ಸವಿರುಚಿ: ಬಾಕಾಹುವಿನಿಂದ ಇನ್ನಷ್ಟು ತಿನಿಸುಗಳು- ಹೋಳಿಗೆ, ಮೋದಕ, ಚಂದ್ರಹಾರ....

Upayuktha
0



ಬಾಕಾಹು ಸುರಂಗದ ಹೋಳಿಗೆ


ಬೇಕಾಗುವ ಸಾಮಗ್ರಿಗಳು: ಒಂದು ಬಟ್ಟಲು ಬಾಕಾಹು, ಎರಡು ಚಮಚ ಅರಿಶಿನ, ಎರಡು ಚಮಚ ಚಿರೋಟಿ ರವೆ, ಸೂಸಲು ರೆಡಿ ಮಾಡಲು ಒಂದು ಬಟ್ಟಲು ಒಣ ಕೊಬ್ಬರಿ, ಒಂದು ಬಟ್ಟಲು ಹುರಿಗಡಲೆ ಪುಡಿ, ಸ್ವಲ್ಪ ಏಲಕ್ಕಿ ಪುಡಿ, ಅರ್ಧ ಬಟ್ಟಲು ಬೆಲ್ಲ, ನಾಲ್ಕು ಚಮಚೆ ಗಸಗಸೆ, ನಾಲ್ಕು ಎಳ್ಳು.


ಮಾಡುವ ವಿಧಾನ: ಮೊದಲು ಬಾಕಾಹುಗೆ ಸ್ವಲ್ಪ ಅರಿಶಿನ, ಚಿರೋಟಿ ರವೆ ಸೇರಿಸಿ ಮಿಶ್ರ ಮಾಡಿಕೊಳ್ಳಿ. ಇದನ್ನು ಬಿಸಿಹಾಲು ಹಾಕಿ ಚೆನ್ನಾಗಿ ಗಟ್ಟಿಯಾಗಿ ಕಲಸಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ಒಣಕೊಬ್ಬರಿ, ಹುರಿಗಡಲೆ ಹುಡಿ, ಏಲಕ್ಕಿ, ಎಳ್ಳು, ಗಸಗಸೆ, ಬೆಲ್ಲ- ಎಲ್ಲವನ್ನೂ ಮಿಶ್ರ ಮಾಡಿ ಮಿಕ್ಸಿಯಲ್ಲಿ ಹಾಕಿ ಓಡಿಸಬೇಕು. ನಂತರ ಕಲಸಿಟ್ಟ ಹಿಟ್ಟನ್ನು ಲಟ್ಟಿಸಿ ತವಾದ ಮೇಲೆ ಬೇಯಿಸಿ. ತವಾದ ಮೇಲಿದ್ದಾಗಲೇ ರೆಡಿ ಮಿಶ್ರಣವನ್ನು ಹಾಕಿ ಎರಡೂ ಬದಿ ಮಡಚಿ ಬೇಯಿಸಬೇಕು.


ಬಾಕಾಹು ಮೋದಕ:

ಬೇಕಾಗುವ ಸಾಮಗ್ರಿಗಳು: ಒಂದು ಬಟ್ಟಲು ಬಾಕಾಹು, ಒಂದು ಬಟ್ಟಲು ಎಲ್ಲಾ ಥರದ ಒಣ ಹಣ್ಣುಗಳು ( ಡ್ರೈ ಫ್ರುಟ್ಸ್), ಬೆಲ್ಲ (ಬೇಕಾದರೆ), ಎರಡು ಚಮಚೆ ಚಿರೋಟಿ ರವಾ, ಅರ್ಧ ಕಪ್ ಹಾಲು, ಸ್ವಲ್ಪ ಏಲಕ್ಕಿ ಪುಡಿ ಮತ್ತು ಕರಿಯಲು ಎಣ್ಣೆ (ಹಬೆಯಲ್ಲೂ ಮಾಡಬಹುದು)


ಮಾಡುವ ವಿಧಾನ: ಮೊದಲಿಗೆ ಬಾಕಾಹುವನ್ನು ಚಿರೋಟಿ ರವಾ ಮತ್ತು ಬಿಸಿ ಹಾಲು ಸೇರಿಸಿ ಗಟ್ಟಿಯಾಗಿ ಕಲಸಬೇಕು. ನಂತರ ಎಲ್ಲ ಡ್ರೈ ಫ್ರುಟ್ಸ್ ಪುಡಿ ಮಾಡಿ ಅದಕ್ಕೆ ಬೆಲ್ಲ ಮತ್ತು ಏಲಕ್ಕಿ ಪುಡಿ ಸೇರಿಸಿ ಮಿಶ್ರಮಾಡಿಕೊಳ್ಳಬೇಕು. ನಂತರ ಕಲಸಿದ ಹಿಟ್ಟನ್ನು ದುಂಡಾಗಿ ಲಟ್ಟಿಸಿ ಡ್ರೈ ಫ್ರುಟ್ಸ್ ಪುಡಿಯನ್ನು ಮೋದಕಕ್ಕೆ ತುಂಬಬೇಕು. ಅನಂತರ ಎಣ್ಣೆಯಲ್ಲಿ ಕರಿಯಬೇಕು.


ಬಾಕಾಹು ಚಂದ್ರಹಾರ

ಬೇಕಾಗುವ ಸಾಮಗ್ರಿಗಳು :  ಒಂದು ಬಟ್ಟಲು ಬಾಕಾಹು, ಒಂದು ಬಟ್ಟಲು ಹಸಿ ಕೊಬ್ಬರಿ, ಒಂದು ಬಟ್ಟಲು ಬೆಲ್ಲ, ತಲಾ 8 -10 ಬಾದಾಮಿ ಮತ್ತು ಗೋಡಂಬಿ, ಒಂದು ಲೀಟರ್ ಹಾಲು, ಸ್ವಲ್ಪ ಗಸಗಸೆ, ಏಲಕ್ಕಿ ಪುಡಿ, ಸ್ವಲ್ಪ ಅರಿಶಿನ ಮತ್ತು ಉಪ್ಪು.


ಮಾಡುವ ವಿಧಾನ : ಬಾಕಾಹುವಿಗೆ ಉಪ್ಪು ಮತ್ತು ಅರಿಶಿನ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಬೇಕು. ಇನ್ನೊಂದು ಪಾತ್ರೆಯಲ್ಲಿ ಹಾಲು ತೆಗೆದುಕೊಳ್ಳಿ. ಅದಕ್ಕೆ ರುಬ್ಬಿದ ಹಸಿ ಕೊಬ್ಬರಿ, ಬಾದಾಮಿ, ಗೋಡಂಬಿ, ಗಸಗಸೆ ಮತ್ತು ಏಲಕ್ಕಿಗಳ ಮಿಶ್ರಣವನ್ನು ಹಾಕಿ ಕುದಿಸಬೇಕು. ನಂತರ ಅದಕ್ಕೆ ಬೆಲ್ಲ ಸೇರಿಸಿ, ಕುದಿದ ನಂತರ ಕೆಳಗಿಳಿಸಿ. 


ಕಲಸಿದ ಹಿಟ್ಟನ್ನು ಲಟ್ಟಿಸಿ ಕರಿಯಬಹುದು ಅಥವಾ ಚಪಾತಿಯ ರೀತಿಯಲ್ಲಿ ಲಟ್ಟಿಸಿಕೊಳ್ಳಬಹುದು. ಬೇಯಿಸಿದ / ಕರಿದ ಚಂದ್ರಹಾರದ ಮೇಲ್ಭಾಗಕ್ಕೆ ಹಿಂದೆ ಕುದಿಸಿಟ್ಟ ದ್ರಾವಣ ಹಾಕಿದರೆ ಅದು ಸೇವನೆಗೆ ರೆಡಿ.

ಪಾಕ: ಸರೋಜ ಪಾಟೀಲ್ - 99007 69719  ( ಸಂಜೆ 6 - 8)


Key Words: Banana Flour, Banana Powder, banana flour recipes, Holige, Bakahau, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ, ಬಾಕಾಹು ಅಭಿಯಾನ


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top