ಸವಿರುಚಿ: ಬಾಕಾಹು ಜಹಾಂಗಿರ್ / ಜಾನ್ ಸಕ್ರೆ

Upayuktha
0

 



ಪಾಕ: ಲಲಿತಾ ಶ್ರೀಪಾದ ಹೆಗಡೆ


ಲಲಿತಾ ಅವರು ಜಹಾಂಗೀರ್ ತಯಾರಿಯಲ್ಲಿ ನಿಷ್ಣಾತೆ. ಈ ತಿಂಡಿಯಲ್ಲಿ ಇವರಿಗೆ ಒಂದೂವರೆ ದಶಕದ ಅನುಭವವಿದೆ. 


ಬೇಕಾಗುವ ಸಾಮಗ್ರಿ: ಬಾಕಾಹು (ಬಾಳೆಕಾಯಿ ಹುಡಿ /ಹಿಟ್ಟು)- ಒಂದು ಕಪ್, ಉದ್ದಿನ ಬೇಳೆ- ಒಂದು ಕಪ್, ಸಕ್ಕರೆ ಆರು ಕಪ್


ಮಾಡುವ ವಿಧಾನ: ಉದ್ದಿನ ಬೇಳೆಯನ್ನು ಎರಡರಿಂದ ಮೂರು ತಾಸು ನೆನೆಸಿ ಇಡಬೇಕು. ಆರು ಕಪ್ ಸಕ್ಕರೆಗೆ ಎರಡು ಕಪ್ ನೀರು ಹಾಕಿ ಪಾಕ ಮಾಡಬೇಕು. ಜಿಲೇಬಿಗೆ ಮಾಡುವ ಹಾಗೆ ಒಂದಳೆ ಪಾಕ. ಈ ಪಾಕ ಕುದಿಯುವಾಗ ಕೊನೆಯಲ್ಲಿ ಒಂದು ಲಿಂಬು ರಸ ಹಾಕಿ ಕುದಿಸಿ. 


Vikaas- Pu College Admission open 2021-22


ಗ್ರೈಂಡರಿನಲ್ಲಿ ಉದ್ದು ಹಾಕಿ ನುಣ್ಣಗೆ ರುಬ್ಬಬೇಕು. ರುಚಿಗೆ ಸ್ವಲ್ಪ ಉಪ್ಪು, ಬಾಕಾಹು ಹಾಕಿ  ಉದ್ದಿನ ವಡಾ ಹಿಟ್ಟಿನ ಹದಕ್ಕೆ ರುಬ್ಬಿದರೆ ಸಾಕು. ಅಗಲವಾದ ತಳವಿರುವ ಪ್ಯಾನಿನಲ್ಲಿ (ಪಾತ್ರೆ) ಪಾಮ್ ಎಣ್ಣೆ ಬಳಸಿ ಸಣ್ಣ ಉರಿಯಲ್ಲಿ ಜಹಾಂಗೀರ್ ಬಟ್ಟೆಯ (ಜಹಾಂಗೀರ ಮಾಡೋ ಬಟ್ಟೆ  ನಾವೇ ಮಾಡ್ಕೋಬೇಕು. ಎಲ್ಲೂ ಖರೀದಿಸಲು ಸಿಗುವುದಿಲ್ಲ. ಈ ಬಟ್ಟೆಯ ಫೋಟೋ ಕೆಳಗಿದೆ) ಸಹಾಯದಿಂದ ಹೂವಿನ ಆಕಾರದಲ್ಲಿ ಬಿಡಬೇಕು.


ಕಂದು ಬಣ್ಣಕ್ಕೆ ಬಂದ ಮೇಲೆ  ಬಾಂಡ್ಲಿಯಿಂದ ಸೀದಾ ಮೊದಲೇ ತಯಾರಿಸಿ ಇಟ್ಟುಕೊಂಡಿದ್ದ ಪಾಕಕ್ಕೆ ಹಾಕಬೇಕು. ಪಾಕ ಹೀರಿದ ಮೇಲೆ ಹೊರತೆಗೆದರೆ ಬಾಕಾಹು  ಜಹಾಂಗೀರು ತಯಾರು.


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
To Top