ಬಾಕಾಹು ಜಾಮೂನು
ಪಾಕ: ವಸಂತಮ್ಮ ಕತ್ಲಗೆರೆ
ಬೇಕಾಗುವ ಪದಾರ್ಥಗಳು: ಒಂದು ಬಟ್ಟಲು ಬಾಕಾಹು, ಒಂದು ಬಟ್ಟಲು ಜಾಮೂನ್ ಪುಡಿ, ಅರ್ಧ ಬಟ್ಟಲು ಹಾಲಿನ ಪುಡಿ, ಒಂದು ಸ್ಪೂನ್ ತುಪ್ಪ
ಮಾಡುವ ವಿಧಾನ: ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ ಹಾಲು ಹಾಕಿ ಮೃದುವಾಗಿ ಕಲಸಿ. ಹತ್ತು ನಿಮಿಷ ಬಿಟ್ಟು ಜಾಮೂನ್ ಮಾಡಿ.
ಸಕ್ಕರೆ ಪಾಕ ಮಾಡುವ ವಿಧಾನ: ಪಾತ್ರೆಯಲ್ಲಿ ಒಂದು ಬಟ್ಟಲು ಸಕ್ಕರೆ, ಒಂದು ಬಟ್ಟಲು ನೀರು ಹಾಕಿ ಕುದಿಸಿ. ಎಳೆ ಪಾಕ ಬಂದ ಮೇಲೆ ಗ್ಯಾಸ್ ಆಫ್ ಮಾಡಿ. ಸ್ವಲ್ಪ ಏಲಕ್ಕಿ ಪುಡಿ ಹಾಕಿ.
ಬಾ ಕಾಹು ಸಿಹಿ ಹೋಳಿಗೆ
ಬೇಕಾಗುವ ಪದಾರ್ಥಗಳು: 1 ಬಟ್ಟಲು ಸೂಜಿ ರವಾ, 1 ಬಟ್ಟಲು ಬಾಕಾಹು, ಒಂದೂವರೆ ಬಟ್ಟಲು ಬೆಲ್ಲ ಮತ್ತು ಸ್ವಲ್ಪ ಏಲಕ್ಕಿ ಪುಡಿ.
ಮಾಡುವ ವಿಧಾನ: ಗ್ಯಾಸಿನ ಮೇಲೆ ಮೊದಲು ಒಂದು ಪಾತ್ರೆಯನ್ನು ಇಡಿ. ಎರಡು ಬಟ್ಟಲು ನೀರು ಹಾಕಿ. ಬೆಲ್ಲವನ್ನು ಪುಡಿ ಮಾಡಿ ಈ ನೀರಿಗೆ ಹಾಕಿ. ಬೆಲ್ಲ ಕರಗಿದ ಮೇಲೆ ಆ ನೀರನ್ನು ಸೋಸಬೇಕು. ನೀರು ಚೆನ್ನಾಗಿ ಕುದಿದ ಮೇಲೆ ಸೂಜಿ ರವೆ ಸೇರಿಸಿ, ಗಂಟಿಲ್ಲದಂತೆ ಚೆನ್ನಾಗಿ ತಿರುವಬೇಕು. ಒಂದು ಸ್ಪೂನ್ ತುಪ್ಪ ಸ್ವಲ್ಪ ಏಲಕ್ಕಿ ಪೌಡರ್ ಹಾಕಿ. ಚೆನ್ನಾಗಿ ಬೆಂದ ಮೇಲೆ ಕೆಳಗಿಳಿಸಿ ಅದಕ್ಕೆ ಬಾಕಾಹು ಸೇರಿಸಬೇಕು.
ಕಣಕ ಮಾಡುವ ವಿಧಾನ: ಅರ್ಧ ಭಾಗ ಮೈದಾ ಪುಡಿ ಅರ್ಧ ಭಾಗ ಬಾಕಾಹು ಸೇರಿಸಿ ಒಂದು ಸ್ಪೂನ್ ತುಪ್ಪ ಹಾಕಿ ಹಿಟ್ಟು ಕಲಸಿಕೊಳ್ಳಿ.
ಮುಂದಿನ ಕ್ರಮ ಮಾಮೂಲಿ ಹೋಳಿಗೆ ಮಾಡುವಂತೆಯೇ.
ಬಾಕಾಹು ಖಾರದ ಹೋಳಿಗೆ
ಬೇಕಾಗುವ ಪದಾರ್ಥಗಳು: ಒಂದು ಬಟ್ಟಲು ಅಕ್ಕಿ ಹಿಟ್ಟು, ಒಂದು ಬಟ್ಟಲು ಬಾಕಾಹು, ಸ್ವಲ್ಪ ಉಪ್ಪು, ಜೀರಿಗೆ, ಹಸಿ ಮೆಣಸಿಕಾಯಿ ಕಾಳುಮೆಣಸಿನ ಹುಡಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ: ಮೊದಲು ಗ್ಯಾಸಿನ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎರಡೂವರೆ ಬಟ್ಟಲು ನೀರು ಹಾಕಿ. ಮಸಾಲೆ ಪದಾರ್ಥಗಳನ್ನು ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ. ನೀರು ಚೆನ್ನಾಗಿ ಕುದಿದ ಮೇಲೆ ಅಕ್ಕಿ ಹಿಟ್ಟು ಮತ್ತು ರುಬ್ಬಿದ ಮಸಾಲೆ ಹಾಕಿ ಗಂಟಾಗದ ರೀತಿ ಚೆನ್ನಾಗಿ ತಿರುವಿ. ಹಿಟ್ಟು ಬೆಂದಮೇಲೆ ಬಾಕಾಹು ಪೌಡರ್ ಹಾಕಿ ಮಿಶ್ರ ಮಾಡಿ.
ಕಣಕ ಮಾಡಿಕೊಂಡು, ಮುಂದೆ ಮಾಮೂಲಿ ಹೋಳಿಗೆ ಮಾಡುವ ಕ್ರಮ ಅನುಸರಿಸಿ ಇದನ್ನೂ ಮಾಡಬಹುದು.
- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key Words: Banana Flour, Dry Banana Flour, Banana Powder, Bakahu, Recipe, ಬಾಕಾಹು, ಬಾಳೆ ಕಾಯಿ ಹುಡಿ, ಬಾಕಾಹು ಆಂದೋಲನ, ಸವಿರುಚಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ