ಸವಿರುಚಿ: "ಕ್ಷಿಪ್ರ, ರುಚಿಕರ, ಬಾಳೆಕಾಯಿಯದು ಅಂತ ಹೇಳೋ ಹಂಗೇ ಇಲ್ಲ"

Upayuktha
0

"ಬಹಳ ಬೇಗನೆ ಆಗುತ್ತೆ. ತಿನ್ನಲು ತುಂಬಾ ರುಚಿ. ಬಾಳೆಕಾಯಿ ಅಂತ ಅನಿಸೋದೇ ಇಲ್ಲ."


ಇದು ಮೊನ್ನೆ ತಮ್ಮ ತೋಟದ ಜಿ9 ಬಾಳೆಕಾಯಿಯಿಂದ ಶಾವಿಗೆ (ಬಾಕಾಶಾ) ಮಾಡಿ ಸವಿದ ದಾವಣಗೆರೆಯ ಸರೋಜಾ ಪಾಟೀಲ್ ನಿಟ್ಟೂರು ಅವರ ಉದ್ಗಾರ.


ಈಗಾಗಲೇ ಮೂರು-ನಾಲ್ಕು ಬಾರಿ ಬಾಕಾಹು (ಬಾಳೆಕಾಯಿ ಹುಡಿ) ತಯಾರಿಸಿ ಮೆಚ್ಚಿಕೊಂಡ ಕುಟುಂಬ ಇವರದು. ಮುಂದೆ ಮನೆಮಟ್ಟದಲ್ಲಿ ಸ್ವಲ್ಪ ಹೆಚ್ಚು ತಯಾರಿಸಿ ಮಾರುಕಟ್ಟೆ ಮಾಡುವ ಪ್ಲಾನ್ ಹಾಕಿಕೊಂಡಿದ್ದಾರೆ. ಇದಕ್ಕಾಗಿ ಡ್ರೈಯರಿಗೆ ಆದೇಶ ಕೊಟ್ಟು ಕಾಯುತ್ತಿದ್ದಾರೆ.


ಈ ನಡುವೆ ಸಿಕ್ಕಿದ ಬಾಕಾಶಾ ವಿದ್ಯೆ ಇನ್ನೊಂದು ಬೋನಸ್. ನಮ್ಮ ಮನೆಯವರಿಗೂ ಇಷ್ಟ ಆಯಿತು. ಒಣಗಿಸಿ ಇಟ್ಟುಕೊಂಡರೆ ಬೇಕಾದಾಗ ದಿಢೀರ್ ಅಂತ ಮಾಡಬಹುದಲ್ಲಾ ಅಂತಿದ್ದಾರೆ ನನ್ನ ಸೊಸೆ", ಸರೋಜಾ ಪಾಟೀಲ್ ತಿಳಿಸುತ್ತಾರೆ.


"ಮುಂದಿನ ದಿನಗಳಲ್ಲಿ ಹೆಚ್ಚುಹೆಚ್ಚು ರೈತರೂ ಬಾಕಾಹು ಮತ್ತು ಬಾಕಾಶಾ ಬಗ್ಗೆ ಆಸಕ್ತಿ ತೆಗೆದುಕೊಂಡಾರು, ತಯಾರಿಸಲೂ ತೊಡಗಿಯಾರು" ಎನ್ನುವುದು ಇವರ ವಿಶ್ವಾಸ.

ಸರೋಜಾ ಪಾಟೀಲ್ ನಿಟ್ಟೂರು - 99007 69719 (6 - 7 pm)

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Post a Comment

0 Comments
Post a Comment (0)
To Top