||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳಗಾವಿಗರಿಗೆ ಬೇಡವೇ ಬಾಕಾಶಾ ವಿದ್ಯೆ?

ಬೆಳಗಾವಿಗರಿಗೆ ಬೇಡವೇ ಬಾಕಾಶಾ ವಿದ್ಯೆ?ಅರ್ಧ ತಾಸಿನಲ್ಲೇ ಪೋಷಕಾಂಶ ಸಮೃದ್ಧ, ಬಾಕಾಶಾ (ಬಾಳೆಕಾಯಿ ಶಾವಿಗೆ) ತಯಾರಿಸುವ ವಿದ್ಯೆಯನ್ನು ಬೆಳಗಾವಿಯ ಒಂದು ಕೇವೀಕೆ (ಕೃಷಿ ವಿಜ್ಞಾನ ಕೇಂದ್ರ) ಮೂರು ನಾಲ್ಕು ವರ್ಷಗಳ ಹಿಂದೆ ರೈತ ಮಹಿಳೆಯರ ಎದುರಿಟ್ಟಿತ್ತು.


ಅಕ್ಕಿ- ಗೋಧಿಯ ಶ್ಯಾವಿಗೆಗಿಂತ ಇದು ತುಂಬ ಆರೋಗ್ಯಕರ. ಸಕ್ಕರೆ ಕಾಯಿಲೆಯವರಿಗೂ ತೊಂದರೆ ಅಲ್ಲ, ಗುಣ ಮಾಡುತ್ತದೆ ಎನ್ನುತ್ತಾರೆ ಪೋಷಕಾಂಶ ತಜ್ಞರು.


"ನಾವು ಉಳಿದ ಕೇವೀಕೆಯವರ ಜತೆ ಸಂಪರ್ಕದಲ್ಲಿರುತ್ತೇವಲ್ಲಾ. ಕೇರಳದ ಕಾಸರಗೋಡು ಕೇವೀಕೆಯ ಡಾ. ಸರಿತಾ ಹೆಗ್ಡೆ ಅವರು ಪ್ರಸರಿಸುತ್ತಿದ್ದ ಬಾಳೆಕಾಯಿ ಶಾವಿಗೆ ತಂತ್ರಜ್ಞಾನ ನಮ್ಮಲ್ಲಿಗೆ ಉಪಯೋಗವಾಗಬಹುದು ಅನಿಸಿತು. ಅಲ್ಲಿಂದಲೇ ಶಾವಿಗೆ ಮಣೆ ತರಿಸಿ ಮೂರು-ನಾಲ್ಕು ಡೆಮೋ ಮಾಡಿದ್ದೆವು", ನೆನೆಯುತ್ತಾರೆ ಐಸಿಎಆರ್ ಕೆಎಲ್ಇಯ ಮುಖ್ಯಸ್ಥೆ ಶ್ರೀದೇವಿ ಬಿ. ಅಂಗಡಿ.


ಆದರೆ ಯಾಕೋ, ಆ ಕಾಲದಲ್ಲಿ ಹೆಚ್ಚಿನ ರೈತರಿಗೆ ಬಾಳೆಕಾಯಿ ಶಾವಿಗೆ ಅಷ್ಟು ಮೆಚ್ಚುಗೆಯಾಗಲಿಲ್ಲವಂತೆ. ಕೆಲವರಂತೂ, "ಇದು ಸಿಹಿ ರುಚಿ ಬರುತ್ತೆ, ಇದಕ್ಕಿಂತ ಗೋಧಿ ಶ್ಯಾವಿಗೆಯೇ ಪಸಂದಾಗುತ್ತೆ" ಎಂದರಂತೆ. ಇಷ್ಟಪಟ್ಟು ಮನೆಯಲ್ಲಿ ಕೆಲವು ಬಾರಿ ಬಾಕಾಶಾ ಮಾಡಿದವರು, ಈಗಲೂ ಮಾಡುತ್ತಿರುವವರೂ ಇರಲೂಬಹುದು ಅನ್ನಿ.


ಬೆಳಗಾವಿ ರೈತ ಮಿತ್ರರೇ, ಇನ್ನೊಮ್ಮೆ ಮಾಡಿ ರುಚಿ ನೋಡಿ. ಬಾಕಾಶಾ ವಿದ್ಯೆ ಕಲಿತು ನೀವೇ ಪ್ರಯೋಗ ಮಾಡಿ. ಸಿಹಿಯೋ, ಖಾರವೋ, ವೈಯುಕ್ತಿಕ ರುಚಿಗನುಸಾರ ಉಪ್ಕರಿ ಮಾಡಿಕೊಳ್ಳಲು ಬರುತ್ತಲ್ಲಾ? ನೀವೇ ಬೆಳೆದ ಬಾಳೆಕಾಯಿಯಿಂದ ಶ್ರೇಷ್ಠ ಉಪಾಹಾರ ಮಾಡಿ ಬಳಸಬಾರದೇಕೆ?


ಬಾಲೆ ಬೆಳೆಗಾರರು ಮಾತ್ರವಲ್ಲ, ಇತರ ಆರೋಗ್ಯಪ್ರಜ್ಞ ನಾಗರಿಕರೂ ಮಾರುಕಟ್ಟೆಯಿಂದ ಒಂದು ಕಿಲೋ ಬಾಳೆಕಾಯಿ ಖರೀದಿಸಿ ಸುಲಭದಲ್ಲಿ ಬಾಕಾಶಾ ಮಾಡಬಹುದಲ್ಲಾ?


"ಆಸಕ್ತರಿದ್ದರೆ. ಪುನಃ ಒಂದು ತರಬೇತಿ ಕಾರ್ಯಕ್ರಮ ಮಾಡೋಣ, ಅದಕ್ಕೇನಂತೆ" ಎನ್ನುತ್ತಾರೆ ಶ್ರೀದೇವಿ ಅಂಗಡಿ. ಆಸಕ್ತ ಮಂದಿ ಅವರನ್ನು ಸಂಪರ್ಕಿಸಬಹುದು.

ಶ್ರೀದೇವಿ ಬಿ. ಅಂಗಡಿ - 94812 92013 (10 am - 5 pm)


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post