|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಾಕಾಶಾ ರೂಢಿಗೆ ತರಲು ಹರಸಾಹಸ

ಬಾಕಾಶಾ ರೂಢಿಗೆ ತರಲು ಹರಸಾಹಸ


ಅಂಗನವಾಡಿಗಳ ಸಂಪರ್ಕ, ದಿನ ನಿಗದಿ, ತಾಯಂದಿರಿಗೆ ಆಹ್ವಾನ, ಅವರ ಮೂಲಕವೇ ಬಾಕಾಶಾ (ಬಾಳೆಕಾಯಿ ಶಾವಿಗೆ) ತಯಾರಿ. ಕೊನೆಗೆ ಮಕ್ಕಳು ಹೆತ್ತವರಿಗೆ ಬಾಕಾಶಾ ಸಮಾರಾಧನೆ, ಮಾಹಿತಿ.


ಇವು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೃಷಿ ವಿಜ್ಞಾನಿಯೊಬ್ಬರು ಸತತ ಮೂರು ವರ್ಷ ನಡೆಸಿದ ಬಾಕಾಶಾ ಅಭಿಯಾನದ ಮುಖ್ಯ ಚಟುವಟಿಕೆಗಳು. 



ದಶಕದ ಹಿಂದೆ ಬಾಳೆಕಾಯಿ ಶಾವಿಗೆಯನ್ನು ಮತ್ತೆ ಊಟದ ಮೇಜಿಗೆ ತರಲು ಹರಸಾಹಸ ನಡೆಸಿದ ಸಮುದಾಯ ವಿಜ್ಞಾನ ವಿಶೇಷಜ್ಞೆ ಕಾಸರಗೋಡು ಕೇವೀಕೆಯ ಡಾ. ಸರಿತಾ ಹೆಗ್ಡೆ.


"ಕೇವೀಕೆಯಲ್ಲೇ ತರಬೇತಿ ಇಟ್ಟುಕೊಂಡರೆ, ಬರುವವರು ಅದೇ ಹಳೆ ಮುಖಗಳು. ಕೆಲವೇ ಮಂದಿಗೆ ಮಾಹಿತಿ ಸಿಗುತ್ತದೆ. ಬದಲಿಗೆ ನಾವೇ ಊರಿಗೆ ಹೋಗಿ ಮಾಡಿ ತೋರಿಸಿದರೆ ಅದರ ಪರಿಣಾಮ, ಹಬ್ಬುವ ಸಾಧ್ಯತೆ ಹೆಚ್ಚು" ಎನ್ನುತ್ತಾರೆ ಸರಿತಾ. 


ಅವರು ಲೆಕ್ಕ ಇಟ್ಟಿಲ್ಲವಾದರೂ, ಕನಿಷ್ಠ 70 ಅಂಗನವಾಡಿಗಳಿಗಾದರೂ ಭೇಟಿ ಕೊಟ್ಟು  ಬಾಳೆಕಾಯಿಯ ಝಟ್ ಪಟ್ ಶಾವಿಗೆಯತ್ತ ಜನಮನ ಸೆಳೆಯಲು ತುಂಬ ಶ್ರಮ ಪಟ್ಟಿದ್ದಾರೆ.


"ನಾವಿಂದು ಮುಂಜಾನೆ ಉಪಹಾರಕ್ಕೆ ಬಳಸುವ ಪಾಲಿಶ್ ಮಾಡಿದ ಅಕ್ಕಿಯಲ್ಲಿ ಏನು ಪೋಷಕಾಂಶಗಳಿವೆ? ಬದಲಿಗೆ, ಬೇಗನೆ ಕರಗುವ, ಕನಿಷ್ಠ ಸಂಸ್ಕರಣೆ ಮಾಡಿ ಗರಿಷ್ಠ ಪೋಷಕಾಂಶ ಉಳಿಸಿರುವ ಈ ಸಾಂಪ್ರದಾಯಿಕ ಆಹಾರ ತುಂಬ ಶ್ರೇಷ್ಠ ಅಲ್ಲವೇ", ಅವರು ಕೇಳುತ್ತಾರೆ.


"ಬಾಳೆಕಾಯಿಯಲ್ಲಿ ಪೊಟ್ಯಾಸಿಯಂ ಇದೆ, ಕರಗಬಲ್ಲ ನಾರು ಇದೆ, ಕರುಳಿನ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸಹಕರಿಸುವ ’ಪ್ರಿಬಯೋಟಿಕ್’ ಅಂಶಗಳಿವೆ. ಅದರಲ್ಲಿರುವ ಪಿಷ್ಟ ರೆಸಿಸ್ಟೆಂಟ್ ವರ್ಗದ್ದಾದ ಕಾರಣ ಮಧುಮೇಹಿಗಳಿಗೆ ಪ್ರಯೋಜನಕರ. ಬಾಲೆಕಾಯಿಯಲ್ಲಿ ಹಲವು ಔಷಧೀಯ ಗುಣಗಳಿವೆ. ವಾರಕ್ಕೊಮ್ಮೆಯಾದರೂ ಸುಲಭ ತಯಾರಿಯ ಈ ಆಹಾರಕ್ಕೇಕೆ ನಾವು ಜಾಗ ಕೊಡಬಾರದು?" ಅವರು ಕೇಳುತ್ತಾರೆ.


ಅಂದಿನ ಶಿಬಿರಾರ್ಥಿಗಳಿಗೆ ಹೆಚ್ಚಿನವರಿಗೂ ಬಾಕಾಶಾ ಗೊತ್ತಿರಲಿಲ್ಲ. ಮಾಡುವ ಕ್ರಮ, ತಿನ್ನಲು ಬಾಯಿಗೆ - ಎಲ್ಲವೂ ಇಷ್ಟವಾಯಿತು. ಆದರೇಕೋ ಅದು ಆ ಕಾಲಕ್ಕೆ ಹೆಚ್ಚು ಮುಂದೆ ಹೋಗಲಿಲ್ಲ.


ಈಗ ಕಾಲ ಬದಲಾಗಿದೆ. ಜನರಲ್ಲಿ ಆರೋಗ್ಯಪ್ರಜ್ಞೆ, ಅರಿವು ಹೆಚ್ಚಿದೆ. ಡಾ. ಸರಿತಾ ಅರಿವಿನ ಎರಡನೆ ಇನ್ನಿಂಗ್ಸ್ ಆರಂಭಿಸಲು ತಯಾರಾಗಿದ್ದಾರೆ. 

ಸಂಪರ್ಕ: ಡಾ. ಸರಿತಾ ಹೆಗ್ಡೆ, ಕೇವೀಕೆ ಕಾಸರಗೋಡು- 95910 29963 (10 - 5)


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು 



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم