ಉಡುಪಿ ಕೇವೀಕೆ: ಎಲ್ಲ ಸಭೆಗಳಲ್ಲೂ ’ಬಾಕಾಹು’ ಮಾಹಿತಿ

Upayuktha
0

 

"ವಿವರ ತಿಳಿದ ಹತ್ತರಲ್ಲಿ ಎಂಟು ಜನರೂ ಬಹು ಧನಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ."


"ಬಾಕಾಹುವನ್ನು ಮನೆಮಟ್ಟದಲ್ಲಿ ಮಾಡಬಹುದೆಂದು ಯಾರಿಗೂ ಗೊತ್ತಿಲ್ಲ. ಅದಕ್ಕೆ ಬಹು ದೊಡ್ಡ ವ್ಯವಸ್ಥೆ ಬೇಕು ಎಂಬುದು ಅವರ ಕಲ್ಪನೆ. ಹಾಗೆಯೇ ಬಾಳೆಕಾಯಿ ಹುಡಿಯನ್ನು ಮನೆಮನೆಗಳಲ್ಲಿ ಬಳಕೆ ಮಾಡಬಹುದು ಎನ್ನುವ ಸತ್ಯ ಇನ್ನೂ ಜನಸಮುದಾಯವನ್ನು ತಲಪಿಲ್ಲ."


ಈ ಮಾತು ಹೇಳುವವರು ಉಡುಪಿ ಕೇವೀಕೆಯ ತೋಟಗಾರಿಕಾ ವಿಜ್ಞಾನಿ ಡಾ. ಹೆಚ್. ಎಸ್. ಚೈತನ್ಯ. ಬ್ರಹ್ಮಾವರದಲ್ಲಿರುವ ಈ ಕೇವೀಕೆಯವರು ಈಗ ಒಂದು ನಿಲುವು ತಳೆದಿದ್ದಾರೆ. ಅದು ಹೀಗಿದೆ: "ಕೃಷಿಕರ ಜತೆಗಿನ ಸಭೆ ಯಾವ ವಿಚಾರದ್ದೇ ಇರಲಿ, ಅಲ್ಲಿ ಕಾಲು-ಅರ್ಧ ಗಂಟೆ ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ತಯಾರಿ, ಬಳಕೆ ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿಸುವುದು."


"ಮನೆಮಟ್ಟದಲ್ಲಿ ಬಾಕಾಹು ತಯಾರಿಯ ವಿಚಾರ ಜನರಿಗೆ ಎಲ್ಲೋ ಮಿಂಚು ಹೊಳೆದಂತೆ ಸಾಮಾಜಿಕ ಮಾಧ್ಯಮ ಅಥವಾ ಪತ್ರಿಕೆ, ಟೀವಿ ಮೂಲಕ ಅಲ್ಪಸ್ವಲ್ಪ ಗೊತ್ತಾಗಿದೆಯಷ್ಟೇ. ಆದರೆ ಅದರ ವಿವರಗಳು ಅದೆಷ್ಟು ರೈತೋಪಯೋಗಿ ಎಂಬ ವಿಚಾರ ತಿಳಿದಿಲ್ಲ.  ಆದರೆ ವಿವರ ತಿಳಿದ ಹತ್ತರಲ್ಲಿ ಎಂಟು ಜನರೂ ಬಹು ಧನಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಅಷ್ಟೊಂದು ಜನಕ್ಕೆ ಈ ಬಗ್ಗೆ ಆಸಕ್ತಿ ಕುದುರುತ್ತಿದೆ", ಡಾ. ಚೈತನ್ಯ ಮುಂದುವರಿಸುತ್ತಾರೆ, "ಆದರೆ ಬಾಕಾಹು ತಯಾರಿಸಿದರೆ ಅದರ ಮಾರುಕಟ್ಟೆ ಹೇಗೆ ಎಂಬ ಬಗೆಗಿನ ಜಿಜ್ಞಾಸೆ ಹಲವರಲ್ಲಿದೆ. ಮನೆಯಲ್ಲೇ ಇದರ ಬಳಕೆ ಮಾಡುವ ಸಾಧ್ಯತೆಯ ಬಗ್ಗೆ ಹಲವರ ಮನಸ್ಸು ಫಕ್ಕನೆ ಓಡುವುದಿಲ್ಲ."

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


Key Words: Banana Flour, Banana Powder, Bakahu, Udupi, KVK, ಬಾಕಾಹು, ಬಾಳೆಕಾಯಿ ಹುಡಿ, ಕೃಷಿ ವಿಜ್ಞಾನ ಕೇಂದ್ರ, ಬಾಕಾಹು ಆಂದೋಲನ,


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top