ಗಂಡು ಕಲೆ ಎಂದು ಕರೆಸಿಕೊಳ್ಳುವ ಯಕ್ಷಗಾನದಲ್ಲಿ ಇತ್ತೀಚಿನ ದಿನಗಳಲ್ಲಿ ನಮಗೆ ಅನೇಕ ಮಹಿಳಾ ಕಲಾವಿದರು ಕಾಣಲು ಸಿಗುತ್ತಾರೆ. ಇಂತಹ ಮಹಿಳಾ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಯುವ ಮಹಿಳಾ ಕಲಾವಿದೆ ಕುಮಾರಿ ಶರಣ್ಯ ರಾವ್ ಶರವೂರು.
ದಿನಾಂಕ 28.09.1996 ರಂದು ಶ್ರೀಮತಿ ಶೋಭಾ ರಾವ್ ಶರವೂರು ಹಾಗೂ ಶ್ರೀಯುತ ಸುಬ್ರಹ್ಮಣ್ಯ ರಾವ್ ಶರವೂರು ಇವರ ಪ್ರೀತಿಯ ಸುಪುತ್ರಿಯಾಗಿ ಜನನ. ದ್ವಿತೀಯ ಪಿ.ಯು.ಸಿ ಮುಗಿಸಿ Diploma In Visual Effects & Film Making ಪದವಿಯನ್ನು ಪಡೆದಿರುತ್ತಾರೆ.
ಸಬ್ಬಣ್ಣಕೋಡಿ ರಾಮ ಭಟ್, ಕಾರ್ತಿಕ್ ರಾವ್ ಕೋರ್ಡೆಲ್ ಇವರ ಯಕ್ಷಗಾನದ ಗುರುಗಳು. ಇವರು 6ನೇ ವಯಸ್ಸಿನಲ್ಲಿ ಇರುವಾಗ ಇವರ ತಂದೆ ತಾಯಿ ಯಕ್ಷಗಾನ ನಾಟ್ಯ ತರಬೇತಿಗೆ ಗುರು ಸಬ್ಬಣ್ಣಕೋಡಿ ರಾಮ ಭಟ್ ಇವರ ಬಳಿ ಸೇರಿಸಿದರು. ಇದುವೇ ಇವರಿಗೆ ಯಕ್ಷಗಾನದಲ್ಲಿ ಏನು ಆದ್ರೂ ಸಾಧನೆ ಮಾಡಬೇಕು ಎಂದು ಪ್ರೇರಣೆ ಆಯಿತು.
ಸುದರ್ಶನ ವಿಜಯ,ಶ್ರೀ ದೇವಿ ಮಹಾತ್ಮೆ ಇವರ ನೆಚ್ಚಿನ ಪ್ರಸಂಗಗಳು. ಬಣ್ಣದ ವೇಷ, ಕಿರೀಟ ವೇಷ ಇವರು ತುಂಬಾ ಇಷ್ಟ ಪಡುವ ವೇಷಗಳು. ಎಡನೀರು ಮೇಳ, ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಮತ್ತು ತೆಂಕು ಮತ್ತು ಬಡಗು ಕೂಡಾಟದ ಯಕ್ಷಗಾನದಲ್ಲಿ ವೇಷವನ್ನು ನಿರ್ವಹಿಸಿದ್ದಾರೆ. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳುವಾಗ ಇವರು ಹೇಳುವುದು ಹೀಗೆ, ಪುಸ್ತಕಗಳನ್ನು ಓದಿ ಮತ್ತು ಪ್ರಸಂಗಕ್ಕೆ ಸಂಬಂಧಪಟ್ಟ ಆಡಿಯೋ ಮತ್ತು ವಿಡಿಯೋ ನೋಡಿ ತಿಳಿಯುತ್ತೇನೆ.
ಭರತನಾಟ್ಯ, ಸಂಗೀತ, ಚಿತ್ರಕಲೆ,ಯಕ್ಷಗಾನ ಭಾಗವತಿಗೆ ಇವರ ಹವ್ಯಾಸಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ, ಕಾಲಕ್ಕೆ ಅನುಸಾರವಾಗಿ ಯಕ್ಷಗಾನ ಚೌಕಟ್ಟಿನಲ್ಲಿ ನಡೆಯುತ್ತಿದೆ ಎಂದು ಹೇಳುತ್ತಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಇವರು ಹೇಳುವುದು:-
4 ವರ್ಷಗಳಿಂದ ಯಕ್ಷಗಾನ ನಾಟ್ಯ ತರಬೇತಿಯನ್ನು ನಡೆಸುತ್ತಿದ್ದೇನೆ. ಮುಂದೆಯೂ ನಾಟ್ಯ ತರಬೇತಿಯನ್ನು ಮುಂದುವರಿಸಿ ಯಕ್ಣಗಾನ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು.
ಕುಮಾರಿ ಶರಣ್ಯ ರಾವ್ ಶರವೂರು ಇವರ ಯಕ್ಷಗಾನ ರಂಗದಲ್ಲಿ ಇನಷ್ಟು ಸಾಧನೆ ಮಾಡಲಿ ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ನಾವು ನಂಬಿರುವ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.
- ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ