ವಿಶೇಷಚೇತನ ತಂಡದವರ ಮೂಲಕ ತಯಾರಿ
ಬೆಳಗಾವಿಯ ತುಕ್ಕಾನಟ್ಟಿಯಲ್ಲಿರುವ ಐಸಿಎಆರ್ ಬರ್ಡ್ಸ್ ಕೇವೀಕೆ ವಿಜ್ಞಾನಿಗಳು ಬಾಕಾಹು ತಯಾರಿಸಿ ಅದರಿಂದ ತಿಂಡಿತಿನಸು ಮಾಡುವ ಪ್ರಯೋಗ ಯಶಸ್ವಿಯಾಗಿದೆ.
ಇವರು ಬಳಸಿರುವುದು ಜಿ- 9 ಬಾಳೆಕಾಯಿ. "ಬಾಕಾಹುವಿಗೆ ಸಮಪ್ರಮಾಣದಲ್ಲಿ ರಾಗಿ ಹುಡಿ / ಗೋಧಿ ಹುಡಿ ಬೆರೆಸಿದ ಎರಡು ಬೇರೆಬೇರೆ ರೀತಿಯ ಬಾಕಾಹು ಬಿಸ್ಕೆಟ್ ಮಾಡಿದ್ದೇವೆ. ಇಡ್ಲಿಯಲ್ಲೂ ಎರಡು ರೀತಿಯವನ್ನು ತಯಾರಿಸಿದ್ದೇವೆ. ಒಂದರಲ್ಲಿ ಒಂದು ಪ್ರಮಾಣ ಉದ್ದಿನ ಬೇಳೆಗೆ ತಲಾ ಎರಡು ಪ್ರಮಾಣದ ಇಡ್ಲಿ ರವಾ ಮತ್ತು ಬಾಕಾಹು ಸೇರಿಸಿದ್ದೇವೆ. ಇನ್ನೊಂದು ಥರದ ಇಡ್ಲಿಯಲ್ಲಿ ಇಡ್ಲಿ ರವಾದ ಬದಲಿಗೆ ರಾಗಿ ರವಾ ಮಿಶ್ರ ಮಾಡಿದ್ದೇವೆ. ಅಂತಾರೆ ಈ ವಿಜ್ಞಾನಿಗಳು.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key Words: Banana Flour, Banana Powder, Bakahu, Belgavi, ಬಾಕಾಹು, ಬಾಳೆ ಕಾಯಿ ಹುಡಿ, ಬಾಕಾಹು ಆಂದೋಲನ, ಬೆಳಗಾವಿ