ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಐಸಿಐಸಿಐ ಬ್ಯಾಂಕ್ ಕ್ಯಾಂಪಸ್ ಇಂಟರ್‌ವ್ಯೂ ಅನ್ನು ಶುಕ್ರವಾರ ಹಮ್ಮಿಕೊಂಡಿತ್ತು. ಕಾಲೇಜಿನ ಉದ್ಯೋಗ ಹಾಗೂ ತರಬೇತಿ ಘಟಕದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಮೊದಲ ಹಂತದ ಸಂದರ್ಶನದಲ್ಲಿ 75ಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು.
ಐಸಿಐಸಿಐ ಕಂಪೆನಿಯ ಅಸೋಸಿಯೇಟ್ ಹೆಚ್.ಆರ್. ಶಿವಕುಮಾರ್ ಸಂದರ್ಶನ ನಡೆಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉದ್ಯೋಗ ಹಾಗೂ ತರಬೇತಿ ಘಟಕದ ಸಂಯೋಜಕರು ಉಪಸ್ಥಿತರಿದ್ದರು.