ಸವಿರುಚಿ: ಬಾಕಾಹು ಬಾಕರ ವಡಿ

Upayuktha
0

 



ಪಾಕ: ಚೇತನಾ ಆರ್ ಹೆಗಡೆ ಸೋಂದಾ


ಇದು ಶಿರಸಿಯ ಬಾಕಾಹು ಪಾಕಸ್ಪರ್ಧೆಯ ಖಾರ ತಿಂಡಿ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದ ತಯಾರಿ.


ಬೇಕಾಗುವ ಸಾಮಗ್ರಿ: ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು)- ಒಂದು ಕಪ್, ಅರಿಶಿನ- ಅರ್ಧ ಚಮಚ, ಎರಡು ಚಮಚ ಬಿಸಿ ಎಣ್ಣೆ, ಅರ್ಧ ಚಮಚ ಲಿಂಬೆಹುಳಿ, ರುಚಿಗೆ ತಕ್ಕಷ್ಟು ಉಪ್ಪು.


ಹೂರಣಕ್ಕೆ: ಒಣ ಕೊಬ್ಬರಿ- ಅರ್ಧ ಕಪ್, ಜೀರಿಗೆ- ಒಂದು ಚಮಚ, ಸೋಂಪು- ಒಂದು ಚಮಚ, ಎಳ್ಳು- ಎರಡು ಚಮಚ, ಸಕ್ಕರೆ- ಎರಡು ಚಮಚ, ಮೆಣಸಿನ ಹುಡಿ- ಎರಡು ಚಮಚ, ಹುಳಿ ಪುಡಿ- ಒಂದು ಚಮಚ, ಉಪ್ಪು- ರುಚಿಗೆ ತಕ್ಕಷ್ಟು ಮತ್ತು ಕರಿಯಲು ಎಣ್ಣೆ.


ಮಾಡುವ ವಿಧಾನ: ಬಾಕಾಹು, ಅರಿಶಿನ, ಲಿಂಬೆಹುಳಿ, ಉಪ್ಪು ಮತ್ತು ಬಿಸಿಬಿಸಿ ಎಣ್ಣೆ ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ರೊಟ್ಟಿಯ ಹಾಗೆ ಮಾಡಿಟ್ಟುಕೊಳ್ಳಿ. ಹೂರಣದ ಸಾಮಗ್ರಿ ಎಲ್ಲವನ್ನೂ ಒಂದೇ ಸಾರಿ ಮಿಕ್ಸಿ ಜಾರಿಗೆ ಹಾಕಿ ಹುಡಿ ಮಾಡಿಕೊಳ್ಳಿ. ಮಾಡಿಟ್ಟ ರೊಟ್ಟಿಯ ಮೇಲೆ ಹುಣಿಸೆಹುಳಿ ಹಚ್ಚಿ ಅದರ ಮೇಲೆ ಹೂರಣವನ್ನು ಹಚ್ಚಿ ಸುರುಳಿ ಸುತ್ತಿ ಸಣ್ಣಸಣ್ಣ ತುಂಡುಗಳಾಗಿ ಕಟ್ ಮಾಡಿಕೊಳ್ಳಿ. ಎಣ್ಣೆಯಲ್ಲಿ ಹೊಂಬಣ್ಣ ಬರುವ ವರೆಗೆ ಕರಿಯಿರಿ.

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top