ಚಿಕ್ಕಚಿಕ್ಕ ಬದಲಾವಣೆ ಮಾತ್ರದಿಂದ ತಿಂಡಿ ವೈವಿಧ್ಯತೆ!
ಚುರುಕಿನ ಪಾಕ ತಜ್ಞೆಯರಿಗೆ ಒಂದು ಸುಳಿವು ಸಾಕು ಪಾಕಪ್ರಯೋಗ ಸರಣಿಗೆ!
ಬಾಕಾಶಾ (ಬಾಳೆಕಾಯಿ ಶಾವಿಗೆ) ದ ಸುದ್ದಿ ಕೇಳಿದ್ದೇ ತಡ ಶಿರಸಿಯ ಮುಕ್ರಮನೆ ಶ್ಯಾಮಲಾ ಹೆಗಡೆ ಚಕಚಕನೆ ಶ್ಯಾವಿಗೆಯ ನಾಲ್ಕು ಆವೃತ್ತಿಗಳನ್ನು ಮಾಡಿಬಿಟ್ಟರು.
ಬಾಳೆಕಾಯಿ ಬೇಯಿಸಿ ಒತ್ತಿ ಮಸಾಲೆ ಸೇರಿಸಿ ಒಗ್ಗರಣೆ ಮಾಡಿದ ಶಾವಿಗೆ ಮೊದಲನೆಯದು.
ಬಾಕಾಹು (ಬಾಳೆಕಾಯಿ ಹುಡಿ) ವಿನಿಂದ ತಯಾರಿಸಿದ್ದು ಎರಡನೆಯದು.
ಮೂರನೆಯದು ಉಕದಲ್ಲಿ ಹಿಂದಿನಿಂದಲೇ ಮಾಡುತ್ತಿದ್ದ ರೀತಿಯ ಅಕ್ಕಿ+ ಬಾಳೆಹಣ್ಣಿನದು.
ಮುಕ್ರಮನೆ ಮಹೇಶ್ ಹೆಗಡೆ, ದಿವಾಕರ ಹೆಗಡೆ ನೀರಗಾನ್ ಸೇರಿ ಬಾಹಹು (ಬಾಳೆಹಣ್ಣಿನ ಹುಡಿ) ತಯಾರಿಸುತ್ತಾರೆ. ಇದು ಮಾಲ್ಟ್, ಮಿಲ್ಕ್ ಶೇಕ್ ಮತ್ತು ಚಾಕಲೇಟ್ ತಯಾರಿಗೆ ಸೂಕ್ತ.
ಮನೆಯಲ್ಲಿದ್ದ ಬಾಹಹು ಸೇರಿಸಿ ಮಾಡಿದ ಶಾವಿಗೆ ನಾಲ್ಕನೆಯದು.
ಬಾಕಾಹುವಿನಿಂದ ಮಾಡಿದ ಶಾವಿಗೆಗೆ ಶ್ಯಾಮಲಾ ಅವರ ಮಾರ್ಕು ಗರಿಷ್ಠ. ಬಾಹಹು ಆಧಾರಿತ ಶಾವಿಗೆಗೆ ಸಿಹಿ ವರ್ಗದಲ್ಲಿ ಹೆಚ್ಚು ಮಾರ್ಕು.
"ತಾಜಾ ಬಾಳೆಕಾಯಿಯಿಂದ ಮಾಡಿದ್ದೂ ಚೆನ್ನಾಗಿಯೇ ಇರುತ್ತದೆ" ಎನ್ನುತ್ತಾರೆ.
ಶ್ಯಾಮಲಾ ಮಹೇಶ್ ಹೆಗಡೆ- 94491 93602 (6- 8 pm)
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ