ಸವಿರುಚಿ: ಬಾಕಾಹು ಮಾಲ್ಪುರಿ
ಪಾಕ: ಸೌಮ್ಯ ಮಹೇಶ್
ಬೇಕಾಗುವ ಸಾಮಗ್ರಿ: ಒಂದು ಕಪ್ ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು), ತಲಾ ಕಾಲು ಕಪ್ ಸಣ್ಣ ಸಜ್ಜಿಗೆ ಮತ್ತು ಮೈದಾ, ಒಂದೂಕಾಲು ಕಪ್ ಸಕ್ಕರೆ, 4 ಏಲಕ್ಕಿ, ಮೊಸರು, ಕರಿಯಲು ಎಣ್ಣೆ.
ಮಾಡುವ ವಿಧಾನ: ಸಜ್ಜಿಗೆಯನ್ನು ನೀರಿನಲ್ಲಿ ಹತ್ತು ನಿಮಿಷ ನೆನೆಹಾಕಬೇಕು.
ಇನ್ನೊಂದು ಪಾತ್ರೆಯಲ್ಲಿ ಸಕ್ಕರೆಯನ್ನು ಎಳೆ ಪಾಕ ಮಾಡಿಕೊಳ್ಳಬೇಕು.
ಸಜ್ಜಿಗೆಯಿಂದ ನೀರನ್ನು ಬಸಿದುಕೊಂಡು, ಸಕ್ಕರೆ ಪಾಕ ಮೈದಾ, ಬಾಕಾಹು, ಮೊಸರು, ಏಲಕ್ಕಿ ಹಾಕಿ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಬೇಕು.
ಜಿಲೇಬಿ ಪಾತ್ರೆಯಲ್ಲಿ ಎಣ್ಣೆ ಕಾಯಿಸಿ ಹದಾ ಉರಿಯಲ್ಲಿ ಬೇಯಿಸಿ. ಬಾಕಾಹು ಮಾಲ್ಪುರಿ ಸವಿಯಲು ರೆಡಿ.
ಮಾಹಿತಿ, ಪ್ರೇರಣೆ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key Words: Banana Flour, Banana Powder, Bakahu Recipe, ಬಾಕಾಹು, ಬಾಳೆಕಾಯಿ ಹುಡಿ, ಸವಿರುಚಿ, ಮಾಲ್ಪುರಿ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ