ಬಾಗಲಕೋಟ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ದಂಪತಿಗಳು ರವಿವಾರ ಬೆಳಿಗ್ಗೆ ಸುಕ್ಷೇತ್ರ ಬಾದಾಮಿ-ಬನಶಂಕರಿ ದೇವಿ ದರ್ಶನ ಪಡೆದರು. ನಂತರ ಈಶ್ವರಪ್ಪ ದಂಪತಿಗಳನ್ನು ಸಂಸದ ಗದ್ದಿಗೌಡರ ಮತ್ತು ಇತರರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಜಿ.ಪಂ.ಸದಸ್ಯರಾದ ಆಸೆಂಗೆಪ್ಪ ನಕ್ಕರಗುಂದಿ, ವೀರೇಶ ಉಂಡೋಡಿ, ಮಾಜಿ ತಾ.ಪಂ.ಅಧ್ಯಕ್ಷ ಪ್ರಮೋದ ಕವಡಿಮಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕಾಂತ ಉದಗಟ್ಟಿ, ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ರೇವಣಸಿದ್ದಪ್ಪ ನೋಟಗಾರ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಹನಮಂತ ದೇವರಮನಿ, ಶಿವಾನಂದ ಶಿಂಗನ್ನವರ, ಶಿವನಗೌಡ ಸುಂಕದ ಸೇರಿದಂತೆ ಮುಂತಾದವರು ಹಾಜರಿದ್ದರು. ಬನಶಂಕರಿ ದೇವಿಯ ದರ್ಶನ ಪಡೆದು ನಂತರ ಬಾಗಲಕೋಟೆಗೆ ತೆರಳಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ