಲ್ಲುವಂಥದ್ದು.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಇಂದಿನ ಜನರೇಷನ್ ಅಂದರೆ ಪೀಳಿಗೆ ಯಾವತ್ತು ಎಲ್ಲದರಲ್ಲೂ ಹೊಸತನ್ನು ಬಯಸುವಂತಹ ಕಾಲಗತಿ ಇಂದಿನದ್ದು. ಯಕ್ಷಗಾನದಲ್ಲೂ ಹಾಗೆಯೇ ಹಿಂದಿನ ಕಾಲಕ್ಕೆ ಹೋಲಿಕೆ ಮಾಡಿದರೆ ಇಂದು ಯಕ್ಷಗಾನವು ಅದೆಷ್ಟೋ ಹೊಸ ಹೊಸ ಆವಿಷ್ಕಾರಗಳನ್ನು, ಆಧುನಿಕರಿಸುವಿಕೆಯೊಂದಿಗೆ ಇಂಗ್ಲೀಷಲ್ಲಿ ಹೇಳುವುದಾದರೆ update ಆಗಿರುವುದರಲ್ಲಿ ಎರಡು ಮಾತಿಲ್ಲ. ಇಂದಿನ ಪ್ರೇಕ್ಷಕರು ಕೂಡ ಇಂತಹ ಆವಿಷ್ಕಾರಗಳನ್ನು ಹೆಚ್ಚು ಇಷ್ಟ ಪಡುತ್ತಾರೆ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಕೇಳಿದಾಗ ಹೀಗೆ ಹೇಳುತ್ತಾರೆ:-

ಮುಂದಿನ ನನ್ನ ಕಲಾಜೀವನದ ಯೋಜನೆಗಳೆಂದರೆ ಯಕ್ಷಗಾನದ ಪರಂಪರೆಗೆ ಧಕ್ಕೆ ಬಾರದಂತೆ ಯಕ್ಷಗಾನವನ್ನು ಉಳಿಸುವಲ್ಲಿ ಬೆಳೆಸುವಲ್ಲಿ ಕಲೆಗೆ ನನ್ನ ಸೇವೆ ಎಂದೆಂದೂ ಇರುತ್ತದೆ. ಯಕ್ಷಗಾನದ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಮಾಡುವಂತಹ ಕ್ರಿಯಾಶೀಲತೆ, ಉತ್ಸಾಹ ಎಷ್ಟೇ ಪ್ರಶಸ್ತಿ-ಪುರಸ್ಕಾರಗಳು ಬಂದರು ಕಲಿಯುವಂತಹ ಆಸಕ್ತಿ ಎಂದಿಗೂ ನನ್ನಿಂದ ಕಡಿಮೆಯಾಗದು. ಹಾಗೆಯೇ ನನ್ನಂತೆ ಅದೆಷ್ಟೋ ತೆರೆಯ ಮರೆಯಲ್ಲಿರುವಂತಹ ಅನೇಕ ಪ್ರತಿಭಾನ್ವಿತ ಕಲಾವಿದರನ್ನು ರಂಗದಲ್ಲಿ ಪರಿಚಯಿಸುವಂತಹ ಕಾರ್ಯ  ಮುಂದೆಯೂ ನಡೆಯುಸುವಂತೆ ದೇವರು ಅನುಗ್ರಹಿಸುವಂತಾಗಲಿ.


ಯಕ್ಷಗಾನ ರಂಗದಲ್ಲಿ ಮಾತ್ರವಲ್ಲದೆ ಸಂಗೀತ, ಮೃದಂಗದಲ್ಲೂ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಇವರು ರಾಷ್ಟ್ರಮಟ್ಟದ ಕಬಡ್ಡಿ ಪಟುವೂ ಹೌದು. ಅಷ್ಟು ಮಾತ್ರವಲ್ಲದೆ ರಾಮಾಂಜನೇಯ ಚೆಂಡೆ ಬಳಗದಲ್ಲಿ ಇದ್ದು ತಿರುಪತಿಯಲ್ಲಿ ನಡೆಯುವ ಒಂಬತ್ತು ದಿನದ ಬ್ರಹ್ಮೋತ್ಸವದ ಸಂದರ್ಭದಲ್ಲಿ ಚೆಂಡೆವಾದನ ಸೇವೆಯನ್ನು ಮಾಡಿದ್ದಾರೆ. ಇದರ ಜೊತೆಗೆ ಫೋಟೋಗ್ರಫಿ ಮಾಡುವುದು ಕೂಡ ಇವರ ನೆಚ್ಚಿನ ಹವ್ಯಾಸವಾಗಿದೆ.

ಯಕ್ಷಗಾನ, ತಾಳಮದ್ದಳೆ, ಗಾನ ವೈಭವ, ನಾಟ್ಯ ವೈಭವ, ಜೋಡಾಟ, ಕೂಡಾಟ ಗಳಾದ ತೆಂಕು-ಬಡಗು ಕ್ಷೇತ್ರಗಳಲ್ಲಿ, ಆಡಿಯೋ ರೆಕಾರ್ಡಿಂಗ್, ಆಕಾಶವಾಣಿಯಲ್ಲೂ ಕೂಡ ತನ್ನ ಕಲಾ ಚತುರತೆಯನ್ನು ಮೆರೆದ ಹೆಮ್ಮೆಯ ಕಲಾವಿದ.


ತನ್ನ ಸಾಧನೆಗೆ ಕಾರಣವಾದ ಹಾಗೂ ತಾನು ತಪ್ಪಿದಲ್ಲಿ ತಿದ್ದಿ ಅದನ್ನು ಸರಿಪಡಿಸಿ, ಸಮರ್ಥ ಕಲಾವಿದನಾಗಿ ರೂಪುಗೊಳ್ಳುವುದಕ್ಕೆ ಸಹಕರಿಸಿದ ಎಲ್ಲಾ ಗುರು-ಹಿರಿಯರಿಗೂ, ಸ್ನೇಹಿತರಿಗೂ ಸದಾ ಚಿರಋಣಿ ಎನ್ನುತ್ತಾರೆ ಮಧ್ವರಾಜ್.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم